ಕರ್ನಾಟಕದಲ್ಲಿ ಕೇವಲ 78 ಕೋವಿಡ್‌ ಕೇಸ್‌: 5 ತಿಂಗಳ ಕನಿಷ್ಠ

By Kannadaprabha NewsFirst Published Oct 3, 2022, 1:30 AM IST
Highlights

ಭಾನುವಾರ 78 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, 52 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ.

ಬೆಂಗಳೂರು(ಅ.03):  ರಾಜ್ಯದಲ್ಲಿ ಐದು ತಿಂಗಳ ಬಳಿಕ ಕೊರೋನಾ ಸೋಂಕು ಪ್ರಕರಣಗಳು 80 ಆಸುಪಾಸಿಗೆ ಕುಸಿದಿದ್ದು, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ 0.5ಕ್ಕಿಂತ ಕಡಿಮೆಯಾಗಿದೆ.

ಭಾನುವಾರ 78 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, 52 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. 13 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 0.56ರಷ್ಟುದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಏಳು ಸಾವಿರ ಕಡಿಮೆ ನಡೆದಿವೆ. ಹೀಗಾಗಿ, ಹೊಸ ಪ್ರಕರಣಗಳು 75 ಇಳಿಕೆಯಾಗಿವೆ. (ಶನಿವಾರ 153 ಪ್ರಕರಣಗಳು, ಶೂನ್ಯ ಸಾವು) ಕಳೆದ ಏಪ್ರಿಲ್‌ 26ರಂದು ಹೊಸ ಪ್ರಕರಣಗಳು 85 ದಾಖಲಾಗಿದ್ದವು.

ಬೂಸ್ಟರ್‌ ಡೋಸ್‌ ಲಸಿಕೆ ಫ್ರೀ ಕೊಟ್ರೂ ಶೇ.91 ಜನ ಪಡೆದಿಲ್ಲ..!

ಸದ್ಯ ಐದು ತಿಂಗಳ ಕನಿಷ್ಠಕ್ಕೆ ಕುಸಿದಿದೆ. ಸತತ ಎರಡು ದಿನಗಳಿಂದ ಸೋಂಕಿತರ ಸಾವಿಲ್ಲ. ಸದ್ಯ 2861 ಸಕ್ರಿಯ ಸೋಂಕಿತರಿದ್ದು, ಈ ಪೈಕಿ 35 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಐಸಿಯು, 5 ಮಂದಿ ಆಕ್ಸಿಜನ್‌, 20 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 2826 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

ಎಲ್ಲಿ, ಎಷ್ಟು ಪ್ರಕರಣ:

ಭಾನುವಾರ ರಾಮನಗರ 13, ಮೈಸೂರು 14 ಹಾಗೂ ದಕ್ಷಿಣ ಕನ್ನಡ 11 ಹಾಗೂ ಬೆಂಗಳೂರಿನಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ 13 ಜಿಲ್ಲೆಗಳಲ್ಲಿ ಬೆರಳೆಣಿಕೆ, 13 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗಿವೆ.
 

click me!