ACC U19 Asia Cup 2021: ಭಾರತಕ್ಕಿಂದು ಸೆಮೀಸ್‌ನಲ್ಲಿ ಬಾಂಗ್ಲಾದೇಶ ಸವಾಲು

Suvarna News   | Asianet News
Published : Dec 30, 2021, 09:16 AM IST
ACC U19 Asia Cup 2021: ಭಾರತಕ್ಕಿಂದು ಸೆಮೀಸ್‌ನಲ್ಲಿ  ಬಾಂಗ್ಲಾದೇಶ ಸವಾಲು

ಸಾರಾಂಶ

* ಅಂಡರ್ 19 ಏಷ್ಯಾಕಪ್‌ ಸೆಮೀಸ್‌ನಲ್ಲಿಂದು ಭಾರತ-ಬಾಂಗ್ಲಾದೇಶ ಕಾದಾಟ * ಬಾಂಗ್ಲಾದೇಶ ಮಣಿಸಿ ಫೈನಲ್‌ಗೇರುವ ಲೆಕ್ಕಾಚಾರದಲ್ಲಿದೆ ಭಾರತ ಕಿರಿಯರ ತಂಡ * ಬಾಂಗ್ಲಾದೇಶ ಅತ್ಯುತ್ತಮ ಲಯದಲ್ಲಿದ್ದು ಭಾರತಕ್ಕೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ   

ಶಾರ್ಜಾ(ಡಿ.30): ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ (ACC U19 Asia Cup 2021) ಟೂರ್ನಿಯ ಸೆಮಿಫೈನಲ್‌ನಲ್ಲಿ ಗುರುವಾರ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಭಾರತ, ಅಂತಿಮ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿ ಸೆಮೀಸ್‌ಗೇರಿತ್ತು. ಬಾಂಗ್ಲಾದೇಶ ಅತ್ಯುತ್ತಮ ಲಯದಲ್ಲಿದ್ದು, ಯಶ್‌ ಧುಳ್‌ ನೇತೃತ್ವದ ತಂಡಕ್ಕೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. 

ಜಲಂದರ್ ಮೂಲದ ಹರ್ನೂರ್ ಸಿಂಗ್ ಉತ್ತಮ ಲಯದಲ್ಲಿದ್ದು, ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಕೇವಲ 3 ಪಂದ್ಯಗಳಿಂದ 77ರ ಬ್ಯಾಟಿಂಗ್ ಸರಾಸರಿಯಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 231 ರನ್ ಬಾರಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ನಾಕೌಟ್ ಪಂದ್ಯದಲ್ಲಿ ಮತ್ತೊಮ್ಮೆ ಹರ್ನೂರ್ ಸಿಂಗ್ ಅವರಿಂದ ದೊಡ್ಡ ಇನಿಂಗ್ಸ್‌ ನಿರೀಕ್ಷಿಸಲಾಗಿದೆ. 

ಇನ್ನು ಮತ್ತೊಂದು ಸೆಮಿಫೈನಲ್‌ನಲ್ಲಿ ಏಷ್ಯಾದ ಎರಡು ಬಲಿಷ್ಠ ಕ್ರಿಕೆಟ್‌ ತಂಡಗಳಾದ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಸೆಣಸಲಿವೆ. ಸೆಮಿಫೈನಲ್‌ನಲ್ಲಿ ವಿಜೇತರಾಗುವ ಎರಡು ತಂಡವು ಡಿಸೆಂಬರ್ 31ರಂದು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. 

ಪಂದ್ಯ ಆರಂಭ: ಬೆಳಗ್ಗೆ 11ಕ್ಕೆ

ವರ್ಷದ ಟಿ20 ಆಟಗಾರ ರೇಸಲ್ಲಿ ರಿಜ್ವಾನ್‌, ಮಾರ್ಷ್‌

ದುಬೈ: ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಗುರುವಾರ ನಾಮನಿರ್ದೇಶನ ಅಂತಿಮಗೊಂಡಿದ್ದು, ಪಾಕಿಸ್ತಾನದ ವಿಕೆಟ್‌ ಕೀಪರ್‌ ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ (Mohammad Rizwan), ಆಸ್ಪ್ರೇಲಿಯಾದ ಆಲ್ರೌಂಡರ್‌ ಮಿಚೆಲ್‌ ಮಾರ್ಚ್‌‍(Mitchell Marsh), ಇಂಗ್ಲೆಂಡ್‌ನ ವಿಕೆಟ್‌ ಕೀಪರ್‌ ಬ್ಯಾಟರ್‌ ಜೋಸ್‌ ಬಟ್ಲರ್‌ (Jos Buttler) ಹಾಗೂ ಶ್ರೀಲಂಕಾದ ಸ್ಪಿನ್ನರ್‌ ವನಿಂದು ಹಸರಂಗ(Wanindu Hasaranga) ಪ್ರಶಸ್ತಿ ರೇಸ್‌ನಲ್ಲಿದ್ದಾರೆ. 

ಮೊಹಮ್ಮದ್ ರಿಜ್ವಾನ್‌ 2021ರಲ್ಲಿ 29 ಪಂದ್ಯಗಳಲ್ಲಿ 1,326 ರನ್‌ ಗಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ 627 ರನ್‌ ಗಳಿಸಿ, 8 ವಿಕೆಟ್‌ ಪಡೆದಿದ್ದಾರೆ. ಬಟ್ಲರ್‌ 589 ರನ್‌ ಗಳಿಸಿದ್ದು, ಹಸರಂಗ ಟಿ20 ವಿಶ್ವಕಪ್‌ನಲ್ಲಿ 16 ವಿಕೆಟ್‌ ಸೇರಿ ಒಟ್ಟು 20 ಪಂದ್ಯಗಳಲ್ಲಿ 36 ವಿಕೆಟ್‌ ಕಿತ್ತಿದ್ದಾರೆ. ಜನವರಿ 24ಕ್ಕೆ ವಿಜೇತರನ್ನು ಐಸಿಸಿ ಘೋಷಿಸಲಿದೆ.

Kohli Century Wait Continued : ಶತಕವಿಲ್ಲದೆ ಸತತ 2ನೇ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!

ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್‌ ಕೆಲ ತಿಂಗಳ ಹಿಂದಷ್ಟೇ ಯುಎಇನಲ್ಲಿ ಜರುಗಿದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸುವ ಮೂಲಕ ಆಸ್ಟ್ರೇಲಿಯಾ ತಂಡವು ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ 2021ರ ಟಿ20 ಪಂದ್ಯಾವಳಿಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.  

ಅಂಧರ ಕ್ರಿಕೆಟ್‌: ಬಾಂಗ್ಲಾ ವಿರುದ್ಧ ಭಾರತಕ್ಕೆ 3-0 ಜಯ

ಭೋಪಾಲ್‌: ಭಾರತ ಅಂಧರ ಕ್ರಿಕೆಟ್‌ ತಂಡ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಬುಧವಾರ ನಡೆದ ಅಂತಿಮ ಪಂದ್ಯವನ್ನು ಭಾರತ 177 ರನ್‌ಗಳಿಂದ ಗೆದ್ದುಕೊಂಡಿತು. 40 ಓವರಲ್ಲಿ ಭಾರತ 466 ರನ್‌ ಕಲೆಹಾಕಿತು. ದುರ್ಗಾ ರಾವ್‌ 173, ನಾಯಕ ಸುನಿಲ್‌ ರಮೇಶ್‌ 177 ರನ್‌ ಗಳಿಸಿದರು. ಬಾಂಗ್ಲಾದೇಶ 289 ರನ್‌ಗೆ ಆಲೌಟ್‌ ಆಯಿತು. ಟಿ20 ಸರಣಿಯನ್ನೂ ಭಾರತ 3-0 ಅಂತರದಲ್ಲಿ ಗೆದ್ದಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು
ಬ್ರೇಕ್ ಅಪ್ ಆಗೋರಿಗೆ ಮೂವ್ ಆನ್ ಆಗೋ ಬೆಸ್ಟ್ ಪಾಠ ಹೇಳಿದ ಸ್ಮೃತಿ ಮಂಧನಾ! ಕೊನೆಗೂ ಮೌನ ಮುರಿದ ಕ್ರಿಕೆಟರ್!