ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್ ಹರದಂತೆ ತಡೆಯಲು ಭಾರತವನ್ನು 21 ದಿನ ಲಾಕ್‌ಡೌನ್ ಮಾಡಲಾಗುವುದು ಎಂದು ಘೋಷಿಸಿದಾಗಲೇ ಹೆಚ್ಚಿನವರಿಗೆ ಕೊರೋನಾ ವೈರಸ್ ಗಂಭೀರತೆ ಅರಿವಾಯಿತು. ಆದರೆ ಕೆಲವರು ಮೋದಿ ನಿರ್ಧಾರವನ್ನು ಟೀಕಿಸಿದರು. ಡಿಮಾನಿಟೈಸೇಶನ್ ರೀತಿಯಲ್ಲಿ ಲಾಕ್‌ಡೌನ್ ಕೂಡ ಅವರಸದ ನಿರ್ಧಾರ ಎಂದರು. ಇದೀಗ ಮೋದಿ ಧೈರ್ಯ ಹಾಗೂ ದೂರದೃಷ್ಟಿಗೆ ವಿಶ್ವ ಆರೋಗ್ಯ ಸಂಸ್ಥೆಯೇ ಸಲಾಂ ಹೇಳಿದೆ
ಜಿನೆವಾ(ಏ.03): ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿರುವ ಬಹುತೇಕ ರಾಷ್ಟ್ರಗಳು ಅಕ್ಷರಶಃ ನಲುಗಿ ಹೋಗಿದೆ. ಅಮೆರಿಕಾ ದಿಕ್ಕು ತೋಚದೆ ಕುಳಿತಿದೆ. ಆದರೂ ರಾಷ್ಟ್ರವನ್ನು ಲಾಕ್‌ಡೌನ್ ಮಾಡುವ ಗಟ್ಟಿ ನಿರ್ಧಾರ ಮಾಡಿಲ್ಲ. ಆದರೆ ಭಾರತದಲ್ಲಿ ಸೋಂಕು ಆಪತ್ತಿನ ಮುನ್ಸೂಚನೆ ನೀಡುತ್ತಿದ್ದಂತೆ ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಿಸಿದ್ದರು. 21 ದಿನಗಳ ಕಾಲ ಭಾರತ ಲಾಕ್‌ಡೌನ್ ಮಾಡಿದ್ದಾರೆ. ಕೆಲವರು ಮೋದಿ ಲಾಕ್‌ಡೌನ್ ನಿರ್ಧಾರ ಡಿಮಾನಿಟೈಸೇಶನ್ ರೀತಿಯ ಆತುರದ ನಿರ್ಧಾರ ಎಂದು ತೆಗಳಿದ್ದರು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಮೋದಿ ನಿರ್ಧಾರವನ್ನು ಕೊಂಡಾಡಿದೆ.
ಲಾಕ್‌ಡೌನ್ ಉಲ್ಲಂಘನೆ: ಬೀದಿಗೆ ಬಂದ ಮೂವರಿಗೆ ಜೈಲು.
ಹೌದು, ಲಾಕ್‌ಡೌನ್ ನಿರ್ಧಾರವನ್ನು ಯಾವ ಪ್ರಧಾನಿಯೂ ಕನಸೂ ಮನಸಲ್ಲೂ ಯೋಚಿಸಲ್ಲ. ಕಾರಣ ಸಂಪೂರ್ಣ ಲಾಕ್‌ಡೌನ್‌ನಿಂದ ರಾಷ್ಟಕ್ಕಾಗುವ ನಷ್ಟ, ಸಮಸ್ಯೆ, ಪರಿಣಾಮಗಳನ್ನು ಯೋಚಿಸಿದರೆ ಇದು ಅಸಾಧ್ಯ. ಆದರೆ ಪ್ರಧಾನಿ ಮೋದಿ ಆ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಭಾರತದಲ್ಲಿ ಕೊರೋನಾ ಪ್ರಕರಣಗಳು ಬೆರಳೆಣಿಕೆ ಸಂಖ್ಯೆಯಲ್ಲಿತ್ತು. ಆದರೆ ಭಾರತ ಬಹುಬೇಗನೆ ಲಾಕ್‌ಡೌನ್ ನಿರ್ಧಾರ ಘೋಷಿಸಿತು. ಇದು ಧೈರ್ಯ ಹಾಗೂ ದೂರದೃಷ್ಟಿಯ ಫಲ ಎಂದ ವಿಶ್ವ ಆರೋಗ್ಯ ಸಂಸ್ಥೆ ರಾಯಭಾರಿ ಡಾ.ಡೆವಿಡ್ ನಬಾರೋ ಹೇಳಿದ್ದಾರೆ.
ಲಾಕ್‌ಡೌನ್: ಮನೆ ಬಿಟ್ಟು ಆಚೆ ಬಂದ್ರೆ ಮಂಗಳಾರತಿ ಗ್ಯಾರಂಟಿ!
ವೈರಸ್ ತೀವ್ರ ಸ್ವರೂಪ ಪಡೆದುಕೊಳ್ಳುವ ಮೊದಲೇ ಭಾರತದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. 4ನೇ ವಾರ, 5ನೇ ವಾರ ವೈರಸ್ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಹರಡುವಿಕೆ ವೇಗ ಹೆಚ್ಚಾಗುತ್ತದೆ. ಈ ವೇಳೆ ಲಾಕ್‌ಡೌನ್ ಆದೇಶ ಜಾರಿಯಲ್ಲಿರುವುದು ಅಗತ್ಯ ಎಂದು ಡೇವಿಡ್ ಹೇಳಿದ್ದಾರೆ.
ಸಂಶೋದನೆ ಹಾಗೂ ಅಧ್ಯಯನಗಳು ಪ್ರಕಾರ ಕೊರೋನಾ ವೈರಸ್ ಸಂಪೂರ್ಣ ಹತೋಟಿಗೆ ಬರಲಿದೆ ಅನ್ನೋದು ಕಷ್ಟ. ಆದರೆ ಎಚ್ಚರಿಕೆಯಿಂದಿದ್ದರೆ ಇದರಿಂದ ಪಾರಾಗಬಹುದು. ಸದ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಹರಡದಂತೆ ತಡೆಗಟ್ಟಬಹುದು. ಇನ್ನು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಚೇತರಿಸಿಕೊಳ್ಳಲಿದ್ದಾರೆ. ವೈರಸ್ ಸಂಪೂರ್ಣ ಹತೋಟಿಗೆ ಬಂದ ಬಳಿಕ ದೇಶ ವಿಶ್ರಮಿಸುವಂತಿಲ್ಲ. ಕಾರಣ ವಿಶ್ವದ ಯಾವ ಮೂಲೆಯಿಂದಲೂ ಕೊರೋನಾ ವೈರಸ್ ಮತ್ತೆ ದೇಶದೊಳಗೆ ಪ್ರವೇಶಿಸಬಹುದು ಎಂದು ಡೇವಿಡ್ ಹೇಳಿದ್ದಾರೆ.
ಸದ್ಯ ಉಲ್ಬಣಿಸಿರುವ ಕೊರೋನಾ ವೈರಸ್ ದಿಢೀರ್ ನಾಪತ್ತೆಯಾಗುವುದಿಲ್ಲ. ಸೋಂಕು ಈಗಾಗಲೇ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಈಗಿರುವ ಎಚ್ಚರಿಕೆ, ಶುಚಿತ್ವಗಳು ಮುಂದುವರಿಸಬೇಕು. ಇನ್ನು ಪ್ರತಿ ವಾತಾವರಣದಲ್ಲಿ ವೈರಸ್ ಯಾವ ರೀತಿ ವರ್ತಿಸುತ್ತದೆ. ವಾತಾವರಣ ಇದಕ್ಕೆ ಪೂರಕವಾಗಿದೆಯಾ ಅನ್ನೋ ಕುರಿತು ಸ್ಪಷ್ಟತೆ ಇಲ್ಲ ಎಂದಿದ್ದಾರೆ.