ಕೋವಿಡ್‌ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್‌

By Kannadaprabha News  |  First Published Mar 26, 2023, 1:30 AM IST

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಆಸ್ಪತ್ರೆಗಳಲ್ಲಿ ಔಷಧ, ಹಾಸಿಗೆ, ವೈದ್ಯಕೀಯ ಉಪಕರಣ ಹಾಗೂ ವೈದ್ಯಕೀಯ ಆಕ್ಸಿಜನ್‌ ಲಭ್ಯತೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯ ಸಂಶೋಧನಾ ಮಂಡಳಿ ಶನಿವಾರ ಜಂಟಿ ಸಲಹಾವಳಿಯನ್ನು ಹೊರಡಿಸಿವೆ.


ನವದೆಹಲಿ(ಮಾ.26):  ಕೋವಿಡ್‌ ಪ್ರಕರಣಗಳು ಹಾಗೂ ಜ್ವರಪೀಡಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಸನ್ನದ್ಧತೆಯನ್ನು ಪರೀಕ್ಷಿಸಲು ಏ.10 ಮತ್ತು 11ರಂದು ರಾಷ್ಟ್ರವ್ಯಾಪಿ ಅಣಕು ಕಾರ್ಯಾಚರಣೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಆಸ್ಪತ್ರೆಗಳಲ್ಲಿ ಔಷಧ, ಹಾಸಿಗೆ, ವೈದ್ಯಕೀಯ ಉಪಕರಣ ಹಾಗೂ ವೈದ್ಯಕೀಯ ಆಕ್ಸಿಜನ್‌ ಲಭ್ಯತೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಶನಿವಾರ ಜಂಟಿ ಸಲಹಾವಳಿಯನ್ನು ಹೊರಡಿಸಿವೆ.

Tap to resize

Latest Videos

undefined

ಕರ್ನಾಟಕದಲ್ಲಿ 131 ಮಂದಿಗೆ ಕೊರೋನಾ: ಪಾಸಿಟಿವಿಟಿ ಶೇ.2.65

ಮಾ.27ರಂದು ರಾಜ್ಯಗಳ ಜತೆ ವರ್ಚುವಲ್‌ ಸಭೆ ಆಯೋಜನೆಯಾಗಿದ್ದು, ಅಂದು ಅಣಕು ಕಾರ್ಯಾಚರಣೆಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗುತ್ತದೆ ಎಂದು ಸಲಹಾವಳಿ ಹೇಳಿದೆ. ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪರೀಕ್ಷೆ ಕುಸಿದಿದೆ. ಪ್ರತಿ 10 ಲಕ್ಷ ಜನರಿಗೆ 140 ಪರೀಕ್ಷೆಗಳು ನಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ನಿಗದಿಗೊಳಿಸಿದೆ. ಆದರೆ ಈಗ ನಡೆಯುತ್ತಿರುವ ಪರೀಕ್ಷೆಗಳ ಪ್ರಮಾಣ ಆ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ಸಲಹಾವಳಿಯಲ್ಲಿ ಸರ್ಕಾರ ಬೇಸರ ವ್ಯಕ್ತಪಡಿಸಿದೆ.

click me!