ಕೊರೋನಾ ಸೋಂಕಿತ ವ್ಯಕ್ತಿ ತಿಂಡಿ ತಿಂದ ವಿಡಿಯೋ ವೈರಲ್‌!

Kannadaprabha News   | Asianet News
Published : Mar 29, 2020, 11:29 AM IST
ಕೊರೋನಾ ಸೋಂಕಿತ ವ್ಯಕ್ತಿ ತಿಂಡಿ ತಿಂದ ವಿಡಿಯೋ ವೈರಲ್‌!

ಸಾರಾಂಶ

ಕೊರೋನಾ ಸೋಂಕಿತ ತಿಂಡಿ ತಿನ್ನುವ ವಿಡಿಯೋ ವೈರಲ್‌| ಗೋವಾದ ಹೋಟೆಲ್‌ ವೊಂದರಲ್ಲಿ ತಮ್ಮ ಸಹೋದರ ಜತೆಗೆ ತಿಂಡಿ ತಿಂದಿದ್ದ ಕೊರೋನಾ ಸೋಂಕಿತ|ಈ ವಿಡಿಯೋ ಕೋವಿಡ್‌ 19 ಸೋಂಕಿತ ವ್ಯಕ್ತಿಯೇ ಎನ್ನುವುದು ಖಚಿತವಾಗಬೇಕಿದೆ|

ಕಾರವಾರ(ಮಾ.29): ಭಟ್ಕಳದ ಕೋವಿಡ್‌ 19 ಸೋಂಕಿತ ವ್ಯಕ್ತಿ ನಗರದ ಹೋಟೆಲ್‌ ಒಂದರಲ್ಲಿ ತಿಂಡಿ ತಿಂದಿರುವುದು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಾ. 19ರಂದು ದುಬೈನಿಂದ ವಿಮಾನ ಮೂಲಕ ಹೊರಟಿದ್ದು, 20 ರಂದು ಬೆಳಗಿನಜಾವ 4.30ಕ್ಕೆ ಗೋವಾಕ್ಕೆ ಬಂದು ಇಳಿದಿದ್ದರು. ಅಲ್ಲಿಂದ ಕಾರಿನಲ್ಲಿ ಪ್ರಯಾಣಿಸಿ 6.45ರ ವೇಳೆಗೆ ನಗರದ ಹೋಟೆಲ್‌ ಒಂದರಲ್ಲಿ ತಮ್ಮ ಸಹೋದರ ಜತೆಗೆ ತಿಂಡಿ ತಿಂದಿದ್ದಾರೆ.

ಕೊರೋನಾ ಪೀಡಿತರು ಕಾರವಾರಕ್ಕೆ ಶಿಫ್ಟ್‌!

ಹೋಟೆಲ್‌ಗೆ ಆಗಮಿಸಿದ್ದು, ಮಾಣಿ ತಿಂಡಿ ತಂದು ಇಟ್ಟಿರುವುದು, ಬಡೆಸೊಪ್ಪು ತಂದಿಟ್ಟ ಹಾಗೂ ವ್ಯಕ್ತಿ ಅಲ್ಲಿಂದ ಹೊರಟ ವಿಡಿಯೋ ವೈರಲ್‌ ಆಗಿದೆ. ಇದು ಸಿಸಿ ಟಿವಿ ವಿಡಿಯೋವಾಗಿದೆ. ಆದರೆ, ಈ ವ್ಯಕ್ತಿ ಆಗಮಿಸಿದ ವೇಳೆಗೆ ಹೆಚ್ಚಿನ ಗ್ರಾಹಕರು ಇರಲಿಲ್ಲ. ಆದರೆ, ಈ ವಿಡಿಯೋ ಕೋವಿಡ್‌ 19 ಸೋಂಕಿತ ವ್ಯಕ್ತಿಯೇ ಎನ್ನುವುದು ಖಚಿತವಾಗಬೇಕಿದೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?