ಕೂಲಿ ಕಾರ್ಮಿಕರನ್ನ ರಾಜಸ್ಥಾನಕ್ಕೆ ಕಳುಹಿಸಲು ವಿಜಯಪುರ ಜಿಲ್ಲಾಡಳಿತ ನಿರ್ಧಾರ

By Suvarna NewsFirst Published Mar 29, 2020, 11:47 AM IST
Highlights

2 ಸಾವಿರ ಕೂಲಿ ಕಾರ್ಮಿಕರನ್ನು ರಾಜಸ್ಥಾನದ ಗಡಿವರೆಗೆ ತಲುಪಿಸಲು ಜಿಲ್ಲಾಡಳಿತ ಬಸ್ ವ್ಯವಸ್ಥೆ| ಮಹಾರಾಷ್ಟ್ರದ ಅಧಿಕಾರಿಗಳ ಜೊತೆಗೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಚರ್ಚೆ| ಜಿಲ್ಲಾಡಳಿತದ ನಿರ್ಧಾರದಿಂದ ಕೂಲಿ ನಿಟ್ಟುಸಿರು ಬಿಟ್ಟ ಕಾರ್ಮಿಕರು| 

ವಿಜಯಪುರ(ಮಾ.29): ಜಿಲ್ಲೆಯ ಧೂಳಖೇಡ ಚೆಕ್‌ಪೋಸ್ಟ್ ಬಳಿ ತಡೆದಿದ್ದ ರಾಜಸ್ಥಾನ ಮೂಲದ ಸುಮಾರು 2 ಸಾವಿರ ಕೂಲಿ ಕಾರ್ಮಿಕರನ್ನು ರಾಜಸ್ಥಾನದ ಗಡಿವರೆಗೆ ತಲುಪಿಸಲು ಜಿಲ್ಲಾಡಳಿತ ಬಸ್ ವ್ಯವಸ್ಥೆ ಮಾಡಿದೆ. 

ಕೂಲಿ ಕಾರ್ಮಿಕರನ್ನು ರಾಜಸ್ಥಾನ ಗಡಿಗೆ ಕರೆದುಕೊಂಡು ಹೋಗಲು ಬಸ್‌ಗಳು ಸಜ್ಜಾಗಿ ಬಂದಿವೆ. ಮಹಾರಾಷ್ಟ್ರ ಸರ್ಕಾರ ಕೂಡಾ ಈ ಬಸ್‌ಗಳಿಗೆ ತೆರಳಲು ಅನುಮತಿ ನೀಡಿದೆ. 

ನಿನ್ನೆ(ಶನಿವಾರ) ತಡ ರಾತ್ರಿವರೆಗೆ ಮಹಾರಾಷ್ಟ್ರದ ಅಧಿಕಾರಿಗಳ ಜೊತೆಗೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು ಎರಡು ಸಾವಿರ ಕೂಲಿ ಕಾರ್ಮಿಕರನ್ನ ಬಸ್‌ನಲ್ಲಿ ಕರೆದುಕೊಂಡು ಹೋಗಿ ರಾಜಸ್ಥಾನಕ್ಕೆ ಬಿಟ್ಟು ಬರಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಡಳಿತದ ನಿರ್ಧಾರದಿಂದ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ.

click me!