ಕಲ್ಲಂಗಡಿ ಕತ್ತರಿಸಿ ಕೊಡಬೇಡಿ ಎಂದಿದ್ದಕ್ಕೆ ಪುಂಡರ ಉದ್ಧಟತನ: ಇಬ್ಬರ ಬಂಧನ

By Kannadaprabha NewsFirst Published Apr 3, 2020, 8:51 AM IST
Highlights

ಆರೋಗ್ಯ ಅಧಿಕಾರಿ ಜತೆ ಅನುಚಿತ ವರ್ತನೆ|ಇಬ್ಬರ ಬಂಧನ| ಬಿಬಿಎಂಪಿ ಆರೋಗ್ಯ ನಿರೀಕ್ಷಕಿ ಅನೀಸ್‌ ಫಾತಿಮಾ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನ| 

ಬೆಂಗಳೂರು(ಏ.03): ಕಲ್ಲಂಗಡಿ ಹಣ್ಣು ಕತ್ತರಿಸಿ ಕೊಡಬೇಡಿ ಎಂದು ಹೇಳಿದ್ದಕ್ಕೆ ಆರೋಗ್ಯ ಅಧಿಕಾರಿ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಇಬ್ಬರನ್ನು ಆರ್‌.ಟಿ.ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಲ್ಲಂಗಡಿ ವ್ಯಾಪಾರಿ ನಸೀರ್‌ ಹಾಗೂ ರಿಜ್ವಾನ್‌ ಬಂಧಿತನಾಗಿದ್ದು, ಬಿಬಿಎಂಪಿ ಆರೋಗ್ಯ ನಿರೀಕ್ಷಕಿ ಅನೀಸ್‌ ಫಾತಿಮಾ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ತಿಳಿಸಿದ್ದಾರೆ.

ಲಾಕ್‌ಡೌನ್‌ಗೂ ಕ್ಯಾರೇ ಎನ್ನುತ್ತಿಲ್ಲ ಜನ: ಅಪಾಯ ತಪ್ಪಿದ್ದಲ್ಲ!

ಬೀದಿ ಬದಿಯಲ್ಲಿ ನಸೀರ್‌ ಹಾಗೂ ರಿಜ್ವಾನ್‌ ಕಲ್ಲಂಗಡಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಹಣ್ಣನ್ನು ಗ್ರಾಹಕರಿಗೆ ಕತ್ತರಿಸಿ ಮಾರಾಟ ಮಾಡದಂತೆ ಬಿಬಿಎಂಪಿ ಆರೋಗ್ಯ ನಿರೀಕ್ಷಿ ಅನೀಸ್‌ ಸೂಚಿಸಿದ್ದಾರೆ. ಆದರೆ ಈ ಮಾತಿಗೆ ಆಕ್ಷೇಪಿಸಿ ಆರೋಪಿಗಳು ಉದ್ಧಟತನ ತೋರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
 

click me!