
ನವದೆಹಲಿ(ಫೆ.01): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ವರ್ಷಾರಂಭದಲ್ಲೇ ಮಗಳನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದರು. ಮಾಧ್ಯಮದಿಂದ ಆದಷ್ಟು ದೂರವೇ ಉಳಿದಿದ್ದ ವಿರುಷ್ಕಾ ಜೋಡಿ ಇದೀಗ ತಮ್ಮ ಮುದ್ದಾದ ಮಗಳಿಗೆ ಹೆಸರಿಟ್ಟಿದ್ದು, ಮೊದಲ ಬಾರಿಗೆ ಮಗಳ ಫೋಟೋವನ್ನು ಜಗತ್ತಿನೆದುರು ಅನಾವರಣ ಮಾಡಿದ್ದಾರೆ.
ಹೌದು, ವಿರುಷ್ಕಾ ಮಗಳಿಗೆ ವಾಮಿಕಾ ಎಂದು ಹೆಸರಿಟ್ಟಿದ್ದು, ಅನುಷ್ಕಾ ಶರ್ಮಾ ತಮ್ಮ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಾಮಿಕಾ ಎಂದರೆ ದುರ್ಗಾ ದೇವತೆ ಎನ್ನುವ ಅರ್ಥ ಬರುತ್ತದೆ.
ನಾವು ಪ್ರೀತಿಯಿಂದ ಜೀವನ ನಡೆಸುತ್ತಿದ್ದೆವು, ಇದೀಗ ವಾಮಿಕಾ ನಮ್ಮ ಬದುಕಲ್ಲಿ ಬಂದ ಬಳಿಕ ಆ ಪ್ರೀತಿ ಇನ್ನೊಂದು ಸ್ತರಕ್ಕೇರಿದೆ. ನೋವು, ನಲಿವು, ಕಣ್ಣೀರು, ಬೇಸರ ಎಲ್ಲಾ ರೀತಿಯ ಭಾವನೆಗಳು ಕೆಲವೊಮ್ಮೆ ಒಂದೇ ಕ್ಷಣದಲ್ಲಿ ಭಾಸವಾಗುತ್ತಿವೆ. ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲವಾದರೂ ನಮ್ಮ ಹೃದಯ ಪ್ರೀತಿಯಿಂದ ತುಂಬಿ ತುಳುಕುತ್ತಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಗಳಿಗೆ ಧನ್ಯವಾದಗಳು ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಪುತ್ರನ ಮೊದಲ ವಿಮಾನ ಯಾನ: ಎಷ್ಟು ಕ್ಯೂಟಾಗಿ ನಗ್ತಾನೆ ನೋಡಿ
ಜನವರಿ 11ರಂದು ವಿರುಷ್ಕಾ ದಂಪತಿ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಖಚಿತಪಡಿಸಿದ್ದರು. ಇದೀಗ ತಮ್ಮ ಮಗುವಿಗೆ ವಾಮಿಕಾ ಎಂದು ವಿರುಷ್ಕಾ ದಂಪತಿ ಹೆಸರಿಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.