ಕೋಲ್ಕತ್ತ ನೈಟ್‌ರೈಡರ್ಸ್ ವಿರುದ್ಧ ನಾಳೆ ನವದೆಹಲಿಯಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಬ್ಯಾಟ್‌ಗಳು ಸೇರಿದಂಎ ಇತರ ವಸ್ತುಗಳು, ಲಕ್ಷಾಂತರ ಬೆಲೆಬಾಳುವ ಕಿಟ್‌ಗಳ ಕಳ್ಳತನವಾಗಿದೆ. ಈ ಕುರಿತಾಗಿ ತನಿಖೆ ಕೂಡ ಆರಂಭವಾಗಿದೆ.
ನವದೆಹಲಿ (ಏ.19): ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಪಾಲಿಗೆ ಆಘಾತಕಾರಿ ಸುದ್ದಿ ತಲುಪಿದೆ. ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ಆಡುವ ಮುನ್ನವೇ ತಂಡದ ಆಟಗಾರರ ಬ್ಯಾಟ್‌ಗಳು ಮತ್ತು ಲಕ್ಷಾಂತರ ರೂಪಾಯಿ ಬೆಲೆಬಾಳುವ ಇತರ ಉಪಕರಣಗಳು ಕಳ್ಳತನವಾಗಿದೆ. ಘಟನೆಯ ಕುರಿತು ವ್ಯಾಪಕ ತನಿಖೆ ನಡೆಯುತ್ತಿರುವ ನಡುವೆಯೇ, ಆಟಗಾರರ ಭದ್ರತೆಯ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಆತಂಕ ವ್ಯಕ್ತಪಡಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿರುವ ವರದಿಯ ಪ್ರಕಾರ, ಡೆಲ್ಲಿ ಆಟಗಾರರ 16 ಬ್ಯಾಟ್‌ಗಳು, ಪ್ಯಾಡ್‌ಗಳು, ಶೂ, ಥೈಪ್ಯಾಡ್ (ತೊಡೆಯ ಭಾಗಕ್ಕೆ ಕಟ್ಟುವ ಪ್ಯಾಡ್) ಮತ್ತು ಗ್ಲೌಸ್‌ಗಳು ಖಾನೆಯಾಗಿವೆ. ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಪಂದ್ಯವಾಡಿ, ರಾಜಧಾನಿಗೆ ವಾಪಸಾದ ಬಳಿಕ ದೆಹಲಿ ಆಟಗಾರರ ಕಿಟ್ ಬ್ಯಾಗ್ ಹಾಗೂ ಕಿಟ್ ಬ್ಯಾಗ್‌ನ ಒಳಗಿನ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ. ತಕ್ಷಣವೇ ಈ ವಿಚಾರವನ್ನು ತಂಡದ ಲಾಜಿಸ್ಟಿಕ್ಸ್ ವಿಭಾಗ, ಪೊಲೀಸ್ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಡೆಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ತಿಳಿಸಿದೆ.
ತಂಡದ ಆಟಗಾರರು ತಮ್ಮ ತಮ್ಮ ಕಿಟ್ ಬ್ಯಾಗ್‌ಗಳನ್ನು ತೆರೆದು ನೋಡಿದಾಗ ಎಲ್ಲರಿಗೂ ಆಘಾತ ಕಾದಿತ್ತು. ಬಹುತೇಕ ಎಲ್ಲಾ ಆಟಗಾರರ ಬ್ಯಾಗ್‌ಗಳಲ್ಲಿ ಒಂದಲ್ಲಾ ಒಂದು ವಸ್ತುಗಳು ನಾಪತ್ತೆಯಾಗಿದ್ದವು. ನಮ್ಮ ತಂಡದೊಂದಿಗೆ ಇಂಥ ಘಟನೆ ಆಗಿರುವುದು ಇದೇ ಮೊದಲ. ತಕ್ಷಣವೇ ಈ ವಿಚಾರವನ್ನು ತಂಡದ ಲಾಜಿಸ್ಟಿಕ್ಸ್ ವಿಭಾಗ, ಪೊಲೀಸ್ ಹಾಗೂ ಇಂದಿರಾಗಾಂಧಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನೀಡಲಾಗಿದೆ. ಈ ಕುರಿತಾದ ತನಿಖೆ ಜಾರಿಯಲ್ಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೂಲಗಳು ಖಚಿತಪಡಿಸಿವೆ.
ಈ ಕುರಿತಂತೆ ಏರ್‌ಪೋರ್ಟ್ ಪೊಲೀಸ್ ಠಾಣೆಯ ದೇವೇಶ್ ಕುಮಾರ್ ಮಹ್ಲಾ ಮಾತನಾಡಿದ್ದಾರೆ. ಮಂಗಳವಾರ ಸಂಜೆಯ ವೇಳೆಗೆ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಆಟಗಾರರು ತಮ್ಮ ಕಿಟ್‌ನಲ್ಲಿದ್ದ ಕೆಲವು ವಸ್ತುಗಳು ನಾಪತ್ತೆಯಾಗಿವೆ ಎಂದು ಹೇಳಿದ್ದರು. ನಮ್ಮ ಡ್ಯೂಟಿ ಆಫೀಸರ್ ಅವರಿಗೆ ಈ ಕುರಿತಾಗಿ ಲಿಖಿತ ದೂರು ನೀಡುವಂತೆ ಅದರಲ್ಲಿ ಎಲ್ಲಾ ಸಂಪೂರ್ಣ ವಿವರಗಳನ್ನು ಬರೆಯುವಂತೆ ಪೇಪರ್ ಕೂಡ ನೀಡಿದ್ದರು. ಈ ಹಂತದಲ್ಲಿ ಅವರು ನಾವು ಎಲ್ಲಾ ಮಾಹಿತಿಗಳನ್ನು ತಂಡದಿಂದ ಪಡೆದುಕೊಳ್ಳಲಿದ್ದು ಆ ಮೂಲಕ ದೂರು ದಾಖಲು ಮಾಡಲಿದ್ದೇವೆ ಎಂದು ತಿಳಿಸಿದರು. ಈ ಕುರಿತಾಗಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.
ಕನ್ನಡಕ್ಕೆ ಅವಮಾನ ಮಾಡಿದ್ರಾ ಆರ್‌ಸಿಬಿ ಮೆಂಟರ್, ಟೆನಿಸ್ ತಾರೆ ಸಾನಿಯಾ ಮಿರ್ಜಾ?
ಸತತ ಐದು ಪಂದ್ಯಗಳ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2023ರ ತನ್ನ 6ನೇ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 20 ರಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಅಭಿಯಾನದಲ್ಲಿ ಉಳಿದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿನ ದಾರಿ ಹಿಡಿಯುವುದು ಬಹಳ ಅಗತ್ಯವಾಗಿದೆ.
ಮೇ ತಿಂಗಳಿನಿಂದಲೇ ಆರಂಭ, ಮೆಟಾದಿಂದ ಮತ್ತೆ 10 ಸಾವಿರ ಉದ್ಯೋಗಿಗಳ ವಜಾ!