1000ನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ 6 ವಿಕೆಟ್ ಜಯ
ಬೌಲಿಂಗ್ ನಲ್ಲಿ ಮಿಂಚಿದ ಯಜುವೇಂದ್ರ ಚಾಹಲ್ ಪಂದ್ಯಶ್ರೇಷ್ಠ
ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಪಂದ್ಯ ಆಡಿದ ರೋಹಿತ್ ಶರ್ಮ
ಅಹಮದಾಬಾದ್ (ಫೆ.6): ಪ್ರವಾಸಿ ವೆಸ್ಟ್ ಇಂಡೀಸ್ (West Indies) ತಂಡ ನೀಡಿದ ಸಾಧಾರಣ ಗುರಿಯನ್ನು ಕೇವಲ 28 ಓವರ್ ಗಳಲ್ಲಿ ಬೆನ್ನಟ್ಟಿದ ಭಾರತ (India Cricket Team) ತಂಡ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ತಮ್ಮ 59 ಎಸೆತಗಳ ದಾಳಿಯಲ್ಲಿ 49 ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ (Yuzvendra Chahal) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿಶ್ವದ ಅತೀದೊಡ್ಡ ಕ್ರಿಕೆಟ್ ಮೈದಾನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಯಜುವೇಂದ್ರ ಚಾಹಲ್ ಹಾಗೂ ವಾಷಿಂಗ್ಟನ್ ಸುಂದರ್ (30ಕ್ಕೆ 3) ದಾಳಿಗೆ ಬೆದರಿದ ಪ್ರವಾಸಿ ತಂಡ 43.5 ಓವರ್ ಗಳಲ್ಲಿ ಕೇವಲ 176 ರನ್ ಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ನಾಯಕ ರೋಹಿತ್ ಶರ್ಮ (Rohit Sharma) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 28 ಓವರ್ ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿ ಗೆಲುವು ಕಂಡಿತು. ಉಭಯ ದೇಶಗಳ ನಡುವೆ 2ನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಬುಧವಾರ ನಡೆಯಲಿದೆ. ಬೌಲಿಂಗ್ ನಲ್ಲಿ ಗಮನಸೆಳೆದ ಕನ್ನಡಿಗ ಪ್ರಸಿದ್ಧ ಕೃಷ್ಣ 10 ಓವರ್ ಗಳ ದಾಳಿಯಲ್ಲಿ ಕೇವಲ 29 ರನ್ ನೀಡಿ 2 ವಿಕೆಟ್ ಉರುಳಿಸಿ ಮಿಂಚಿದರು.
A sparkling performance from India in their 1⃣0⃣0⃣0⃣th ODI 💥
They win the first match against West Indies by six wickets, taking a 1-0 series lead 👏 | https://t.co/Bf4Z5gkR7N pic.twitter.com/0ExjX2tdTS
ಭಾರತಕ್ಕೆ ಆಗಮಿಸಿದ ಬಳಿಕ ಕೇವಲ ಒಂದೇ ನೆಟ್ ಸೆಷನ್ ನಲ್ಲಿ ಭಾಗಿಯಾಗಿದ್ದ ವೆಸ್ಟ್ ಇಂಡೀಸ್ ತಂಡದಲ್ಲಿ ಅಭ್ಯಾಸದ ಕೊರತೆ ಎದ್ದು ಕಾಣುತ್ತಿತ್ತು. ಅದರಲ್ಲೂ ಬ್ಯಾಟ್ಸ್ ಮನ್ ಗಳ ನಿರ್ವಹಣೆ ವೆಸ್ಟ್ ಇಂಡೀಸ್ ಪಾಲಿಗೆ ನಿರಾಶಾದಾಯಕವಾಗಿತ್ತು. ಕೇವಲ 79 ರನ್ ಗೆ 7 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಮಾಜಿ ನಾಯಕ ಜೇಸನ್ ಹೋಲ್ಡರ್ ಆಕರ್ಷಕ ಅರ್ಧಶತಕ ಮೂಲಕ ಆಸರೆಯಾಗಿದ್ದರು. ಇದರಿಂದಾಗಿ ವಿಂಡೀಸ್ ಅಲ್ಪವಾದರೂ ಹೋರಾಟ ತೋರಲು ಯಶಸ್ವಿಯಾಗಿತ್ತು.
1000th ODI: ಟೀಂ ಇಂಡಿಯಾಗೆ ಸಾಧಾರಣ ಗುರಿ ನೀಡಿದ ವೆಸ್ಟ್ ಇಂಡೀಸ್
ರೋಹಿತ್ ಶರ್ಮ ಅವರ ಅಮೋಘ ಇನ್ನಿಂಗ್ಸ್ ನ ಹೊರತಾಗಿಯೂ ಭಾರತ ತಂಡ ಕುಸಿದ ಕಂಡಿತು. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 84 ರನ್ ಬಾರಿಸಿದ್ದ ಭಾರತ 17.3 ಓವರ್ ಗಳ ವೇಳೆಗೆ 116 ರನ್ ಗಳಿಗೆ 4 ವಿಕಟ್ ಕಳೆದುಕೊಂಡಿತ್ತು. ಆದರೆ, ಸೂರ್ಯಕುಮಾರ್ ಯಾದವ್ (34) ಹಾಗೂ ಪಾದಾರ್ಪಣಾ ಪಂದ್ಯವಾಡಿದ ದೀಪಕ್ ಹೂಡಾ (26) ತಂಡವನ್ನು ಯಾವುದೇ ಆತಂಕಕ್ಕೆ ದೂಡದೇ ಗೆಲುವು ನೀಡಿದರು. ಇನ್ನೂ 22 ಓವರ್ ಗಳು ಇರುವಂತೆ ಭಾರತ ಗೆಲುವಿನ ಗುರಿ ಸೇರಿತು.
Lata Mangeshkar Death : ಲತಾ ಮಂಗೇಶ್ಕರ್ ಅಪ್ರತಿಮ ಐಕಾನ್, ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಸಂತಾಪ
177 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತವು ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಬಿರುಸಾಗಿ ರನ್ ಸಿಡಿಸಿದ್ದರಿಂದ ಉತ್ತಮ ಆರಂಭ ಪಡೆದಿತ್ತು. ಶರ್ಮಾ ಲೆಗ್-ಸೈಡ್ ಗ್ಲಾನ್ಸ್ ಮತ್ತು ಆಫ್-ಸೈಡ್ ಮೂಲಕ ಡ್ರೈವ್‌ಗಳಲ್ಲಿ ಅದ್ಭುತವಾಗಿ ಕಂಡರೆ, ಕಿಶನ್ ಮಿಡ್-ವಿಕೆಟ್ ನಲ್ಲಿ ಬಾರಿಸಿದ ಫುಲ್ ಶಾಟ್ ಗಳ ಮೂಲಕ ಗಮನ ಸೆಳೆದರು. ಮೊದಲ ವಿಕೆಟ್ ಗೆ 84 ರನ್ ಜೊತೆಯಾಟವಾಡಿ ಈ ಜೋಡಿ ಬೇರ್ಪಟ್ಟಿತು. ನಂತರ ಬಂದ ವಿರಾಟ್ ಕೊಹ್ಲಿ ತಮ್ಮ ಮೊದಲ ಎರಡು ಎಸೆತಗಳಲ್ಲಿ ಬೌಂಡರಿಗಳನ್ನು ಸಿಡಿಸಿದರು. ಆದರೆ, ಅಲ್ಜಾರಿ ಜೋಸೆಫ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ ಬಂದ ರಿಷಭ್ ಪಂತ್ 9 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 11 ರನ್ ಸಿಡಿಸಿ ರನೌಟ್ ಆಗಿ ಹೊರನಡೆದರು. ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಹೂಡಾ 62 ಎಸೆತಗಳಲ್ಲಿ 63 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ತವರಿನಲ್ಲಿ 5 ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಮೊದಲ ಏಕದಿನ ಪಂದ್ಯದಲ್ಲಿ ಕೇವಲ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರಾದರೂ, ಏಕದಿನ ಕ್ರಿಕೆಟ್‌ನಲ್ಲಿ ತವರು ನೆಲದಲ್ಲಿ 5000 ಏಕದಿನ ರನ್ ಬಾರಿಸಿದ ಭಾರತದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಮೊದಲ ಏಕದಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ 5000 ರನ್ ಪೂರೈಸಲು ಕೇವಲ 6 ರನ್‌ಗಳ ಅಗತ್ಯವಿತ್ತು. ಇನ್ನು ತವರಿನಲ್ಲಿ 5 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ದಾಖಲೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ
ವೆಸ್ಟ್ ಇಂಡೀಸ್ 43.5 ಓವರ್‌ಗಳಲ್ಲಿ 176 ಆಲೌಟ್ (ಜೇಸನ್ ಹೋಲ್ಡರ್ 57, ಫ್ಯಾಬಿಯನ್ ಅಲೆನ್ 29; ಯುಜುವೇಂದ್ರ ಚಾಹಲ್ 49ಕ್ಕೆ 4, ವಾಷಿಂಗ್ಟನ್ ಸುಂದರ್ 30ಕ್ಕೆ 3) ಭಾರತ 28 ಓವರ್‌ಗಳಲ್ಲಿ 178/4 (ರೋಹಿತ್ ಶರ್ಮಾ 60, ಸೂರ್ಯಕುಮಾರ್ ಯಾದವ್ 34; ಅಲ್ಜಾರಿ ಜೋಸೆಫ್ 45ಕ್ಕೆ 2, ಅಕೇಲ್ ಹೊಸೈನ್ 46ಕ್ಕೆ 1)