ಕೊರೋನಾ ಹೋರಾಟಕ್ಕೆ ಧಾವಿಸಿದ ಹೆಗಡೆ, ಕೋಟಿ ರೂ. ನೀಡಿದ ಸಂಸದ

By Suvarna NewsFirst Published Apr 1, 2020, 2:59 PM IST
Highlights

ಕೊರೋನಾ ವಿರುದ್ಧದ ಹೋರಾಟಕ್ಕೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ/ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ 1 ಕೋಟಿ ರೂ./ ಉತ್ತರ ಕನ್ನಡದ ಭಟ್ಕಳದಲ್ಲಿ ಕಂಡುಬಂದಿದ್ದ ಸೋಂಕಿತರು

ಶಿರಸಿ(ಏ. 01)  ಕೊರೋನಾ ಹಾವಳಿಗೆ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಈ ನಡುವೆ ಜನಪ್ರತಿನಿಧಿಗಳು ಸಹ ಅನುದಾನ ನೀಡುತ್ತಲೇ ಬಂದಿದ್ದಾರೆ. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಕೊರೋನಾ ವಿರುದ್ಧದ ಹೋರಾಟಕ್ಕೆ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ 1 ಕೋಟಿ ರೂ. ನೀಡಿದ್ದಾರೆ.

ಕರೋನಾ ಸಂಬಂಧಿಸಿದಂತೆ ಕೇಂದ್ರ ಸರಕಾರ ನೀಡಿದ ಸೂಚನೆಯಂತೆ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ತಮ್ಮ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ  1 ಕೋಟಿ ರೂ. ನೀಡಿದ್ದಾರೆ

ಕೊರೋನಾ ಅಟ್ಟಹಾಸ; ಸೂಕ್ಷ್ಮ ಪ್ರದೇಶವಾದ ಕರ್ನಾಟಕದ 2 ಜಿಲ್ಲೆ!

ಈ ಹಿಂದೆ ದೇಶದ ಎಲ್ಲಾ ಬಿಜೆಪಿ ಸಂಸದರು ತಮ್ಮ MPLAD ಅಡಿಯಲ್ಲಿ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರ ಸೂಚನೆ ನೀಡಿತ್ತು. ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಧ್ಯಕ್ಷರಿಗೆ ಮತ್ತು ನಿರ್ದೇಶಕರಿಗೆ ಪತ್ರ ಮೂಲಕ ಹೆಗಡೆ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ಹಾವಳಿಗೆ ಉತ್ತರ ಕನ್ನಡ ಜಿಲ್ಲೆಯೂ ತತ್ತರಿಸಿತ್ತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 7 ಸೋಂಕಿತರು ಕಂಡುಬಂದಿದ್ದು ಆತಂಕ ಹೆಚ್ಚಿಸತ್ತು. ಕೊರೋನಾ ತಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಂದಾಗಿ ಹೋರಾಟ ಮಾಡುತ್ತಿದ್ದು ನಾಗರಿಕರು ಸರ್ಕಾರದ ಸೂಚನೆ ಪಾಲಿಸಬೇಕಾಗಿದೆ.

 

 

 


 

pic.twitter.com/7ZrHVq6X6e

— Anantkumar Hegde (@AnantkumarH)
click me!