131 ಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 61, ಶಿವಮೊಗ್ಗ 27, ಚಿಕ್ಕಮಗಳೂರು 13, ಮೈಸೂರು 5, ಬಳ್ಳಾರಿ, ಹಾಸನ ತಲಾ 4 ಮಂದಿಗೆ ಸೋಂಕು ತಗುಲಿದೆ.
ಬೆಂಗಳೂರು(ಮಾ.25): ರಾಜ್ಯದಲ್ಲಿ ಶುಕ್ರವಾರ 131 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದಾಗಿ ಬೆಂಗಳೂರು ಗ್ರಾಮಾಂತರದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 5,179 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶೇ.2.65 ಪಾಸಿಟಿವಿಟಿ ದರದಂತೆ 131 ಮಂದಿಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರು ಗ್ರಾಮಾಂತದಲ್ಲಿ ಐಎಲ್‌ಐ, ಜ್ವರ, ಅಧಿಕ ರಕ್ತದೊತ್ತಡದಂತಹ ಅನಾರೋಗ್ಯ ಸಮಸ್ಯೆಗಳಿಂದ ಮಾ.15 ರಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮಾ.20 ರಂದು ಮೃತಪಟ್ಟಿದ್ದರು. ಉಳಿದಂತೆ ಶುಕ್ರವಾರ 126 ಮಂದಿ ಗುಣಮುಖರಾಗಿದ್ದು 635 ಸಕ್ರಿಯ ಸೋಂಕಿತರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 131 ಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 61, ಶಿವಮೊಗ್ಗ 27, ಚಿಕ್ಕಮಗಳೂರು 13, ಮೈಸೂರು 5, ಬಳ್ಳಾರಿ, ಹಾಸನ ತಲಾ 4 ಮಂದಿಗೆ ಸೋಂಕು ತಗುಲಿದೆ.
undefined
ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಕೊರೋನಾ ಪರೀಕ್ಷೆ ಗುರಿ: ತುಷಾರ್ ಗಿರಿನಾಥ್
ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲಿ ತಲಾ 3, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 2, ಯಾದಗಿರಿ, ಮಂಡ್ಯ, ಕೊಪ್ಪಳ, ಬೀದರ್, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.