ಸಾಮಾಜಿಕ ಅಂತರದ್ದೇ ಸಮಸ್ಯೆ: ಜನ ಜಂಗುಳಿಯಿಂದಾಗಿ ಡೇಂಜರ್ ಝೋನ್‌ನಲ್ಲಿ ಮಾರ್ಕೆಟ್‌!

By Kannadaprabha News  |  First Published Apr 3, 2020, 10:06 AM IST

ಯಶವಂತಪುರ ವ್ಯಾಪಾರಿಗಳ ನಿರ್ಲಕ್ಷ್ಯ| ಸರ್ಕಾರದ ಆದೇಶ ಪಾಲನೆ ಮಾಡದ ವರ್ತಕರು|  ಯಶವಂತಪುರ ಎಪಿಎಂಸಿಯ ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ ಮಾರುಕಟ್ಟೆಯನ್ನು ದಾಸನಪುರಕ್ಕೆ ಸ್ಥಳಾಂತರ|


ಬೆಂಗಳೂರು(ಏ.03): ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಕಟ್ಟು ನಿಟ್ಟಿನ ಆದೇಶ ನೀಡಿದ್ದರೂ ಸಹ ಯಶವಂತಪುರ ಎಪಿಎಂಸಿಯಲ್ಲಿ ಈ ಆದೇಶ ಪಾಲನೆಯಾಗದೇ ವರ್ತಕರು ಹಾಗೂ ಗ್ರಾಹಕರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವುದು ಆತಂಕಕಾರಿಯಾಗಿದೆ.

ಸಾಮಾಜಿಕ ಅಂತರ ಪಾಲನೆ ಮಾಡುವ ದೃಷ್ಟಿಯಿಂದಲೇ ಯಶವಂತಪುರ ಎಪಿಎಂಸಿಯ ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ ಮಾರುಕಟ್ಟೆಯನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೂ ವರ್ತಕರು, ಗ್ರಾಹಕರು ಸರ್ಕಾರದ ಆದೇಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸದಾ ಜನಜಂಗುಳಿ, ಸಂಚಾರ ದಟ್ಟಣೆಯಿಂದ ಯಶವಂತಪುರ ಮಾರುಕಟ್ಟೆಅಪಾಯಕಾರಿ ವಲಯವಾಗಿ ಮಾರ್ಪಟ್ಟಿದೆ ಎಂದು ವರ್ತಕರೊಬ್ಬರು ಬೇಸರ ವ್ಯಕ್ತಪಡಿಸಿದರು.

Tap to resize

Latest Videos

ಮೆಣಸು ದರ ಕುಸಿತ: ಬೆಳಗಾವಿ ರೈತ ಆತ್ಮಹತ್ಯೆ

ಯಶವಂತಪುರ ಎಪಿಎಂಸಿಯಲ್ಲಿ ದಿನನಿತ್ಯ ಸಾವಿರಾರು ಕೋಟಿ ವ್ಯಾಪಾರ ವಹಿವಾಟು ನಡೆಯುತ್ತದೆ. ಸಾವಿರಕ್ಕೂ ಹೆಚ್ಚು ಮಳಿಗೆಗಳಿವೆ. ವರ್ತಕರು ಕೂಲಿ ಕಾರ್ಮಿಕರು, ಹಮಾಲಿಗಳು, ಚಿಲ್ಲರೆ ವ್ಯಾಪಾರಿಗಳು, ಗ್ರಾಹಕರು, ಲಾರಿ,ಆಟೋ ಚಾಲಕರು ಹೀಗೆ ಸಾವಿರಾರು ಜನರು ಮಾರುಕಟ್ಟೆಗೆ ಬರುತ್ತಾರೆ. ಹೀಗಾಗಿ ಸಂಚಾರ ದಟ್ಟಣೆ ಹೆಚ್ಚಿದೆ. ಇನ್ನೊಂದೆಡೆ ವ್ಯಾಪಾರವಾದರೆ ಸಾಕು ಎಂಬ ಭಾವನೆ ವರ್ತಕರಲ್ಲಿದೆ. ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಧಾವಂತ ಗ್ರಾಹಕರು, ಖರೀದಿದಾರದ್ದಾಗಿದೆ. ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ವರ್ತಕರು ಸಹ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ಈ ನಡುವೆ ಗ್ರಾಹಕರೂ ಸಾಮಾಜಿಕ ಅಂತರಕ್ಕೆ ಹೆಚ್ಚು ಗಮನಹರಿಸುತ್ತಿಲ್ಲ.

ಕಿರಿಕಿರಿ ಜತೆಗೆ ಕೊರೋನಾ ಸೋಂಕು ಹರಡುವ ಭಯ ಕೆಲ ವರ್ತಕರು, ಕೂಲಿ ಕಾರ್ಮಿಕರದ್ದಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
 

click me!