ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!

By Kannadaprabha NewsFirst Published Mar 30, 2020, 8:16 AM IST
Highlights

ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!| ಈಕೆಯೇ ಚೀನಾದ ವುಹಾನ್‌ನ ಸಿಗಡಿ ಮಾರಾಟಗಾರ್ತಿ ವೈ| ಈಕೆಗೆ ‘ಪೇಷಂಟ್‌ ಝೀರೋ’ ಎಂದು ಮರುನಾಮಕರಣ!| ಡಿ.10ರಂದೇ ಈಕೆಗೆ ಕೊರೋನಾ| ತಪಾಸಣೆಗೆ ಒಳಗಾದ ಮೊದಲ 27 ರೋಗಿಗಳಲ್ಲಿ ಈಕೆಯೂ ಒಬ್ಬಳು

ಬೀಜಿಂಗ್‌(ಮಾ.27): ಕೊರೋನಾ ವೈರಸ್‌ ಮೂಲವು ಚೀನಾದ ವುಹಾನ್‌ ಎಂಬುದು ಎಲ್ಲರಿಗೆ ಗೊತ್ತಿರುವ ವಿಚಾರ. ಆದರೆ ಕೊರೋನಾ ಮೊದಲು ತಗುಲಿದ್ದು ಯಾರಿಗೆ ಎಂದು ಹುಡುಕಾಡುತ್ತಿದ್ದ ಅಧಿಕಾರಿಗಳಿಗೆ, ಮೊದಲ ಹಂತದಲ್ಲಿ ಸೋಂಕು ತಗುಲಿದ್ದವರ ಪೈಕಿ ಓರ್ವ ರೋಗಿ ಪತ್ತೆಯಾಗಿದ್ದಾಳೆ.

ವೈ ಗುಯಿಕ್ಸಿಯಾನ್‌ ಎಂಬ ವುಹಾನ್‌ನ 57 ವರ್ಷದ ಸಮುದ್ರ ಆಹಾರ ‘ಸಿಗಡಿ’ ಮಾರಾಟಗಾರ್ತಿಯೇ ಮೊದಲ ಸೋಂಕಿತರಲ್ಲಿ ಒಬ್ಬಳು. ಈಕೆ ಕೊರೋನಾಕ್ಕೆ ಒಳಗಾದ ಮೊದಲ 27 ಜನರಲ್ಲಿದ್ದಳು ಎಂದು ವುಹಾನ್‌ ನಗರಪಾಲಿಕೆ ಹೇಳಿದೆ. ಹಾಗಾಗಿಯೇ ಈಕೆಗೆ ‘ಪೇಷಂಟ್‌ ಝೀರೋ’ ಎಂದು ಕರೆಯಲಾಗುತ್ತದೆ.

Fact Check| ಚೀನಾದಲ್ಲಿ ಬಾವಲಿಯೊಂದಿಗೇ ಸೆಕ್ಸ್: ಕೊರೋನಾ ಹುಟ್ಟಿಗೆ ಇದೇ ಕಾರಣನಾ?

ವೈಗೆ ಕಳೆದ ವರ್ಷ ಡಿಸೆಂಬರ್‌ 10ರಂದು ಮೊದಲ ಬಾರಿ ಫ್ಲೂ ರೀತಿಯ ಲಕ್ಷಣಗಳು ಕಾಣಿಸಿದವು. ಚಳಿಗಾಲದ ಕಾರಣ ಇದು ಸಾಮಾನ್ಯ ಎಂದು ಭಾವಿಸಿದ ಆಕೆ ಸ್ಥಳೀಯ ವೈದ್ಯರ ಬಳಿ ಹೋಗಿ ಇಂಜೆಕ್ಷನ್‌ ಪಡೆದಳು. ಆದರೆ ವ್ಯಾಧಿ ಅಷ್ಟಕ್ಕೇ ನಿಲ್ಲದೇ ತೀವ್ರಗೊಂಡಿತು. ಮಾರನೇ ದಿನವೇ ಆಕೆ ‘ಎಲೆವೆಂಥ್‌’ ಎಂಬ ದೊಡ್ಡ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಳು. ಜ್ವರ ನಿಯಂತ್ರಣಕ್ಕೆ ಬಾರದ ಕಾರಣ ವುಹಾನ್‌ನ ಅತಿ ದೊಡ್ಡ ‘ಯೂನಿಯನ್‌ ಆಸ್ಪತ್ರೆ’ಗೆ ಹೋದಳು. ಅಲ್ಲಿ ವೈದ್ಯರು ಆಕೆಗೆ ‘ನಿಮಗೆ ನಿರ್ದಯ ಕಾಯಿಲೆಯೊಂದು ಬಂದಿದೆ’ ಎಂದು ಹೇಳಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿಕೊಂಡು ಕ್ವಾರಂಟೈನ್‌ಗೆ (ಏಕಾಂತ ವಾಸ) ಗುರಿಪಡಿಸಿದರು. ಆಗ ಆಕೆಗೆ ಕೊರೋನಾ ವೈರಸ್‌ ತಗುಲಿರುವುದು ಖಚಿತಪಟ್ಟಿತ್ತು. ಸುದೈವವಶಾತ್‌ 1 ತಿಂಗಳಲ್ಲಿ ಆಕೆ ಗುಣಮುಖಳಾದಳು. ಜನವರಿಯಲ್ಲಿ ಆಸ್ಪತ್ರೆಯಿಂದ ಮನೆಗೆ ಮರಳಿದಳು.

‘ವುಹಾನ್‌ ಮಾರುಕಟ್ಟೆಯಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದೆ. ಆಗಲೇ ನನಗೆ ಕೊರೋನಾ ಬಂದಿರಬಹುದು’ ಎಂದು ಆಕೆ ಹೇಳುತ್ತಾಳೆ. ಅಲ್ಲದೆ, ‘ಚೀನಾ ಸರ್ಕಾರ ಮೊದಲೇ ತ್ವರಿತ ಕ್ರಮ ಜರುಗಿಸಿದ್ದರೆ ರೋಗ ಈ ರೀತಿ ವಿಶ್ವವ್ಯಾಪಿ ಆಗುತ್ತಿರಲಿಲ್ಲ’ ಎನ್ನುತ್ತಾಳೆ.

Fact check: ಕುಡುಕರಿಗೆ ಶುಭ ಸುದ್ದಿ, ಬಾರ್, ವೈನ್ ಶಾಪ್ ಓಪನ್, ಕಂಡಿಶನ್ ಅಪ್ಲೈ!

click me!