ಬಾಗಲಕೋಟೆಯಲ್ಲಿ ಕಾಯಿಪಲ್ಲೆ ಮಾರುಕಟ್ಟೆ ಆರಂಭ| ಸಂತೆಯಿಂದ ಜನರನ್ನು ಪೊಲೀಸರು ಚದುರಿಸಿದ ಪೊಲೀಸರು|ಸ್ಥಳಕ್ಕೆ ಹೆಚ್ಚುವರಿ ಡಿಎಆರ್ ಪೋಲಿಸ್ ಸಿಬ್ಬಂದಿ ನಿಯೋಜನೆ|
ಬಾಗಲಕೋಟೆ(ಮಾ.26): ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಚನೆ ಧಿಕ್ಕರಿಸಿ ನಗರದಲ್ಲಿ ಕಾಯಿಪಲ್ಲೆ ಮಾರುಕಟ್ಟೆ ಆರಂಭವಾಗಿತ್ತು. ಹೀಗಾಗಿ ಬೆಳ್ಳಂಬೆಳಿಗ್ಗೆ ಕೆಲವರಿಗೆ ಪೋಲಿಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ.
ನಗರದ ವಲ್ಲಭಾಯ್ ವೃತ್ತದ ಬಳಿ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಜನರು ಜಮಾಯಿಸಿದ್ದರು. ಮಾರುಕಟ್ಟೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸಂತೆಯಿಂದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಹೀಗಾಗಿ ಕ್ಷಣಾರ್ಧದಲ್ಲಿ ಸಂತೆಯೆಲ್ಲಾ ಖಾಲಿ ಖಾಲಿಯಾಗಿದೆ.
undefined
ಭಾರತ್ ಲಾಕ್‌ಡೌನ್ ಬಳ್ಳಾರಿ ಜನರಿಂದ ಉತ್ತಮ ಸ್ಪಂದನೆ: ಧನ್ಯವಾದ ತಿಳಿಸಿದ ಎಸ್‌ಪಿ
ಮನೆಮನೆಗೆ ತೆರಳಿ ಕಾಯಿಪಲ್ಲೆ ಮಾರಾಟ ಮಾಡಲು ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಜಿಲ್ಲಾಡಳಿತ ಸೂಚನೆ ಧಿಕ್ಕರಿಸಿ ಸಂತೆ ಸೇರಿದ್ದ ಜನರಿಗೆ ಲಾಠ ಏಟಿನ ರುಚಿ ತೋರಿಸಿದ್ದಾರೆ. ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ದಿನಸಿ ಅಂಗಡಿಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿದೆ. ಪರಸ್ಪರ ಅಂತರ ಕಾಯ್ದುಕೊಂಡು ದಿನಸಿ ನೀಡುವಂತೆ ಸೂಚಿಸಿತ್ತು . ಆದರೆ ದಿನಸಿ ಜೊತೆ ದಿಢೀರ್ ಅಂತ ಕಾಯಿಪಲ್ಲೆ ಸಂತೆಯಲ್ಲಿ ಜನರು ಸೇರಿದ್ದರು. ಸ್ಥಳಕ್ಕೆ ಧಾವಿಸಿದ ಪೋಲಿಸರು ಸಂತೆಯಲ್ಲಿದ್ದ ಜನರನ್ನು ಚದುರಿಸಿದ್ದಾರೆ.
ಇನ್ನು ನಗರದಲ್ಲಿ ಬೆಳ್ಳಂಬೆಳಿಗ್ಗೆ ಎಸ್.ಪಿ. ಲೋಕೇಶ್ ಅವರು ಸಿಟಿ ರೌಂಡ್ಸ್ ಹಾಕಿದ್ದಾರೆ. ಬೆಳಿಗ್ಗೆ ದಿಢೀರ್ ಅಂತ ಸಂತೆಯಲ್ಲಿ ಜನರು ಜಮಾವಣೆಯಾದ ಹಿನ್ನೆಲೆಯಲ್ಲಿ ಮಾಕೆ೯ಟ್ ಗೆ ಎಸ್.ಪಿ.ಲೋಕೇಶ್ ಭೇಡಿ ನೀಡಿದ್ದರು. ಈ ವೇಳೆ ತೆರೆದಿದ್ದ ಅಂಗಡಿಗಳನ್ನ ಸಂಪೂರ್ಣ ಬಂದ್ ಮಾಡಿಸಿದ್ದಾರೆ.
ಕೊರೋನಾ ಸಮರಕ್ಕೆ 'ಪಾರ್ಲೆ-ಜಿ' ಸಾಥ್: ಬಡವರಿಗೆ ಫ್ರೀ ಬಿಸ್ಕೆಟ್!
ಪರಿಸ್ಥಿತಿಯನ್ನ ಅವಲೋಕಿಸಿ ಸ್ಥಳಕ್ಕೆ ಹೆಚ್ಚುವರಿ ಡಿಎಆರ್ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ. ನಗರದ ಪಂಕಾ ಮಸೀದಿ ಬಳಿ ಬೆಳಿಗ್ಗೆ ಅಂಗಡಿ ತೆರದಿದ್ದರು. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ರಿದ್ದ ಜನರನ್ನು ಪೋಲಿಸರು ಚದುರಿಸಿದ್ದಾರೆ. ದಿನಸಿ ಅಂಗಡಿ ಹೊರತುಪಡಿಸಿ ಯಾವುದೇ ಅಂಗಡಿ ಮುಂಗಟ್ಟುಗಳನ್ನ ತೆರೆಯದಂತೆ ಸೂಚನೆ ನೀಡಿದ್ದಾರೆ.