2 ಕಿಲೋ ಮೀಟರ್‌ ಫಿಟ್ನೆಸ್ಟ್‌ ಟೆಸ್ಟ್‌ನಲ್ಲಿ 6 ತಾರಾ ಆಟಗಾರರು ಫೇಲ್‌

Suvarna News   | Asianet News
Published : Feb 13, 2021, 12:26 PM IST
2 ಕಿಲೋ ಮೀಟರ್‌ ಫಿಟ್ನೆಸ್ಟ್‌ ಟೆಸ್ಟ್‌ನಲ್ಲಿ 6 ತಾರಾ ಆಟಗಾರರು ಫೇಲ್‌

ಸಾರಾಂಶ

ಬೆಂಗಳೂರಿನಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಆಯೋಜಿಸಲಾಗಿದ್ದ 2 ಕಿಲೋ ಮೀಟರ್‌ ಓಟದ ಪರೀಕ್ಷೆಯಲ್ಲಿ ಭಾರತದ 6 ಆಟಗಾರರು ಫೇಲ್‌ ಆಗಿದ್ದಾರೆಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಫೆ.13): ಭಾರತೀಯ ಕ್ರಿಕೆಟಿಗರ ಫಿಟ್ನೆಸ್‌ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಬಿಸಿಸಿಐ ಹೊಸ ಫಿಟ್ನೆಸ್‌ ಪರೀಕ್ಷೆ ಪರಿಚಯಿಸಿದ್ದು, ಎಂಟೂವರೆ ನಿಮಿಷದಲ್ಲಿ 2 ಕಿ.ಮೀ ಓಟದ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್‌ ಸೇರಿ 6 ತಾರಾ ಆಟಗಾರರು ಅನುತ್ತೀರ್ಣರಾಗಿದ್ದಾರೆ.

ಉನ್ನತ ಮೂಲಗಳ ಪ್ರಕಾರ, ಇಂಗ್ಲೆಂಡ್‌ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಆಯ್ಕೆ ಮಾಡುವ ಸಲುವಾಗಿ ಸುಮಾರು 20 ಆಟಗಾರರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಸ್ಯಾಮ್ಸನ್‌, ಇಶಾನ್‌ ಕಿಶನ್‌, ನಿತೀಶ್‌ ರಾಣಾ, ರಾಹುಲ್‌ ತೆವಾಟಿಯಾ, ಸಿದ್ಧಾರ್ಥ್ ಕೌಲ್‌ ಹಾಗೂ ಜಯ್‌ದೇವ್‌ ಉನಾದ್ಕತ್‌ ಫೇಲಾಗಿದ್ದಾರೆ ಎನ್ನಲಾಗಿದೆ.

‘ಇದು ಹೊಸ ಮಾದರಿಯ ಪರೀಕ್ಷೆಯಾಗಿರುವ ಕಾರಣ ಮತ್ತೊಂದು ಅವಕಾಶ ನೀಡಲಾಗುತ್ತದೆ. 6 ಆಟಗಾರರು ಪರೀಕ್ಷೆಯಲ್ಲಿ ಪಾಸಾಗಿಲ್ಲ. ಕೆಲವರು ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಓಟ ಮುಗಿಸಿ ಉತ್ತೀರ್ಣರಾದರು. ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡುತ್ತಿರುವ ಆಟಗಾರರು ಹಾಗೂ ಕೆಲ ಆಟಗಾರರಿಗೆ ಈ ಬಾರಿ ವಿನಾಯಿತಿ ನೀಡಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಎಲ್ಲರೂ ಈ ಟೆಸ್ಟ್‌ನಲ್ಲಿ ಪಾಸಾದರಷ್ಟೇ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೀಂ ಇಂಡಿಯಾ ಆಟಗಾರರಿಗೆ ಇನ್ನು ಕಠಿಣ ಫಿಟ್ನೆಸ್‌ ಪರೀಕ್ಷೆ..!

ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ಹಾಗೂ ಸ್ಪಿನ್ನರ್‌ಗಳು ಎಂಟೂವರೆ ನಿಮಿಷದಲ್ಲಿ 2 ಕಿ.ಮೀ ಓಟ ಮುಗಿಸಬೇಕು. ವೇಗದ ಬೌಲರ್‌ಗಳು 8 ನಿಮಿಷ 15 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸುವುದು ಹೊಸ ಫಿಟ್ನೆಸ್‌ ಪರೀಕ್ಷೆಯ ಮಾನದಂಡವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್