ಇಡೀ ವಿಶ್ವಕ್ಕೆ ವಿಶ್ವವೇ ಕೊರೊನಾ ಸೋಂಕಿನಿಂದ ಪಾರಾಗಲು ಹರಸಾಹಸ ಪಡುತ್ತಿರುವಾಗ ಇಲ್ಲೊಂದು ಹಳ್ಳಿಯ ಜನ ತಮ್ಮ ಗ್ರಾಮವನ್ನು ಕೊರೋನಾ ಸೋಂಕಿನಿಂದ ತಡೆಯಲು ಸ್ವಯಂ ಪರಿಪಾಲನೆಗೆ ಮುಂದಾಗಿ ಮಾದರಿಯಾಗಿದ್ದಾರೆ. ಗ್ರಾಮಕ್ಕೆ ದಿಗ್ಬಂಧನ ವಿಧಿಸಿಕೊಂಡು ನಿರಾತಂಕವಾಗಿ ಬದುಕುತ್ತಿದ್ದಾರೆ.
ಕೋಲಾರ(ಮಾ.25): ಇಡೀ ವಿಶ್ವಕ್ಕೆ ವಿಶ್ವವೇ ಕೊರೊನಾ ಸೋಂಕಿನಿಂದ ಪಾರಾಗಲು ಹರಸಾಹಸ ಪಡುತ್ತಿರುವಾಗ ಇಲ್ಲೊಂದು ಹಳ್ಳಿಯ ಜನ ತಮ್ಮ ಗ್ರಾಮವನ್ನು ಕೊರೋನಾ ಸೋಂಕಿನಿಂದ ತಡೆಯಲು ಸ್ವಯಂ ಪರಿಪಾಲನೆಗೆ ಮುಂದಾಗಿ ಮಾದರಿಯಾಗಿದ್ದಾರೆ. ಗ್ರಾಮಕ್ಕೆ ದಿಗ್ಬಂಧನ ವಿಧಿಸಿಕೊಂಡು ನಿರಾತಂಕವಾಗಿ ಬದುಕುತ್ತಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಗೊಲ್ಲಹಳ್ಳಿ ಗ್ರಾಮದಲ್ಲಿ ಇಂತಹುದೊಂದು ದೃಶ್ಯ ಕಂಡು ಬಂತು. ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಗ್ರಾಮದ ಹಿರಿಯರೆಲ್ಲರೂ ಒಂದೆಡೆ ಸೇರಿ ನಡೆಸಿ, ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಇನ್ನೊಂದು ಕಡೆ ಗ್ರಾಮಕ್ಕೆ ಯಾವುದೇ ವಾಹನಗಳು ಬಾರದಂತೆ ತಡೆಯೊಡ್ಡುತ್ತಿದ್ದರು.
undefined
2 ತಿಂಗಳು ಗ್ರಾಮದಲ್ಲಿ ದಿಗ್ಬಂಧನ
ಹೌದು ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ಪರಿಸ್ಥಿತಿಯಲ್ಲಿ ಇಲ್ಲೊಂದು ಗ್ರಾಮ ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲ ತೀರ್ಮಾನವೊಂದನ್ನ ತೆಗೆದುಕೊಂಡು ಎಲ್ಲರ ಗಮನ ಸೆಳೆದಿತ್ತು. ಎಂ.ಗೊಲ್ಲಹಳ್ಳಿ ಗ್ರಾಮ ಸ್ವಯಂ ದಿಗ್ಬಂಧನ ಮಾಡಿಕೊಳ್ಳುವ ಮೂಲಕ ಗ್ರಾಮಕ್ಕೆ ಕೊರೊನಾ ಕಾಲಿಡದಂತೆ ಕೊರೊನಾಗೆ ಎಚ್ಚರಿಕೆ ನೀಡುತ್ತಿದೆ. ಎರಡು ತಿಂಗಳ ಕಾಲ ಗ್ರಾಮದಿಂದ ಯಾರೂ ಹೊರ ಹೋಗದಂತೆ, ಹೊರಗಿನಿಂದ ಗ್ರಾಮಕ್ಕೆ ಯಾರೂ ಬಾರದಂತೆ ನಿಬಂರ್‍ಧ ವಿಧಿಸಿದೆ.
ಕೊರೋನಾ ಕಾಟದಿಂದ ಪಿಜಿ ನಿವಾಸಿಗಳಿಗೆ ಸಂಕಷ್ಟ!
ಅಲ್ಲದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಐದು ರಸ್ತೆಗಳಲ್ಲಿ ಗ್ರಾಮಸ್ಥರೇ ಚೆಕ್ ಪೋಸ್ಟ್ ಹಾಕಿ ಅಲ್ಲಿ ಗ್ರಾಮದ ಜನರೇ ಚೆಕ್ ಪೋಸ್ಟ್‌ಗಳಲ್ಲಿ ಕಾವಲು ಕಾಯುವ ಕೆಲಸ ಮಾಡುತ್ತಾ ಗ್ರಾಮಕ್ಕೆ ಹೊರಗಿನವರನ್ನು ಬಾರದಂತೆ ನೋಡಿಕೊಳ್ಳಲಾಗುತ್ತಿದೆ.
ಪಕ್ಕದ ರಾಜ್ಯ ಆಂಧ್ರಪ್ರದೇಶಕ್ಕೆ ಕೇವಲ ಕೂಗಳತೆ ದೂರದಲ್ಲಿರುವ ಗ್ರಾಮಕ್ಕೆ ಅಲ್ಲಿಂದಲೂ ಜನರು ಬರ್ತಾರೆ ಹಾಗೆಯೇ ಕರ್ನಾಟಕದ ವಿವಿಧ ಭಾಗಗಳಿಂದ ಗ್ರಾಮಕ್ಕೆ ವೈರಸ್ ಹರಡುವ ಭೀತಿ ಇದೆ, ಆಂಧ್ರ ಪ್ರದೇಶ ಎರಡೂ ರಾಜ್ಯಗಳಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ ಅನ್ನೋ ದೃಷ್ಟಿಯಿಂದ ಎಚ್ಚೆತ್ತುಕೊಂಡಿರುವ ಈ ಗ್ರಾಮಸ್ಥರು ತಮ್ಮ ಗ್ರಾಮವನ್ನು ತಾವೇ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.
ಮುಂಜಾಗ್ರತಾ ಕ್ರಮಗಳು
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಅವಶ್ಯಕತೆ ಇರುವ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಳ್ಳುವುದು. ನಂತರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಚೆಕ್ ಪೋಸ್ಟ್ ಹಾಕಿ ಅಲ್ಲಿ ಗ್ರಾಮದವರೇ ಕಾವಲು ಕಾಯೋದು, ಗ್ರಾಮದಲ್ಲಿ ಉತ್ಪಾದನೆ ಮಾಡುವ ಹಾಲು, ತರಕಾರಿಯಲ್ಲಿ ಗ್ರಾಮದಲ್ಲೇ ಹಂಚಿಕೆ ಮಾಡಿಕೊಳ್ಳುವುದು, ಗ್ರಾಮವನ್ನು ಪ್ರತಿದಿನ ಎಲ್ಲರೂ ಸೇರಿ ಶುಚಿಗೊಳಿಸೋದು. ಗ್ರಾಮದಲ್ಲಿ ಸಂಗ್ರಹವಾಗುವ ಹಸುವಿನ ಗಂಜಲವನ್ನು ಗ್ರಾಮಕ್ಕೆ ರೋಗ ನಿರೋಧಕ ಶಕ್ತಿ ನೀಡುವ ಔಷಧವಾಗಿ ಬಳಕೆ ಮಾಡೋದು, ಹೀಗೆ ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳಲು ನಿರ್ಧರಿಸಿದ್ದಾರೆ.