ಜೆರ್ಸಿ ಬದಲಿಸಲು ಹೋಗಿ ಬೌಂಡರಿ ಬಿಟ್ಟ ಫೀಲ್ಡರ್‌! ವಿಡಿಯೋ ವೈರಲ್

Suvarna News   | Asianet News
Published : Feb 03, 2021, 11:38 AM IST
ಜೆರ್ಸಿ ಬದಲಿಸಲು ಹೋಗಿ ಬೌಂಡರಿ ಬಿಟ್ಟ ಫೀಲ್ಡರ್‌! ವಿಡಿಯೋ ವೈರಲ್

ಸಾರಾಂಶ

ಕ್ಷೇತ್ರ ರಕ್ಷಣೆ ಮಾಡುವಾಗ ಯಾರಾದ್ರೂ ಜೆರ್ಸಿ ಬದಲಿಸುತ್ತಾರಾ? ಇಲ್ಲ ತಾನೆ, ಹೀಗೆ ಜೆರ್ಸಿ ಬದಲಿಸಲು ಹೋಗಿ ಫೀಲ್ಡರ್‌ವೊಬ್ಬ ಬೌಂಡರಿ ಬಿಟ್ಟ ಘಟನೆ ಅಬುಧಾಬಿ ಟಿ10 ಲೀಗ್‌ನಲ್ಲಿ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಬುಧಾಬಿ(ಫೆ.03): ಕ್ರಿಕೆಟ್‌ನಲ್ಲಿ ವಿಚಿತ್ರ ಪ್ರಸಂಗಗಳು ನಡೆಯತ್ತಲೇ ಇರುತ್ತವೆ. ಆದರೆ ಫೀಲ್ಡರ್‌ ಒಬ್ಬ ಆಟದ ಮಧ್ಯೆ ಜೆರ್ಸಿ ಬದಲಿಸಲು ಹೋಗಿ ಚೆಂಡನ್ನು ಬೌಂಡರಿಗೆ ಬಿಟ್ಟ ಪ್ರಸಂಗವನ್ನು ಅಭಿಮಾನಿಗಳು ಈ ಹಿಂದೆ ನೋಡಿರಲಿಲ್ಲ. ಅಂಥದ್ದೊಂದು ಪ್ರಸಂಗ ಅಬು ಧಾಬಿ ಟಿ10 ಪಂದ್ಯದಲ್ಲಿ ನಡೆದಿದೆ. 

ಯುಎಇ ತಂಡದ ಖ್ಯಾತ ಕ್ರಿಕೆಟಿಗ ರೋಹನ್‌ ಮುಸ್ತಾಫ, ಆಟದ ವೇಳೆ ಜೆರ್ಸಿ ಬದಲಿಸುವಾಗ ಚೆಂಡು ತಮ್ಮತ್ತ ಬರುವುದನ್ನು ಗಮಿನಿಸದೆ ಚೆಂಡನ್ನು ಬೌಂಡರಿಗೆ ಬಿಟ್ಟ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇಲ್ಲಿನ ಶೇಕ್‌ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಅಬುಧಾಬಿ ತಂಡವನ್ನು ಪ್ರತಿನಿಧಿಸುತ್ತಿದ್ದ ರೋಹನ್‌ ನಾರ್ಥನ್‌ ವಾರಿಯರ್ಸ್‌ ವಿರುದ್ದದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ.

ಮುಷ್ತಾಕ್ ಅಲಿ ಟ್ರೋಫಿ ಗೆಲುವನ್ನು ಕೊನೆಯುಸಿರೆಳೆದ ತಾಯಿಗೆ ಅರ್ಪಿಸಿದ ಅಶ್ವಿನ್‌..!

ನಿಕೋಲಸ್‌ ಪೂರನ್‌ ನೇತೃತ್ವದ ನಾರ್ಥನ್‌ ವಾರಿಯರ್ಸ್ ತಂಡ 124 ರನ್‌ಗಳ ಗುರಿ ಬೆನ್ನತ್ತಿತ್ತು. ಈ ವೇಳೆ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರೋಹನ್ ಮುಷ್ತಾಫ ತಮ್ಮತ್ತ ಬಾಲ್‌ ಬರುವುದನ್ನು ಗಮನಿಸದೇ ಜೆರ್ಸಿ ಹಾಕಿಕೊಳ್ಳುತ್ತಿರುವಾಗ ಚೆಂಡು ಬೌಂಡರಿ ಗೆರೆ ದಾಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಯುನೈಟೆಡ್ ಅರಬ್ ಎಮಿರೇಟ್ಸ್‌ ಪರ 32 ವರ್ಷದ ರೋಹನ್‌ ಮುಸ್ತಾಫ 39  ಏಕದಿ, 43 ಟಿ20 ಪಂದ್ಯಗಳನ್ನಾಡಿ 1 ಶತಕ ಹಾಗೂ 5 ಅರ್ಧಶತಕ ಸಹಿತ 1500ಕ್ಕೂ ಅಧಿಕ ರನ್‌ ಬಾರಿಸಿ ಗಮನ ಸೆಳೆದಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ