ಸದ್ಯ ರಾಜ್ಯದಲ್ಲಿ 4.8 ಕೋಟಿ ಜನರಲ್ಲಿ (18 ಮೇಲ್ಪಟ್ಟು) ಮೂರನೇ ಡೋಸ್‌ಗೆ ಅರ್ಹರಿದ್ದಾರೆ. ಈ ಪೈಕಿ 93 ಲಕ್ಷ ಮಂದಿ ಮಾತ್ರ ಮೂರನೇ ಡೋಸ್ ಪಡೆದಿದ್ದು, ಉಳಿದಂತೆ 3.9 ಕೋಟಿ ಮಂದಿ ಬಾಕಿ ಇದ್ದಾರೆ. ರಾಜ್ಯ ಸರ್ಕಾರ ಶೇ.50 ರಷ್ಟು ಮಂದಿಗೆ ಜನವರಿ ಅಂತ್ಯದೊಳಗೆ ಲಸಿಕೆ ನೀಡಬೇಕು ಎಂಬ ಗುರಿಯನ್ನು ಹೊಂದಿದೆ.
ಬೆಂಗಳೂರು(ಡಿ.27): ರಾಜ್ಯದಲ್ಲಿ ಮೂರನೇ ಡೋಸ್‌ಗೆ ಅರ್ಹರ ಪೈಕಿ 3.9 ಕೋಟಿ ಮಂದಿ ಬಾಕಿ ಇದ್ದಾರೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಕೊರೋನಾ ಲಸಿಕೆಯ ಮೂರನೇ ಡೋಸ್ ಕೂಡಾ ಉಚಿತವಾಗಿ ಲಭ್ಯವಿದ್ದು, ಸಾರ್ವಜನಿಕರು ಪಡೆಯಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
‘ಸದ್ಯ ರಾಜ್ಯದಲ್ಲಿ 4.8 ಕೋಟಿ ಜನರಲ್ಲಿ (18 ಮೇಲ್ಪಟ್ಟು) ಮೂರನೇ ಡೋಸ್‌ಗೆ ಅರ್ಹರಿದ್ದಾರೆ. ಈ ಪೈಕಿ 93 ಲಕ್ಷ ಮಂದಿ ಮಾತ್ರ ಮೂರನೇ ಡೋಸ್ ಪಡೆದಿದ್ದು, ಉಳಿದಂತೆ 3.9 ಕೋಟಿ ಮಂದಿ ಬಾಕಿ ಇದ್ದಾರೆ. ರಾಜ್ಯ ಸರ್ಕಾರ ಶೇ.50 ರಷ್ಟು ಮಂದಿಗೆ ಜನವರಿ ಅಂತ್ಯದೊಳಗೆ ಲಸಿಕೆ ನೀಡಬೇಕು ಎಂಬ ಗುರಿಯನ್ನು ಹೊಂದಿದೆ. ಹೀಗಾಗಿ ಎರಡನೇ ಡೋಸ್ ಪಡೆದು ಆರು ತಿಂಗಳು ಪೂರೈಸಿದವರು ಸಮೀಪದ ಸರ್ಕಾರಿ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಬಹುದು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
undefined
ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ
‘ಕೇಂದ್ರ ಸರ್ಕಾರವು ಮೂರನೇ ಡೋಸ್ ಜಾರಿಗೊಳಿಸಿದ ಬಳಿಕ 60 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯ ಕಾರ್ಯರ್ತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಮೂರನೇ ಡೋಸ್ ನೀಡಲು ತೀರ್ಮಾನಿಸಿತು. ಹಣ ಪಾವತಿಸಿ ಮೂರನೇ ಡೋಸ್ ಪಡೆಯಲು ಸಾರ್ವಜನಿಕರು ಸಂಪೂರ್ಣ ಹಿಂದೇಟು ಹಾಕಿದರು. ನಂತರ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಜೂನ್ 15 ರಿಂದ ಸೆ.30ವರೆಗೂ 75 ದಿನಗಳು 18-59 ವಯಸ್ಸಿನರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಮೂರನೇ ಡೋಸ್ ನೀಡಲಾಯಿತು. ಮತ್ತೆ ಉಚಿತ ಯೋಜನೆಯನ್ನು ಮುಂದುವರೆಸಲಾಗಿದೆ’ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಕೋವಿನ್‌ನಲ್ಲಿ ಸ್ಲಾಟ್ ಸಿಗುತ್ತಿಲ್ಲ!
ಮತ್ತೆ ಸೋಂಕು ಹೆಚ್ಚಳ ಆತಂಕದಿಂದ ಸರ್ಕಾರ ಮೂರನೇ ಡೋಸ್ ಪಡೆಯಲು ಸೂಚಿಸಿದ್ದು, ಇತ್ತ ಸಾರ್ವಜನಿಕರು ಕೂಡಾ ಲಸಿಕೆಯತ್ತ ಮುಖ ಮಾಡಿದ್ದಾರೆ. ಆದರೆ ಕೋವಿನ್ ಪೋರ್ಟಲ್ ಭೇಟಿ ನೀಡಿದರೆ ಸೂಕ್ತ ಸ್ಲಾಟ್ ಸಿಗುತ್ತಿಲ್ಲ. ನೇರವಾಗಿ ಪಡೆಯಲು ಅವಕಾಶಗಳಿದ್ದು, 2ನೇ ಡೋಸ್ ಪಡೆಯುವಾಗ ನೀಡಿದ್ದ ದಾಖಲಾತಿ, ಮೊಬೈಲ್ ನಂಬರ್‌ನೊಂದಿಗೆ ತೆರಳಿ ಲಸಿಕೆ ಪಡೆಯಬಹುದು.