ಕರ್ನಾಟಕದಲ್ಲಿ ಈ ವರ್ಷದ ಗರಿಷ್ಠ ಕೊರೋನಾ ಕೇಸ್‌ ಪತ್ತೆ...!

Published : Mar 30, 2023, 07:03 AM IST
ಕರ್ನಾಟಕದಲ್ಲಿ ಈ ವರ್ಷದ ಗರಿಷ್ಠ ಕೊರೋನಾ ಕೇಸ್‌ ಪತ್ತೆ...!

ಸಾರಾಂಶ

ಬುಧವಾರ 9,855 ಮಂದಿಗೆ ಪರೀಕ್ಷೆ ನಡೆಸಿದ್ದು ಶೇ.3.08 ಪಾಸಿಟಿವಿಟಿ ದರ ದಾಖಲಾಗಿದೆ. 114 ಮಂದಿ ಗುಣಮುಖ ಹೊಂದಿದ್ದು, 907 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. 

ಬೆಂಗಳೂರು(ಮಾ.30): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಬುಧವಾರ 215 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ತನ್ಮೂಲಕ ಪ್ರಸಕ್ತ ವರ್ಷದಲ್ಲಿ ಎರಡನೇ ಬಾರಿಗೆ ಸೋಂಕಿನ ಪ್ರಕರಣಗಳು 200ರ ಗಡಿ ದಾಟಿದ್ದು, ಬುಧವಾರದ 215 ಪ್ರಕರಣ ಈ ವರ್ಷದ ಅತಿ ಹೆಚ್ಚು ಪ್ರಕರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಬುಧವಾರ 9,855 ಮಂದಿಗೆ ಪರೀಕ್ಷೆ ನಡೆಸಿದ್ದು ಶೇ.3.08 ಪಾಸಿಟಿವಿಟಿ ದರ ದಾಖಲಾಗಿದೆ. 114 ಮಂದಿ ಗುಣಮುಖ ಹೊಂದಿದ್ದು, 907 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ 75, ಶಿವಮೊಗ್ಗ 51, ಬಳ್ಳಾರಿ 16, ಕಲಬುರಗಿ 13, ಚಿಕ್ಕಮಗಳೂರು, ಮೈಸೂರು ತಲಾ 8, ಉತ್ತರ ಕನ್ನಡ 7, ರಾಯಚೂರು 6, ವಿಜಯಪುರ, ಕೋಲಾರ, ಹಾಸನದಲ್ಲಿ ತಲಾ 5, ಬೆಂಗಳೂರು ಗ್ರಾಮಾಂತರ 3, ಹಾವೇರಿಯಲ್ಲಿ ತಲಾ 3 ಕೇಸ್‌ ವರದಿಯಾಗಿದೆ.

1890 ಹೊಸ ಕೋವಿಡ್‌ ಕೇಸ್‌: 149 ದಿನದ ದಾಖಲೆ

2151 ಕೋವಿಡ್‌ ಪ್ರಕರಣ, 7 ಸಾವು: ಹೊಸ ಕೇಸಿನ ಪ್ರಮಾಣ 5 ತಿಂಗಳ ಗರಿಷ್ಠ

ನವದೆಹಲಿ: ದೇಶದಲ್ಲಿ ದಿನೇ ದಿನೇ ಹೊಸ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು ಬುಧವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 2151 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 5 ತಿಂಗಳ ದಾಖಲೆಯನ್ನು ದಾಟಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ.1.51ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಮಹಾರಾಷ್ಟ್ರ, ಕೇರಳದಲ್ಲಿ ತಲಾ ಮೂರು ಹಾಗೂ ಕರ್ನಾಟಕದಲ್ಲಿ ಒಬ್ಬರು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತರಲ್ಲಿ ಗುಣಮುಖರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ರಿಯ ಪ್ರಕರಣಗಳು 11,903ಕ್ಕೆ ಏರಿಕೆಯಾಗಿ ಪ್ರಮಾಣವು ಶೇ.0.03ಕ್ಕೆ ಏರಿದೆ.

ದೇಶದಲ್ಲಿ ಈವರೆಗೂ 4.46 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದರೆ ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದು, 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಇದುವರೆಗೂ 220.65 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

PREV
Read more Articles on
click me!

Recommended Stories

ಕೋವಿಡ್ ಭಯ ಬೇಡ ಮುನ್ನೆಚ್ಚರಿಕೆ ಇರಲಿ: ಸಚಿವ ಡಾ.ಎಂ.ಸಿ.ಸುಧಾಕರ್
ಮತ್ತೆ ಹೆಚ್ಚಾದ ವೈರಸ್‌ ಕಾಟ: ಮೈಸೂರಿನಲ್ಲಿ ಮಹಾಮಾರಿ ಕೊರೋನಾಗೆ ಮೊದಲ ಬಲಿ