ಬೇಕಂತ ಮಾಡಿಲ್ಲ, ಜನಕರು ನಾವಲ್ಲ, ಸತ್ಯ ಹೇಳಿದರೆ ಚೀನಾಗೆ ಅರಗಿಸಲು ಆಗುತ್ತಿಲ್ಲ!

By Suvarna NewsFirst Published Mar 26, 2020, 7:12 PM IST
Highlights

ವಿಶ್ವದಲ್ಲಿ ಕರೋನಾ ಹೆಸರಿನಲ್ಲಿ ಅನೇಕ ವಸ್ತುಗಳಿವೆ. ಅದ್ಯಾವುದು ಕೊರೋನಾ ವೈರಸ್ ಅಷ್ಟು ಜನಪ್ರಿಯವಾಗಿಲ್ಲ. ಯಾರನ್ನೇ ಕೇಳಿದರೂ ಕೊರೋನಾ ವೈರಸ್ ಮಾತು. ಇಲಿ, ಹಾವು ತಿನ್ನುವ ಚೀನಾದವರಿಂದ ಕೊರೋನಾ ಅಲ್ಲದೆ ಮತ್ತೇನು ಬರಲು ಸಾಧ್ಯ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಕೊರೋನಾ ಮೂಲ ಚೀನಾ, ವುಹಾನ್ ಕೊರೋನಾ ಎಂದೆಲ್ಲ ಹೇಳಿದರೆ ಚೀನಾಗೆ ಕೆಂಡದಂತೆ ಕೋಪ ಬರುತ್ತಿದೆ. ಇಷ್ಟೇ ಅಲ್ಲ ಈ ಕುರಿತು ಅಮೆರಿಕಾಗೆ ಎಚ್ಚರಿಕೆ ನೀಡಿದೆ.
 

ನವದೆಹಲಿ(ಮಾ.26): ಕೊರೋನಾ ಸೋಂಕು ಮೊದಲು ಪತ್ತೆಯಾಗಿದ್ದು ಚೀನಾದ ವುಹಾನ್‌ನಲ್ಲಿ. ಕಳೆದ ಡಿಸೆಂಬರ್‌ನಲ್ಲಿ ಕರೋನಾ ವೈರಸ್ ಜನರ ದೇಹಕ್ಕೆ ಪ್ರವೇಶಿಸಿದೆ. 2020ರ ಜನವರಿ ಆರಂಭದಲ್ಲಿ ಮೊದಲ ಕೊರೋನಾ ವೈರಸ್ ದೃಢಪಟ್ಟಿತು. ವುಹಾನ್‍‌ನಲ್ಲಿ ಆರಂಭವಾದ ಕೊರೋನಾ ಚೀನಾ ಆವರಿಸಿದ್ದು ಮಾತ್ರವಲ್ಲ, ಇಟಲಿ, ಅಮೆರಿಕಾ, ಫ್ರಾನ್ಸ್, ಅರಬ್ ರಾಷ್ಟ್ರ,  ಭಾರತ, ಪಾಕಿಸ್ತಾನ ಸೇರಿದಂತೆ ವಿಶ್ವವನ್ನೇ ಆವರಿಸಿತು. ವುಹಾನ್‌ನಲ್ಲಿ ಆರಂಭವಾದ ಕೊರೋನಾ ವೈರಸ್ ಇನ್ನೂ ಆರ್ಭಟಿಸುತ್ತಲೇ ಇದೆ. ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ ವುಹಾನ್ ವೈರಸ್, ಅಥವಾ ಚೀನಾ ವೈರಸ್ ಅನ್ನುಂತಿಲ್ಲ. ಯಾರಾದರೂ ಹೀಗೆ ಹೇಳಿದರೆ ಚೀನಾ ಪಿತ್ತ ನೆತ್ತಿಗೇರುತ್ತಿದೆ.

 

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಸುದ್ದಿಗೋಷ್ಠಿಗಳಲ್ಲಿ, ಸರ್ಕಾರದ ಅಧೀಕೃತ ಪ್ರಕಟಣೆಗಳಲ್ಲಿ ಚೀನಾ ವೈರಸ್ ಎಂದೇ ಉಲ್ಲೇಖಿಸಿದ್ದಾರೆ. ಇನ್ನು ಇತರ ರಾಷ್ಟ್ರಗಳು ಕೂಡ ಚೀನಾ ವೈರಸ್ ಎಂದೇ ಹೇಳುತ್ತಿದೆ. ಇಷ್ಟೇ ಅಲ್ಲ ಚೀನಾ ಉದ್ದೇಶಕ ಪೂರ್ವಕವಾಗಿ ಈ ವೈರಸ್ ಹರಿಬಿಟ್ಟಿದೆ ಅನ್ನೋ ವರದಿಗಳು ಕೂಡ ಇವೆ. ಅದೇನೇ ಇರಲಿ. ಆದರೆ ಚೀನಾ ವೈರಸ್ ಎಂದ ಅಮೆರಿಕಾಗೆ ಚೀನಾ ರಾಯಭಾರಿ ಕಚೇರಿ ವಕ್ತಾರ ಜಿ ರೊಂಗ್ ತಿರುಗೇಟು ನೀಡಿದ್ದಾರೆ.

ಚೀನಾ ವೈರಸ್, ವುಹಾನ್ ವೈರಸ್ ಎಂದು ಕರೆಯುವುದು ತಪ್ಪು. ನಾವು ಕರೋನಾ ವೈರಸ್ ಉದ್ದೇಶಪೂರ್ವಕವಾಗಿ ಹುಟ್ಟುಹಾಕಿಲ್ಲ, ಬೇಕೆಂತಲೇ ಹರಡಿಲ್ಲ. ಹೀಗಿರುವಾಗಿ ಚೀನಾ ಮೇಲೆ ಬೊಟ್ಟು ಮಾಡುವುದೇಕೆ ಎಂದು ಜಿ ರೊಂಗ್ ಹೇಳಿದ್ದಾರೆ. ಸದ್ಯ ಕರೋನಾ ವೈರಸ್ ತೊಲಗಿಸಲು ಮಾಡಬೇಕಾದ ಕಾರ್ಯಗಳ ಕುರಿತು ಯೋಚಿಸಿ. ಬದಲಾಗಿ ಚೀನಾ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವು ಸರಿಯಲ್ಲ ಎಂದಿದ್ದಾರೆ.

ವುಹಾನ್‌ನಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದೆ ಅನ್ನುವುದು ನಿಜ. ಆದರೆ ಕೋವಿಡ್-19 ಚೀನಾದಲ್ಲಿ ಹುಟ್ಟಿದೆ ಅನ್ನೋದಕ್ಕೆ ಯಾವುದೇ ಆಧಾರವಿಲ್ಲ. ಹೀಗಾಗಿ ಕೊರೋನಾ ವೈರಸ್‌ಗೆ ಚೀನಾವನ್ನು ಥಳುಕು ಹಾಕುವುದು ಉಚಿತವಲ್ಲ ಎಂದಿದ್ದಾರೆ. ಮಾರ್ಚ್ ಆರಂಭದಲ್ಲಿ ಯುಎಸ್ ಸೆಕ್ರೆಟರಿ ಮೈಕ್ ಪೆಂಪೋ ವಿಶ್ವದಲ್ಲಿ ಹರಡುತ್ತಿರುವ ಕೋವಿಡ್-19 ವುಹಾನ್ ವೈರಸ್ ಎಂದಿದ್ದರು. 

ಚೀನಾದ ನಿರ್ಲಕ್ಷ್ಯ, ಜೀವನ ಕ್ರಮವೇ ಕೊರೋನಾ ವೈರಸ್ ಹರಡಲು ಕಾರಣ ಅನ್ನೋದು ತಜ್ಞರ ವರದಿ. ವೈರಸ್ ಕಾಣಿಸಿಕೊಂಡ ಬಳಿಕ ಚೀನಾ ಎಚ್ಚೆತ್ತುಕೊಂಡಿದೆ ನಿಜ. ಆದರೆ ವಿಶ್ವದಲ್ಲೇ ಇಲ್ಲದ ಹೊಸ ರೋಗ ಹುಟ್ಟಿಸಿದ ಅಪಖ್ಯಾತಿ ಚೀನಾಗೆ ಸಲ್ಲಬೇಕು. ಮಾಡೋದೆಲ್ಲಾ ಮಾಡಿ ಇದೀಗ ಚೀನಾ ಎಂದರೆ  ಮಾತ್ರ ಎಲ್ಲಿಲ್ಲದ ಸಿಟ್ಟು. ಈ ಆಕ್ರೋಶ, ಸಿಟ್ಟು ಎಲ್ಲವೂ ವೈರಸ್ ಹುಟ್ಟು ಹಾಕುವ ಮೊದಲು ಇರಬೇಕಿತ್ತು.

ವಿಶ್ವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4.70 ಲಕ್ಷ ದಾಟಿದೆ. ಭಾರತದಲ್ಲಿ ವೈರಸ್ ಸೋಂಕಿತರ ಸಂಖ್ಯೆ 600 ದಾಟಿದೆ. ಇಷ್ಟೇ ಅಲ್ಲ ಸಾವಿನ ಸಂಖ್ಯೆ 15ಕ್ಕೇರಿದೆ.
 

click me!