ತಂಡದ ಎಲ್ಲಾ 10 ಬ್ಯಾಟರ್‌ಗಳು ರಿಡೈರ್ಡ್‌ ಔಟ್‌, ಪಂದ್ಯದಲ್ಲಿ ದಾಖಲಾಯ್ತು ಒಟ್ಟು 15 ಡಕ್‌!

Published : May 10, 2025, 05:21 PM ISTUpdated : May 10, 2025, 05:22 PM IST
ತಂಡದ ಎಲ್ಲಾ 10 ಬ್ಯಾಟರ್‌ಗಳು ರಿಡೈರ್ಡ್‌ ಔಟ್‌, ಪಂದ್ಯದಲ್ಲಿ ದಾಖಲಾಯ್ತು ಒಟ್ಟು 15 ಡಕ್‌!

ಸಾರಾಂಶ

ಯುಎಇ ಮಹಿಳಾ ತಂಡವು ಕತಾರ್ ವಿರುದ್ಧ ಟಿ20 ಪಂದ್ಯದಲ್ಲಿ ವಿಲಕ್ಷಣ ಗೆಲುವು ದಾಖಲಿಸಿದೆ. ಯಾವುದೇ ವಿಕೆಟ್ ನಷ್ಟವಿಲ್ಲದೆ 192 ರನ್ ಗಳಿಸಿದ್ದ ಯುಎಇ, ತನ್ನ 19 ಬ್ಯಾಟರ್‌ಗಳನ್ನು ರಿಟೈರ್ಡ್ ಔಟ್ ಮಾಡಿಕೊಂಡಿತು. ಕತಾರ್ ತಂಡವನ್ನು ಕೇವಲ 29 ರನ್‌ಗಳಿಗೆ ಆಲೌಟ್ ಮಾಡಿ 163ರನ್‌ಗಳ ಭಾರಿ ಅಂತರದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ದಾಖಲೆಯ 15ಸೊನ್ನೆಗಳು ದಾಖಲಾದವು. ಓಜಾ 51 ಎಸೆತಗಳಲ್ಲಿ ಶತಕ ಬಾರಿಸಿದರು.

ಬೆಂಗಳೂರು (ಮೇ.10):  ಬ್ಯಾಂಕಾಕ್‌ನಲ್ಲಿ ಯುಎಇ ಮತ್ತು ಕತಾರ್ ನಡುವಿನ ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಅರ್ಹತಾ ಪಂದ್ಯದಲ್ಲಿ ವಿಲಕ್ಷಣ ಘಟನೆ ನಡೆದಿದೆ. ಯುಎಇ, 16 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 192 ರನ್ ಗಳಿಸಿದ್ದ ವೇಳೆ ತನ್ನ 10 ಬ್ಯಾಟರ್‌ಗಳನ್ನು ರಿಟೈರ್ಡ್‌ ಔಟ್‌ ಮಾಡಿತು. ಪುರುಷ ಅಥವಾ ಮಹಿಳಾ ಟಿ20ಯಲ್ಲಿ ತಂಡವೊಂದು ಎಲ್ಲಾ 10 ಬ್ಯಾಟರ್‌ಗಳನ್ನು ನಿವೃತ್ತಿ ಮಾಡುವ ಮೂಲಕ ತನ್ನನ್ನು ತಾನೇ ಆಲೌಟ್‌ ಮಾಡಿಕೊಂಡ ಮೊದಲ ನಿದರ್ಶನ ಇದಾಗಿದೆ.

ಆ ಬಳಿಕ ಯುಎಇ ತಂಡವು ಕತಾರ್ ಅನ್ನು ಕೇವಲ 29 ರನ್‌ಗಳಿಗೆ ಆಲೌಟ್ ಮಾಡಿತು. ಈ ಇನ್ನಿಂಗ್ಸ್‌ನಲ್ಲಿ ಏಳು ಸೊನ್ನೆಗಳು ದಾಖಲಾದವು. 27.1 ಓವರ್‌ಗಳಷ್ಟೇ ನಡೆದ ಪಂದ್ಯದಲ್ಲಿ 163 ರನ್‌ಗಳ ಬೃಹತ್ ಗೆಲುವನ್ನು ಯುಎಇ ತಂಡ ಸಾಧಿಸಿತು. ಯುಎಇ ತಂಡದ ಎಂಟು ಬ್ಯಾಟರ್‌ಗಳು ಸೊನ್ನೆಗೆ ಔಟ್ ಆಗಿದ್ದರಿಂದ, ಈ ಪಂದ್ಯದಲ್ಲಿ ದಾಖಲೆಯ 15 ಸೊನ್ನೆಗಳು ದಾಖಲಾಗಿದ್ದು, ಇದು ಮಹಿಳಾ ಟಿ20ಯಲ್ಲಿ ಅತಿ ಹೆಚ್ಚು ಡಕ್‌ ಎನಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಯುಎಇ ತಂಡದ ಪರವಾಗಿ ನಾಯಕಿ ಎಶಾ ಓಜಾ ಹಾಗೂ ತೀರ್ಥಾ ಸತೀಶ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ್ದರು. ಇಶಾ ಓಜಾ 113 ರನ್‌ ಬಾರಿಸಿದ್ದರೆ, ಸತೀಶ್‌ 74 ರನ್‌ ಬಾರಿಸಿದ್ದರು. ಈ ಹಂತದ ವೇಳೆ ಇನ್ನಿಂಗ್ಸ್‌ಅನ್ನು ಡಿಕ್ಲೇರ್‌ ಮಾಡಲು ಬಯಸಿದ್ದರು. ಆದರೆ, ಟಿ20 ನಿಯಮ ಡಿಕ್ಲೇರ್‌ಗೆ ಅನುಮತಿ ನೀಡುವುದಿಲ್ಲ. ಇದಕ್ಕಾಗಿ ಯುಎಇ ತಂಡದ ನಾಯಕಿ ಇಶಾ ಓಜಾ ತಂಡದ ಎಲ್ಲಾ ಬ್ಯಾಟರ್‌ಗಳನ್ನು ರಿಟೈರ್ಡ್‌ ಔಟ್‌ ಮಾಡಲು ನಿರ್ಧಾರ ಮಾಡಿದರು. ತಂಡದ ಮೊತ್ತ 192 ರನ್‌ ಆಗಿದ್ದಾಗ ಇಶಾ ಹಾಗೂ ಸತೀಶ್ ಮೈದಾನದಿಂದ ಹೊರನಡೆದರೆ, ನಂತರ ಉಳಿದ ಜೋಡಿ ಬ್ಯಾಟರ್‌ಗಳು ಕ್ರೀಸ್‌ಗೆ ಬಂದು ವಾಪಾಸ್‌ ಹೋಗುವ ಮೂಲಕ ರಿಟೈರ್ಡ್‌ ಔಟ್‌ ಆಗಿದ್ದರು. ಇದರಿಂದಾಗಿ ಕೊನೆಗೆ ಯುಎಇ 192 ರನ್‌ಗೆ ಆಲೌಟ್‌ ಆಯಿತು.

ಓಜಾ 51 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಟಿ20ಯಲ್ಲಿ ಆಕೆಯ ಮೂರನೇ ಶತಕ. ಇನ್ನೊಂದೆಡೆ ತೀರ್ಥಾ ಸತೀಶ್‌, ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದರಿಂದಾಗಿ ತಂಡ 14 ಓವರ್‌ಗಳಲ್ಲೇ 150 ರನ್‌ ಗಡಿ ದಾಟಿತ್ತು. ಓಜಾ 14 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿದರೆ, ಸತೀಶ್‌ 11 ಬವಂಡರಿ ಬಾರಿಸಿದ್ದರು. 16ನೇ ಓವರ್‌ನಲ್ಲಿ ಓಜಾ ನಾಲ್ಕು ಎಸೆತಗಳಲ್ಲಿ ನಾಲ್ಕು ಬೌಂಡರಿ ಬಾರಿಸಿದಾಗ  ತಂಡದ ರನ್‌ರೇಟ್‌ 12 ಆಗಿತ್ತು. ಈ ವೇಳೆ ರಿಟೈರ್ಡ್‌ ಔಟ್‌ ಆಗಲು ತೀರ್ಮಾನಿಸಿದರು. ಇದು ಮಹಿಳಾ ಟಿ20ಯಲ್ಲಿ ಅಲೌಟ್‌ನ ಗರಿಷ್ಠ ಸ್ಕೋರ್‌ ಎನಿಸಿದೆ.

ಚೇಸಿಂಗ್‌ ಮಾಡಿದ ಕತಾರ್‌ ಕೇವಲ 11.1 ಓವರ್‌ ಆಟವಾಡಿದರು. ಮೂರು ಬ್ಯಾಟರ್‌ಗಳು ಮಾತ್ರವೇ ಖಾತೆ ತೆರೆಯಲು ಯಶ ಕಂಡರೆ, ಒಬ್ಬ ಬ್ಯಾಟರ್‌ ಮಾತ್ರ 5ಕ್ಕಿಂತ ಅಧಿಕ ರನ್‌ ಬಾರಿಸಲು ಸಾಧ್ಯವಾಯಿತು.ಆರಂಭಿಕ ಆಟಗಾರ್ತಿ ರಿಜ್ಫಾ ಬಾನೊ ಎಮ್ಯಾನುಯೆಲ್ 20 ರನ್ ಗಳಿಸಿ ಗರಿಷ್ಠ ಸ್ಕೋರರ್ ಗಳಿಸಿದರು ಮತ್ತು ಐದು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳು ಅವರ ಮುಂದೆ ಬಿದ್ದವು. ಎಡಗೈ ಸ್ಪಿನ್ನರ್ ಮಿಚೆಲ್ ಬೋಥಾ 11 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಎಂಟನೇ ಓವರ್‌ನಲ್ಲಿ 5 ರನ್‌ಗಳಿಗೆ 26 ರನ್‌ಗಳೊಂದಿಗೆ ಎಮ್ಯಾನುಯೆಲ್ ರನೌಟ್ ಆದ ನಂತರ, ಕತಾರ್ ಕೇವಲ 20 ಎಸೆತಗಳನ್ನು ಮಾತ್ರ ಆಡಿತು ಮತ್ತು ಒಟ್ಟು ಮೊತ್ತಕ್ಕೆ ಕೇವಲ ಮೂರು ರನ್‌ಗಳನ್ನು ಸೇರಿಸಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ