ಚೀನಾದ ವುಹಾನ್‌ನಿಂದ ಹಬ್ಬಿದ್ದ ಕೊರೋನಾ ಮಹಾಮಾರಿ| ವುಹಾನ್‌ನಿಂದ ಹಬ್ಬಿದ ವೈರಸ್‌ಗೆ ಇಡೀ ಜಗತ್ತೇ ತಲ್ಲಣ| ವುಹಾನ್ ಈ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖ
ವುಹಾನ್(ಮಾ.26): ಕೊರೋನಾ ಕೇಂದ್ರ ಸ್ಥಾನವಾದ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್ ಈ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾಗುತ್ತಿದೆ. ಈ ಹಿನ್ನೆಲೆ, ಈ ಭಾಗದಿಂದ ಚೀನಾದ ಇತರ ಭಾಗಗಳಿಗೆ ಕೊರೋನಾ ಹಬ್ಬದಂತೆ ತಡೆಯಲು ಕಳೆದ ಮೂರು ತಿಂಗಳಿಂದ ವುಹಾನ್ ಮೇಲೆ ಹೇರಲಾಗಿದ್ದ ಲಾಕ್‌ಡೌನ್ ತೆರವು ಮಾಡಲಾಗುತ್ತದೆ ಎಂದು ಚೀನಾ ಘೋಷಣೆ ಮಾಡಿದೆ.
ಇದರನ್ವಯ, ಹುಬೇ ಪ್ರಾಂತ್ಯ ಹಾಗೂ ವುಹಾನ್ ಮೇಲಿನ ನಿಷೇಧಾಜ್ಞೆಯು ಏ.8ರಂದು ತೆರವಾಗಲಿದೆ. ಈ ಮೂಲಕ ಈ ಭಾಗದ ಜನರ 3 ತಿಂಗಳ ದೀರ್ಘಾವಧಿ ಅಜ್ಞಾತ ವಾಸ ಅಂತ್ಯವಾಗಲಿದ್ದು, ಅವರು ಚೀನಾದ ಇತರೆ ಭಾಗಗಳಿಗೆ ತೆರಳಬಹುದಾಗಿದೆ.
undefined
ಕೊರೋನಾ ವೈರಸ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಲ್ಲದೆ, ಚೀನಾದ ಇತರ ಭಾಗಗಳಲ್ಲಿರುವ ಹುಬೇ ಪ್ರಾಂತ್ಯದ ಮೂಲದವರು ತಮ್ಮ ಊರುಗಳತ್ತ ಆಗಮಿಸಬಹುದಾಗಿದೆ. ಈ ನಡುವೆ ಚೀನಾದ ಮಹಾಗೋಡೆ ಕೆಲ ಭಾಗಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲು ಸರ್ಕಾರ ನಿರ್ಧರಿಸಿದೆ.
ಮಾರ್ಚ್ 19ರ ಬಳಿಕ ವುಹಾನ್‌ನಲ್ಲಿ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ವರದಿಯಾಗಿಲ್ಲ. ಇನ್ನು ಚೀನಾದ ಅಧ್ಯಕ್ಷ ಕ್ಸಿ ಜಿಪಿಂಗ್ ಕೂಡಾ ಮಾರ್ಚ್ 10 ರಂದು ಈ ಪ್ರದೇಶಕ್ಕೆ ಭೇಟಿ ನೀಡಿ, ಸರ್ಕಾರ ಈ ಮಾರಕ ವೈರಸ್ ನಿಯಂತ್ರಿಸುವಲ್ಲಿ ಸೂಕ್ತ ಕ್ರಮ ಕೈಗೊಂಡಿದೆ ಎಂಬ ವಿಶ್ವಾಸವಿದೆ ಎಂದಿದ್ದರು.