ಲಾಕ್‌ಡೌನ್‌: ಗಗನಕ್ಕೇರಿದ ತರಕಾರಿ ಬೆಲೆ

By Kannadaprabha NewsFirst Published Mar 29, 2020, 12:38 PM IST
Highlights

ಜಿಲ್ಲೆಯಲ್ಲಿ ಲಾಕ್‌ಡೌನ್‌ ಬಿಸಿ ತರಕಾರಿ ಬೆಲೆಗೂ ತಟ್ಟಿದೆ. ಜನತಾ ಕಫä್ರ್ಯ ನಂತರ ಏರಿದ ಬೆಲೆ ಕೆಳಗೆ ಇಳಿಯುವ ಲಕ್ಷಣ ಕಾಣುತ್ತಿಲ್ಲ! ಚಿಕ್ಕಮಗಳೂರಿಗೆ ಸ್ಥಳೀಯ ಹಾಗೂ ನೆರೆಯ ಹಾಸನ ಜಿಲ್ಲೆಯಿಂದ ಅತಿ ಹೆಚ್ಚಾಗಿ ತರಕಾರಿ ಬರುತ್ತದೆ. ಆದರೆ, ಕೊರೋನಾ ಭೀತಿಯಿಂದ ರಸ್ತೆಗೆ ಸರಕು ಸಾಗಾಣಿಕೆ ವಾಹನಗಳು ಇಳಿಯುತ್ತಿಲ್ಲ.

ಚಿಕ್ಕಮಗಳೂರು(ಮಾ.29): ಜಿಲ್ಲೆಯಲ್ಲಿ ಲಾಕ್‌ಡೌನ್‌ ಬಿಸಿ ತರಕಾರಿ ಬೆಲೆಗೂ ತಟ್ಟಿದೆ. ಜನತಾ ಕಫä್ರ್ಯ ನಂತರ ಏರಿದ ಬೆಲೆ ಕೆಳಗೆ ಇಳಿಯುವ ಲಕ್ಷಣ ಕಾಣುತ್ತಿಲ್ಲ! ಚಿಕ್ಕಮಗಳೂರಿಗೆ ಸ್ಥಳೀಯ ಹಾಗೂ ನೆರೆಯ ಹಾಸನ ಜಿಲ್ಲೆಯಿಂದ ಅತಿ ಹೆಚ್ಚಾಗಿ ತರಕಾರಿ ಬರುತ್ತದೆ. ಆದರೆ, ಕೊರೋನಾ ಭೀತಿಯಿಂದ ರಸ್ತೆಗೆ ಸರಕು ಸಾಗಾಣಿಕೆ ವಾಹನಗಳು ಇಳಿಯುತ್ತಿಲ್ಲ.

ಇದರಿಂದಾಗಿ ಸ್ಥಳೀಯವಾಗಿ ಸಿಗುತ್ತಿರುವ ತರಕಾರಿ ದುಬಾರಿಯಾಗಿದೆ. ಮಾರಾಟಗಾರರು ಹೆಚ್ಚಿನ ಬಂಡವಾಳ ಹಾಕಿ ತರಕಾರಿ ಖರೀದಿ ಮಾಡುತ್ತಿಲ್ಲ. ಬೆರಳೆಣಿಕೆಯಷ್ಟುಮಂದಿ ಮಾತ್ರ ಖರೀದಿಗೆ ಬರುತ್ತಿದ್ದಾರೆ.

ಸಿಎಂ ಬಿಎಸ್‌ವೈ ನಿವಾಸದ ಮುಂದೆ ಸುಳಿದಾಡಿದ ಸೋಂಕಿತೆ: ಕಟ್ಟೆಚ್ಚರ

ಕೊರೋನಾ ಜಿಲ್ಲೆಗೆ, ರಾಜ್ಯಕ್ಕೆ ಪ್ರವೇಶ ಮಾಡುವ ಮೊದಲು ಕೆ.ಜಿ.ಗೆ .20 ಇದ್ದ ಟೊಮೆಟೋ ಬೆಲೆ ಇದೀಗ .40 ಕ್ಕೆ ಏರಿಕೆಯಾಗಿದೆ. .30 ಇದ್ದ ಕೆ.ಜಿ. ಈರುಳ್ಳಿ ಬೆಲೆ .50 ತಲುಪಿದೆ. ಇದರಿಂದ ತರಕಾರಿ ಕೊಳ್ಳುವ ಜನರಲ್ಲಿ ಕಣ್ಣೀರು ತರಿಸಿದೆ. ಇನ್ನುಳಿದಂತೆ ಎಲ್ಲ ತರಕಾರಿಗಳ ಬೆಲೆಯೂ ತುಸು ದುಬಾರಿಯಾಗಿವೆ.

ಪ್ರತಿ ಕೆ.ಜಿ.ಗೆ ರು.ಗಳಲ್ಲಿ ತರಕಾರಿ:

ಕೋಸು .30, ಹೂ ಕೋಸು .50, ಬದನೇಕಾಯಿ .40, ನುಗ್ಗೆ .60, ಬೀನ್ಸ್‌ .80, ದಪ್ಪ ಮೆಣಸಿನಕಾಯಿ .60, ಕ್ಯಾರೆಟ್‌ .60, ಸಾಂಬರ್‌ ಸೌತೆಕಾಯಿ .40, ಬೆಳ್ಳುಳ್ಳಿ- .200, 1 ಕಟ್ಟು ಕೊತಂಬರಿ ಸೊಪ್ಪು .5.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದಾಗ ಚಿಕ್ಕಮಗಳೂರು ಜಿಲ್ಲಾದ್ಯಂತ ತರಕಾರಿ ಬೆಲೆ, ಪ್ರತಿ ಕೆ.ಜಿ.ಗೆ ಕನಿಷ್ಠ .20 ರಿಂದ .30 ಹೆಚ್ಚಳವಾಗಿದೆ. ಕೊರೋನಾ ಕಫä್ರ್ಯ ಬೇರೆ ಜಾರಿಯಾಗಿರುವುದರಿಂದ ಗ್ರಾಹಕರು ಬೆಲೆ ಏರಿಕೆ ಬಿಸಿಯಿಂದ ಹೈರಾಣಾಗಿದ್ದಾರೆ.

click me!