ಲಾಕ್‌ಡೌನ್‌ಗೂ ಕ್ಯಾರೇ ಎನ್ನುತ್ತಿಲ್ಲ ಜನ: ಅಪಾಯ ತಪ್ಪಿದ್ದಲ್ಲ!

By Kannadaprabha News  |  First Published Apr 3, 2020, 8:37 AM IST

ಯಲಹಂಕದಲ್ಲಿ ಸಂಜೆ ಆಗುತ್ತಿದ್ದಂತೆ ಬೀದಿಗೆ ಇಳಿಯುವ ಜನರು| ಗಾಳಿಗೆ ತೂರಿದ ಸರ್ಕಾರದ ಆದೇಶ| ರೋಗ ಉಲ್ಬಣಕ್ಕೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ| ಯುವಕರು ಗ್ರಾಮದ ಕಟ್ಟೆ ಆಯಕಟ್ಟಿನ ಪ್ರದೇಶದಲ್ಲಿ ಒಟ್ಟಿಗೆ ಸೇರುತ್ತಿದ್ದಾರೆ|


ಯಲಹಂಕ(ಏ.03): ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೆಂಬಲ ನೀಡುವ ಇಲ್ಲಿನ ನಾಗರಿಕರು ಸಂಜೆಯಾಗುತ್ತಿದ್ದಂತೆ ಬಡಾವಣೆಗಳಲ್ಲಿ ಬೀದಿಗಿಳಿಯುತ್ತಿದ್ದಾರೆ.

ವೈರಸ್‌ ವಿರುದ್ಧ ಹೋರಾಟಕ್ಕೆ ಸರ್ಕಾರ ಲಾಕ್‌ಡೌನ್‌ ಮಾಡಿರುವ ಬೆನ್ನಲ್ಲೆ ಸರ್ಕಾರದ ಮಹತ್ವದ ತೀರ್ಮಾನವನ್ನು ಬೆಂಬಲಿಸುವ ಜನ ಬಿಬಿಎಂಪಿ ವ್ಯಾಪ್ತಿಯ ಬಡಾವಣೆಯಲ್ಲಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಸಂಜೆ 6ರ ನಂತರ 9ರಯವರೆಗೆ ಹೊರಬಂದು ಜನಜಂಗುಳಿಯಲ್ಲಿ ಎಂದಿನಂತೆ ಓಡಾಟ, ವಿಹಾರ ವಿಹಾರ ನಡೆಸುತ್ತಿದ್ದಾರೆ. ಲಾಕ್‌ಡೌನ್‌ ಆದೇಶವನ್ನೇ ಗಾಳಿಗೆ ತೂರುತ್ತಿದ್ದಾರೆ, ರೋಗ ಉಲ್ಬಣಕ್ಕೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ.

Latest Videos

undefined

ಏ.14ಕ್ಕೆ ಲಾಕ್‌ಡೌನ್‌ ಅಂತ್ಯ: ಪ್ರಧಾನಿ ಮೋದಿ ಸುಳಿವು

ಹಳ್ಳಿಗಳಿಗಿಲ್ಲ ಲಾಕ್‌ಡೌನ್‌:

ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ಹೊರತಾಗಿಲ್ಲ. ಪೊಲೀಸರು ಒಂದು ದಿನಕ್ಕೋ ಎರಡು ದಿನಕ್ಕೆ ಒಮ್ಮೆ ಬರುತ್ತಿದ್ದಾರೆ. ಇದರಿಂದ ಕೊರೋನಾ ವೈರಾಣು ಹರಡುವ ಬಗ್ಗೆ ನಿರ್ಲಕ್ಷ ಗ್ರಾಮಾಂತರದಲ್ಲಿ ಇದೆ. ಯುವಕರು ಗ್ರಾಮದ ಕಟ್ಟೆ ಆಯಕಟ್ಟಿನ ಪ್ರದೇಶದಲ್ಲಿ ಒಟ್ಟಿಗೆ ಸೇರುತ್ತಿದ್ದಾರೆ.ಅಲ್ಲೆ ಹರಟೆ, ಎಂದಿನಂತೆ ಬೈಕ್‌ಗಳಲ್ಲಿ ಸಂಚಾರ ಜಾಲಿ ರೈಡ್‌ ಮಾಡುತ್ತಿದ್ದಾರೆ ಪೊಲೀಸರು ಗಸ್ತು ತಿರುಗಬೇಕು ಸೈರನ್‌ ಬಳಸುವ ಮೂಲಕ ಎಚ್ಚರಿಕೆ ಪ್ರಚಾರ ಪ್ರತಿದಿನ ಕೈಗೊಳ್ಳಬೇಕು.
ಈ ಬಗ್ಗೆ ಯಲಹಂಕ ನಗರ ಹಾಗೂ ಗ್ರಾಮಾಂತರ ಠಾಣೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಗತ್ಯ ವಾಹನಗಳನ್ನು ನಿಯೋಜಿಸಿಕೊಂಡು ಗಸ್ತು ತಿರುಗಲು ಸೂಚಿಸಿದ್ದೇನೆ ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿದರು.
 

click me!