1890 ಹೊಸ ಕೋವಿಡ್‌ ಕೇಸ್‌: 149 ದಿನದ ದಾಖಲೆ

By Kannadaprabha NewsFirst Published Mar 27, 2023, 12:00 AM IST
Highlights

ಹೊಸ ಪ್ರಕರಣಗಳ ಹೆಚ್ಚಳ ಹಾಗೂ ಗುಣಮುಖರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ರಿಯ ಪ್ರಕರಣಗಳ 9,433ಕ್ಕೆ ಏರಿಕೆಯಾಗಿದೆ. ಶೇ.1.56ರಷ್ಟು ದೈನಂದಿನ ಪಾಸಿಟಿವಿಟಿ ದರ ದಾಖಲು. 

ನವದೆಹಲಿ(ಮಾ.27):  ಭಾರತದಲ್ಲಿ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 1890 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 149 ದಿನಗಳ ಗರಿಷ್ಠವಾಗಿದೆ. ಸೋಂಕಿಗೆ 7 ಮಂದಿ ಬಲಿಯಾಗಿದ್ದು, ಇವರಲ್ಲಿ ಕೇರಳದ 3, ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಇಬ್ಬರು ಇಬ್ಬರಿದ್ದಾರೆ.

ಹೊಸ ಪ್ರಕರಣಗಳ ಹೆಚ್ಚಳ ಹಾಗೂ ಗುಣಮುಖರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ರಿಯ ಪ್ರಕರಣಗಳ 9,433ಕ್ಕೆ ಏರಿಕೆಯಾಗಿದೆ. ಶೇ.1.56ರಷ್ಟು ದೈನಂದಿನ ಪಾಸಿಟಿವಿಟಿ ದರ ದಾಖಲಾಗಿದೆ.

ಕೋವಿಡ್‌ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್‌

ದೇಶದಲ್ಲಿ ಈವರೆಗೂ 4.47 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದು, ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.30 ಲಕ್ಷ ಜನ ಸಾವನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಪ್ರಮಾಣವು ಶೇ.0.02ರಷ್ಟಿದೆ.
ಭಾರತದ ಲಸಿಕಾಕರಣವು 220.65 ಕೋಟಿ ಡೋಸ್‌ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

click me!