ವಿದೇಶದಿಂದ ಕರ್ನಾಟಕಕ್ಕೆ ಬಂದ 19 ಪ್ರಯಾಣಿಕರಿಗೆ ಕೋವಿಡ್‌..!

By Kannadaprabha News  |  First Published Dec 28, 2022, 8:00 AM IST

ಸೋಂಕಿತರಲ್ಲಿ ಚೀನಾದಿಂದ ಬಂದವರು ಯಾರೂ ಇಲ್ಲ, ಸೋಂಕಿತರ ಸ್ಯಾಂಪಲ್‌ ವಂಶವಾಹಿ ಪರೀಕ್ಷೆಗೆ ರವಾನೆ. ವಿದೇಶಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದವರ ಪೈಕಿ ಒಟ್ಟು 19 ಮಂದಿಗೆ ಸೋಂಕು ದೃಢ. 


ಬೆಂಗಳೂರು(ಡಿ.28):  ಚೀನಾದಲ್ಲಿ ಕೋವಿಡ್‌ ಅಬ್ಬರಿಸುತ್ತಿರುವ ನಡುವೆಯೇ ಪ್ರಸಕ್ತ ತಿಂಗಳಲ್ಲಿ ವಿದೇಶಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದವರ ಪೈಕಿ ಒಟ್ಟು 19 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ವಿದೇಶಗಳಿಂದ 3,281ಕ್ಕೂ ಅಧಿಕ ಮಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿಂದೆ ಶೇ.2ರಷ್ಟು ಪ್ರಯಾಣಿಕರಿಗೆ ಸೋಂಕು ಪರೀಕ್ಷೆ ನಡೆಸಲಾಗುತ್ತಿತ್ತು. ಕೇಂದ್ರ ಸರ್ಕಾರದ ಸೂಚನೆ ಬಳಿಕ ನಿಗದಿತ ದೇಶಗಳಿಂದ ಆಗಮಿಸಿದ ಪ್ರಯಾಣಿಕರೆಲ್ಲರಿಗೂ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ 8 ಮಂದಿ ಸೇರಿದಂತೆ ಪ್ರಸಕ್ತ ತಿಂಗಳಲ್ಲಿ 19 ಮಂದಿಗೆ ಸೋಂಕು ದೃಢಪಟ್ಟಿದೆ. ಎಲ್ಲಾ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

CORONAVIRUS: ಪ್ರಮುಖ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಡ್ರಿಲ್‌

ಸೋಂಕು ದೃಢಪಟ್ಟವರಿಗೆ ಬೌರಿಂಗ್‌ ಆಸ್ಪತ್ರೆಯಲ್ಲಿ ಸೋಮವಾರದಿಂದ ಹಾಸಿಗೆ ಮೀಸಲಿಡಲಾಗಿದೆ. ಆದರೆ, ಬಹುತೇಕರ ಸೋಂಕಿತರು ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈವರೆಗೂ ಬೌರಿಂಗ್‌ ಆಸ್ಪತ್ರೆಗೆ ಯಾರೊಬ್ಬರೂ ದಾಖಲಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಯಾವ ದೇಶದಿಂದ ಬಂದವರಿಗೆ ಸೋಂಕು?:

ದುಬೈನಿಂದ ಬಂದ ನಾಲ್ವರು, ಸಿಂಗಾಪುರ, ಅಬುಧಾಬಿ, ಜರ್ಮನಿಯ ತಲಾ ಇಬ್ಬರು, ಸಿಡ್ನಿ, ಹಾಂಕಾಂಗ್‌, ಬ್ಯಾಂಕಾಕ್‌, ಥಾಯ್ಲೆಂಡ್‌, ಸೌದಿ ಅರೇಬಿಯಾ, ಕತಾರ್‌, ಇಂಗ್ಲೆಂಡ್‌, ಮಾಲ್ಡೀವ್‌್ಸ, ಬಹ್ರೇನ್‌ನಿಂದ ಬಂದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಬಹುತೇಕರ ಸೋಂಕು ಲಕ್ಷಣಗಳು ಲಘುವಾಗಿದ್ದು, ಆರೋಗ್ಯ ಸ್ಥಿತಿ ಕೂಡ ಸಾಮಾನ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ 3.9 ಕೋಟಿ ಮಂದಿ 3ನೇ ಡೋಸ್‌ ಪಡೆದಿಲ್ಲ..!

ವಾರದ ಸೋಂಕು ಶೇ.11ರಷ್ಟು ಹೆಚ್ಚಳ

ನವ​ದೆ​ಹ​ಲಿ: ಕಳೆದ 9 ವಾರಗಳಿಂದ ದೇಶದಲ್ಲಿ ಇಳಿಕೆಯ ಹಾದಿಯಲ್ಲಿದ್ದ ಕೊರೋನಾ ಸೋಂಕು ಭಾನುವಾರಕ್ಕೆ ಅಂತ್ಯಗೊಂಡ ವಾರದಲ್ಲಿ 11% ಏರಿಕೆ ದಾಖಲಿಸಿದೆ.

ಆರೋಗ್ಯ ಸಿಬ್ಬಂದಿಗೆ 4ನೇ ಡೋಸ್‌: ಸಲಹೆ

ನವ​ದೆ​ಹ​ಲಿ: ಮುಂಜಾಗ್ರತಾ ಕ್ರಮವಾಗಿ ದೇಶದ ಆರೋಗ್ಯ ಸಿಬ್ಬಂದಿಗೆ 4ನೇ ಡೋಸ್‌ ಕೋವಿಡ್‌ ಲಸಿಕೆ ನೀಡಬೇಕು ಎಂದು ಭಾರತೀಯ ವೈದ್ಯ ಸಂಸ್ಥೆ ಸಲಹೆ ಮಾಡಿದೆ.

click me!