ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಇನ್ನೂ 14 ದಿನ ಇದ್ದು, ಈ ಮಧ್ಯೆ ರಸ್ತೆಗಿಳಿಯುವವರಿಗೆ ಡಿಜಿಪಿ ಪ್ರವೀಣ್ ಸೂದ್ ಖಡಕ್ ಎಚ್ಚರಿಕೆ ನಿಡಿದ್ದಾರೆ.
ಬೆಂಗಳೂರು, (ಏ.01): ದೇಶದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 14ರ ವರೆಗೆ ರಾಜ್ಯದಲ್ಲಿ ವಾಹನ ಓಡಾಟವನ್ನು ನಿರ್ಬಂಧಿಸಲಾಗಿದೆ. ನಿಯಮವನ್ನುಉಲ್ಲಂಘಿಸಿದರೆ ಎಲ್ಲಾ ವಾಹಗಳನ್ನು ಜಪ್ತಿ ಮಾಡಲಾಗುವುದು. ಇದು ಏಪ್ರಿಲ್ ಫೂಲ್ ಸಂದೇಶ ಅಲ್ಲ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದು ಏಪ್ರಿಲ್ ಫೂಲ್ ಅಲ್ಲ. ದ್ವಿ-ಚಕ್ರ ವಾಹನ, ಕಾರು ಮುಂತಾದ ವಾಹನಗಳು ಏಪ್ರಿಲ್ 14ರವರೆಗೆ ರಸ್ತೆಗೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ನೀವು ಆದೇಶವನ್ನು ಉಲ್ಲಂಘಿಸಿದರೆ ನಿಮ್ಮ ವಾಹನಗಳನ್ನು ಸೀಜ್ ಮಾಡುವುದು ಗ್ಯಾರಂಟಿ ಎಂದು ಟ್ವೀಟ್ ಮಾಡುವ ಮೂಲಕ ಸೂಚನೆ ನೀಡಿದ್ದಾರೆ. ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋವಿಡ್ 19 ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಮಧ್ಯೆಯೂ ಕೆಲವರು ಸುಖಾಸುಮ್ಮನೆ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ.
ಈಗಾಗಲೇ ನಿಯಮ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಕೆಲವೆಡೆ ಆರತಿ ಬೆಳಗಿದರೆ, ಇನ್ನೂ ಕೆಲವೆಡೆ ಬಸ್ಕಿ ಹೊಡೆಸಿ, ಚರಂಡಿ ಕ್ಲೀನ್ ಹಾಗೂ ಕಸ್ ಗುಡಿಸುವ ಶಿಕ್ಷೆಯನ್ನು ಕೂಡ ಪೊಲೀಸರು ನೀಡಿದ್ದಾರೆ.
ಅಲ್ಲದೆ ಕೊರೋನಾ ಮಾದರಿಯ ಹೆಲ್ಮೆಟ್ ಹಾಕಿಕೊಂಡು ಪರಿಸ್ಥಿತಿಯ ಗಂಭಿರತೆಯನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಕೂಡ ಮಾಡಿದ್ದಾರೆ. ಆದರೂ ಜನ ಕ್ಯಾರೇ ಎನ್ನದೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಈ ಎಚ್ಚರಿಕೆ ನೀಡಿದ್ದಾರೆ.
ಇನ್ಮುಂದೆ ವಾಹನ ವಾಹನಗಳು ರಸ್ತೆಗೆ ಬಂದ್ರೆ, ನೇರವಾ ಅಂತಹ ವಾಹನಗಳನ್ನು ಸೀಜ್ ಮಾಡಿ ಎಂದು ಈಗಾಗಲೇ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.