ಹುಟ್ಟುಹಬ್ಬದಂದೇ ಎಬಿ ಡಿವಿಲಿಯರ್ಸ್‌ನಿಂದ ಗುಡ್ ನ್ಯೂಸ್..?

Suvarna News   | Asianet News
Published : Feb 17, 2020, 12:34 PM IST
ಹುಟ್ಟುಹಬ್ಬದಂದೇ ಎಬಿ ಡಿವಿಲಿಯರ್ಸ್‌ನಿಂದ ಗುಡ್ ನ್ಯೂಸ್..?

ಸಾರಾಂಶ

ವಿಶ್ವ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ತಮ್ಮ 36ನೇ ಹುಟ್ಟುಹಬ್ಬದಂದೇ ಗುಡ್‌ ನ್ಯೂಸ್ ನೀಡಲು ರೆಡಿಯಾಗಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಜೊಹಾನ್ಸ್‌ಬರ್ಗ್(ಫೆ.17): ವಿಶ್ವಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ಮನ್, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಸೋಮವಾರ(ಫೆ.17)36ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಮ್ಮ ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಎಬಿಡಿ ಸಿಹಿ ಸುದ್ದಿಯೊಂದನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ.

ಹೌದು, ಹುಟ್ಟುಹಬ್ಬದ ದಿನದಂದೇ ಎಬಿ ಡಿವಿಲಿಯರ್ಸ್ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ. ಇದೇ ಶುಕ್ರವಾರ(ಫೆ.21)ದಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಲಿದ್ದು, ಎಬಿಡಿ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

ಐಪಿಎಲ್‌ನಲ್ಲಿ ವಿಕೆಟ್‌ ಕೀಪಿಂಗ್‌ ಮಾಡ್ತಾರಾ ಡಿವಿಲಿಯರ್ಸ್?

2018ರ ಐಪಿಎಲ್ ಬಳಿಕ ಅನಿರೀಕ್ಷಿತವೆಂಬಂತೆ 23 ಮೇ 2018ರಂದು ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಕಾಕತಾಳೀಯವೆಂದರೆ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಎಬಿಡಿ ಇದೀಗ ಮತ್ತೆ ನಿವೃತ್ತಿ ವಾಪಾಸ್ ಪಡೆದರೆ ಮತ್ತೆ ಆಸ್ಟ್ರೇಲಿಯಾ ವಿರುದ್ಧವೇ ಮೊದಲ ಪಂದ್ಯವನ್ನಾಡಿದಂತಾಗುತ್ತದೆ. 

ಎಬಿಡಿ ಈ ಹಿಂದೆಯೇ ನಿವೃತ್ತಿ ವಾಪಾಸ್ ಪಡೆದು ತಂಡಕೂಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. 2019ರ ಏಕದಿನ ವಿಶ್ವಕಪ್ ಟೂರ್ನಿಗೆ ತಾನು ಅಗತ್ಯವಿದ್ದರೆ ಲಭ್ಯವಿರುವುದಾಗಿ ತಿಳಿಸಿದ್ದರು. ಆದರೆ ಆಯ್ಕೆ ಸಮಿತಿ ಕೊನೆ ಕ್ಷಣದ ಎಬಿಡಿ ನಿರ್ಧಾರವನ್ನು ಪುರಷ್ಕರಿಸಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ಹೊಸ ಮ್ಯಾನೇಜ್‌ಮೆಂಟ್ ಎಬಿಡಿ ತಂಡ ಸೇರಿಸಿಕೊಳ್ಳುವುದರ ಬಗ್ಗೆ ಉತ್ಸುಕವಾಗಿದೆ. ಅದರಲ್ಲೂ ಮುಖ್ಯ ಕೋಚ್ ಮಾರ್ಕ್ ಬೌಚರ್ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎಬಿಡಿ ಆಡಲಿದ್ದಾರೆ ಎನ್ನುವ ಸುಳಿವನ್ನು ನೀಡಿದ್ದರು.

ಎಬಿಡಿ ಕಮ್‌ಬ್ಯಾಕ್ ವಿಚಾರ: ಕುತೂಹಲ ಹುಟ್ಟಿಸಿದ ನಾಯಕನ ಮಾತು..!

ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವುದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದಾಗಿ ಎಬಿಡಿ ತಿಳಿಸಿದ್ದರು. ಆದರೆ ಐಪಿಎಲ್ ಸೇರಿದಂತೆ ಕೆಲ ಟಿ20 ಲೀಗ್‌ನಲ್ಲಿ ಎಬಿಡಿ ಕಣಕ್ಕಿಳಿಯುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ