20 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.0.7ರಷ್ಟು ದಾಖಲು
ಬೆಂಗಳೂರು(ಅ.02): ರಾಜ್ಯದಲ್ಲಿ ನಾಲ್ಕು ತಿಂಗಳ ಬಳಿಕ ಕೊರೋನಾ ಸೋಂಕು ಪ್ರಕರಣಗಳು 150ರ ಆಸುಪಾಸಿಗೆ ಕುಸಿದಿದ್ದು, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆಯಾಗಿದೆ. ಶನಿವಾರ 153 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದ್ದು, 139 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ಶೂನ್ಯ ವರದಿಯಾಗಿದೆ.
20 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.0.7ರಷ್ಟು ದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 500ಕ್ಕಿಂತ ಕಡಿಮೆ ನಡೆದಿವೆ. ಹೊಸ ಪ್ರಕರಣಗಳು 61 ಇಳಿಕೆಯಾಗಿವೆ (ಶುಕ್ರವಾರ 214 ಪ್ರಕರಣಗಳು, ಒಂದು ಸಾವು).
undefined
ಬೂಸ್ಟರ್ ಡೋಸ್ ಲಸಿಕೆ ಫ್ರೀ ಕೊಟ್ರೂ ಶೇ.91 ಜನ ಪಡೆದಿಲ್ಲ..!
ಕಳೆದ ಮೇ 26 ರಂದು ಹೊಸ ಪ್ರಕರಣಗಳು 153 ದಾಖಲಾಗಿದ್ದವು. ಈಗ ಇಷ್ಟೇ ಸಂಖ್ಯೆಯ ಸೋಂಕು ಪ್ರಕರಣ ದೃಢಪಟ್ಟಿವೆ. ಸದ್ಯ 2835 ಸಕ್ರಿಯ ಸೋಂಕಿತರಿದ್ದು, ಈ ಪೈಕಿ 33 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಐಸಿಯು, 5 ಮಂದಿ ಆಕ್ಸಿಜನ್, 15 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 2802 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.