ಕಳೆದ 24 ಗಂಟೆಗಳ ಅವಧಿಯಲ್ಲಿ 17,319 ಕೊರೋನಾ ಪರೀಕ್ಷೆ ನಡೆಸಿದ್ದು, ಶೇ.2.15ರಷ್ಟು ಪಾಸಿಟಿವಿಟಿ ದರದಂತೆ 374 ಮಂದಿಗೆ ಸೋಂಕು ಖಚಿತವಾಗಿದೆ. ಸೋಂಕಿನಿಂದ 272 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಮೃತಪಟ್ಟ ವರದಿ ಆಗಿಲ್ಲ.
ಬೆಂಗಳೂರು(ಏ.23): ರಾಜ್ಯದಲ್ಲಿ ಶನಿವಾರ 374 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 272 ಮಂದಿ ಗುಣಮುಖರಾಗಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 17,319 ಕೊರೋನಾ ಪರೀಕ್ಷೆ ನಡೆಸಿದ್ದು, ಶೇ.2.15ರಷ್ಟು ಪಾಸಿಟಿವಿಟಿ ದರದಂತೆ 374 ಮಂದಿಗೆ ಸೋಂಕು ಖಚಿತವಾಗಿದೆ. ಸೋಂಕಿನಿಂದ 272 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಮೃತಪಟ್ಟ ವರದಿ ಆಗಿಲ್ಲ.
undefined
ಕೋವಿಡ್ ಹೆಚ್ಚಳ: ಕರ್ನಾಟಕ ಸೇರಿ 8 ರಾಜ್ಯಕ್ಕೆ ಕೇಂದ್ರ ಎಚ್ಚರಿಕೆ
ಒಟ್ಟು 2172 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೃಢಪಟ್ಟಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರ ಜಿಲ್ಲೆ 210, ಬೆಂಗಳೂರು ಗ್ರಾಮಾಂತರ 31, ಶಿವಮೊಗ್ಗ 26, ಮೈಸೂರು 15, ಉತ್ತರ ಕನ್ನಡ 14, ಹಾಸನ 11, ಬಳ್ಳಾರಿ 10, ಬಾಗಲಕೋಟೆ, ವಿಜಯನಗರ ತಲಾ 9, ದಾವಣಗೆರೆ 6, ರಾಯಚೂರು ಹಾಗೂ ಕಲಬುರಗಿಯಲ್ಲಿ ತಲಾ 5, ಬೆಳಗಾವಿ 4, ಧಾರವಾಡ ಹಾಗೂ ಕೊಪ್ಪಳದಲ್ಲಿ ತಲಾ 3, ಉಡುಪಿ, ಕೋಲಾರ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಹಾವೇರಿಯಲ್ಲಿ ತಲಾ 2, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ತಲಾ ಒಂದು ಪ್ರಕರಣ ಕಾಣಿಸಿಕೊಂಡಿವೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.