ಈ ರಾಷ್ಟ್ರದಲ್ಲಿ ಕೊರೋನಾ ವೈರಸ್‌ ಪದ ಬಳಕೆಯೇ ನಿಷೇಧ, ಮಾಸ್ಕ್ ಧರಿಸಿದ್ರೆ ಜೈಲು!

By Kannadaprabha News  |  First Published Apr 2, 2020, 8:25 AM IST

ಮಧ್ಯ ಪ್ರಾಚ್ಯದಲ್ಲಿ ಇರಾನ್‌ ಪಕ್ಕದ ದೇಶದಲ್ಲಿ ವಿಚಿತ್ರ ನಿಯಮ| ಈ ದೇಶದಲ್ಲಿ ಕೊರೋನಾ ವೈರಸ್ ಪದ ಬಳಕೆಯೇ ನಿಷೆಧ| ಇಲ್ಲಿ ಮಾಸ್ಕ್ ಕೂಡಾ ಧರಿಸುವಂತಿಲ್ಲಅ


ಆ್ಯಶ್‌ಗಬಟ್‌(ಏ.02): ಮಧ್ಯ ಪ್ರಾಚ್ಯದಲ್ಲಿ ಇರಾನ್‌ ಪಕ್ಕ ಇರುವ ತುರ್ಕ್ಮೆನಿಸ್ತಾನ್‌ ದೇಶದಲ್ಲಿ ಕೊರೋನಾ ವೈರಸ್‌ ಎಂಬ ಪದ ಬಳಕೆಯನ್ನು ನಿಷೇಧಿಸಲಾಗಿದೆ, ಅಲ್ಲದೇ ಶಾಲೆ, ಆಸ್ಪತ್ರೆಗಳಿಗೆ ವಿತರಿಸಿರುವ ಆರೋಗ್ಯ ಮಾಹಿತಿಯಲ್ಲೂ ಆ ಪದವನ್ನು ತೆಗೆದು ಹಾಕಲಾಗಿದೆ.

ಮಾಸ್ಕ್‌ ಧರಿಸುವ ಹಾಗೂ ಕೊರೋನಾ ಬಗ್ಗೆ ಮಾತನಾಡುವವರನ್ನು ಬಂಧಿಸಲಾಗುತ್ತಿದೆ ಎಂದು ಪ್ಯಾರೀಸ್‌ ಪತ್ರಿಕೆಯೊಂದು ವರದಿ ಮಾಡಿದೆ.

Tap to resize

Latest Videos

ಕೊರೋನಾ ತಾಂಡವ: ಯಾವ ಮಾಸ್ಕ್‌ ಎಷ್ಟು ಸೇಫ್‌? ಇಲ್ಲಿದೆ ವಿವರ

ಪತ್ರಿಕಾ ಸ್ವಾತಂತ್ರ್ಯದಲ್ಲಿ ಕೊನೆ ಸ್ಥಾನದಲ್ಲಿರುವ ಈ ದೇಶದಲ್ಲಿ ಈವರೆಗೂ ಸೋಂಕು ಪತ್ತೆಯಾಗಿಲ್ಲ.

click me!