6IXTY Tournament: 6 ಎಸೆತಗಳಲ್ಲಿ 6 ಮುಗಿಲೆತ್ತರದ ಸಿಕ್ಸರ್ ಚಚ್ಚಿದ ಆ್ಯಂಡ್ರೆ ರಸೆಲ್..!

Published : Aug 29, 2022, 06:15 PM IST
6IXTY Tournament: 6 ಎಸೆತಗಳಲ್ಲಿ 6 ಮುಗಿಲೆತ್ತರದ ಸಿಕ್ಸರ್ ಚಚ್ಚಿದ ಆ್ಯಂಡ್ರೆ ರಸೆಲ್..!

ಸಾರಾಂಶ

6IXTY ಟೂರ್ನಮೆಂಟ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚಿದ ಆ್ಯಂಡ್ರೆ ರಸೆಲ್ ಆ್ಯಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್‌ಗೆ ಎದುರಾಳಿ ತಂಡ ತಬ್ಬಿಬ್ಬು ಕಳೆದೊಂದು ವರ್ಷದಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡದ ಆ್ಯಂಡ್ರೆ ರಸೆಲ್

ಬಾರ್ಬಡೋಸ್‌(ಆ.29): ವೆಸ್ಟ್ ಇಂಡೀಸ್ ಸ್ಪೋಟಕ ಆಲ್ರೌಂಡರ್ ಆ್ಯಂಡ್ರೆ ರಸೆಲ್, ಮತ್ತೊಮ್ಮೆ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಸುದ್ದಿಯಾಗಿದ್ದಾರೆ. ಚೊಚ್ಚಲ ಆವೃತ್ತಿಯ 6IXTY ಟೂರ್ನಮೆಂಟ್‌ನಲ್ಲಿ  ದಿ ಟ್ರಿನಿಬಾಗೊ ನೈಟ್‌ ರೈಡರ್ಸ್‌ ಬ್ಯಾಟರ್‌ ಆ್ಯಂಡ್ರೆ ರಸೆಲ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದ್ದಾರೆ. ಸೇಂಟ್ ಕಿಟ್ಸ್‌ ಅಂಡ್ ನೇವಿಸ್ ಪೆಟ್ರಿಯಾಟ್ಸ್‌ ವಿರುದ್ದದದ ಪಂದ್ಯದಲ್ಲಿ ರಸೆಲ್‌ ಕೇವಲ 24 ಎಸೆತಗಳಲ್ಲಿ 72 ರನ್ ಬಾರಿಸಿ ಮಿಂಚಿದರು. ಈ ಪಂದ್ಯದಲ್ಲಿ ಅವರ ತಂಡವು 3 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಆ್ಯಂಡ್ರೆ ರಸೆಲ್, ವೆಸ್ಟ್‌ ಇಂಡೀಸ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಬದಲು ಫ್ರಾಂಚೈಸಿ ಲೀಗ್‌ಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಹಿಂದೆ ಸುದ್ದಿಯಾಗಿದ್ದರು. ಇದೇ ವಿಚಾರದ ಕುರಿತಂತೆ ವೆಸ್ಟ್ ಇಂಡೀಸ್ ಹೆಡ್ ಕೋಚ್ ಫಿಲ್ ಸಿಮೊನ್ಸ್‌ ಕೂಡಾ, ಯಾರನ್ನೂ ರಾಷ್ಟ್ರೀಯ ತಂಡದ ಪರ ಆಡಿ ಎಂದು ಬೇಡಲು ಸಾಧ್ಯವಿಲ್ಲ ಎಂದು ತಮ್ಮ ಬೇಸರ ಸಹಿತ ಅಸಮಾಧಾನವನ್ನು ಹೊರಹಾಕಿದ್ದರು.

ಮೇಲ್ನೋಟಕ್ಕೆ ಈ ಎಲ್ಲಾ ವಿಚಾರಗಳನ್ನು ಗಮನಿಸಿದರೇ, ವೆಸ್ಟ್ ಇಂಡೀಸ್‌ ಕ್ರಿಕೆಟ್‌ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಭಾಕಿ ಇರುವಾಗ ಹಲವು ತಾರಾ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಒಟ್ಟಾಗಿ ಆಡುವುದನ್ನು ಬಿಟ್ಟು, ಫ್ರಾಂಚೈಸಿ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ವಿಂಡೀಸ್ ಕ್ರಿಕೆಟ್‌ ತಂಡದ ಹೆಡ್‌ ಕೋಚ್‌ ಫಿಲ್ ಸಿಮೊನ್ಸ್‌ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಅಚ್ಚರಿಯ ಸಂಗತಿಯೆಂದರೇ, ಎರಡು ಬಾರಿ ಐಸಿಸಿ ಟಿ20 ಟ್ರೋಫಿ ಗೆದ್ದಿರುವ ವೆಸ್ಟ್ ಇಂಡೀಸ್ ತಂಡವು, ಆಸ್ಟ್ರೇಲಿಯಾದಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ನೇರ ಅರ್ಹತೆ ಪಡೆಯಲು ವಿಫಲವಾಗಿದೆ. ಈ ಬಾರಿ ವಿಂಡೀಸ್ ತಂಡವು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಿ ಪ್ರಧಾನ ಸುತ್ತಿಗೇರಬೇಕಾದ ಒತ್ತಡಕ್ಕೆ ಸಿಲುಕಿದೆ.

ತನ್ನ ವಿಸ್ಪೋಟಕ ಬ್ಯಾಟಿಂಗ್ ಅನಾವರಣ ಮಾಡಿದ ಆ್ಯಂಡ್ರೆ ರಸೆಲ್..!

ಸೇಂಟ್ ಕಿಟ್ಸ್‌ ಅಂಡ್ ನೇವಿಸ್ ಪೆಟ್ರಿಯಾಟ್ಸ್‌  ಬೌಲರ್‌ಗಳನ್ನು ಆ್ಯಂಡ್ರೆ ರಸೆಲ್ ಮನಬಂದಂತೆ ದಂಡಿಸಿದರು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ರಸೆಲ್‌, 6 ಎಸೆತಗಳಲ್ಲಿ ಸತತ 6 ಸಿಕ್ಸರ್ ಸಿಡಿಸುವ ಮೂಲಕ ಯುವರಾಜ್ ಸಿಂಗ್, ಕೀರನ್ ಪೊಲ್ಲಾರ್ಡ್, ಹರ್ಷಲ್ ಗಿಬ್ಸ್‌ ಬ್ಯಾಟಿಂಗ್ ನೆನಪಾಗುವಂತೆ ಮಾಡಿದರು.

ಬದ್ಧವೈರಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ, ಪಾಂಡ್ಯ ಸಿಕ್ಸರ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು!

ಹೀಗಿತ್ತು ನೋಡಿ ಆ್ಯಂಡ್ರೆ ರಸೆಲ್ ಸ್ಪೋಟಕ 6 ಸಿಕ್ಸರ್‌ಗಳು:

ಮತ್ತೆ ವೆಸ್ಟ್ ಇಂಡೀಸ್ ತಂಡ ಕೂಡಿಕೊಳ್ಳುತ್ತಾರಾ ಆ್ಯಂಡ್ರೆ ರಸೆಲ್..?

ಆಲ್ರೌಂಡರ್ ಆ್ಯಂಡ್ರೆ ರಸೆಲ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ನಡುವೆ ಒಂದು ರೀತಿಯ ವೈಮನಸ್ಸು ಇದೆ. ಕಳೆದ ಐಸಿಸಿ ಟಿ20 ವಿಶ್ವಕಪ್ ಬಳಿಕ ಆ್ಯಂಡ್ರೆ ರಸೆಲ್, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪರ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ. ಇತ್ತೀಚೆಗಷ್ಟೇ ಅವರು ದಿ ಹಂಡ್ರೆಡ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದರು. ಇನ್ನು ವೆಸ್ಟ್‌ ಇಂಡೀಸ್ ಕ್ರಿಕೆಟ್ ತಂಡವು, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವುದಕ್ಕೂ ಮೊದಲು ಇನ್ನು ಕೇವಲ 2 ಟಿ20 ಪಂದ್ಯಗಳನ್ನಷ್ಟೇ ಆಡಲಿದೆ. ಹೀಗಾಗಿ ವಿಂಡೀಸ್ ಅಯ್ಕೆ ಸಮಿತಿ ತಮ್ಮ ಹಾಗೂ ಆಟಗಾರರ ನಡುವಿನ ಕಚ್ಚಾಟವನ್ನು ಕೈಬಿಟ್ಟು ಆ್ಯಂಡ್ರೆ ರಸೆಲ್ ಅವರಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌