ಈ ಗ್ರಾಮಕ್ಕೆ ಹೋದ್ರೆ ಮುಳ್ಳು ಚುಚ್ಚುತ್ತೆ, ಗ್ರಾಮಸ್ಥರ ದಿಗ್ಬಂಧನ

By Suvarna NewsFirst Published Mar 26, 2020, 2:15 PM IST
Highlights

ಕೊರೋನಾ ಭೀತಿ ನಡುವೆ, ಲಾಕ್‌ಡೌನ್ ಲೆಕ್ಕಿಸದೇ ಹೊರಗೆ ಹೋಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗುತ್ತಿರುವವರ ನಡುವೆಯೇ ತುಮಕೂರಿನ ಸಣ್ಣದೊಂದು ಗ್ರಾಮದ ಜನ ತಮ್ಮನ್ನು ತಾವೇ ದಿಗ್ಭಂಧನಕ್ಕೊಳಗಾಗಿಸಿದ್ದಾರೆ. ಏನ್ ಮಾಡಿದ್ದಾರೆ ಇಲ್ಲಿ ಓದಿ.

ತುಮಕೂರು(ಮಾ.26): ಕೊರೋನಾ ಭೀತಿ ನಡುವೆ, ಲಾಕ್‌ಡೌನ್ ಲೆಕ್ಕಿಸದೇ ಹೊರಗೆ ಹೋಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗುತ್ತಿರುವವರ ನಡುವೆಯೇ ತುಮಕೂರಿನ ಸಣ್ಣದೊಂದು ಗ್ರಾಮದ ಜನ ತಮ್ಮನ್ನು ತಾವೇ ದಿಗ್ಭಂಧನಕ್ಕೊಳಗಾಗಿಸಿದ್ದಾರೆ. ಏನ್ ಮಾಡಿದ್ದಾರೆ ಇಲ್ಲಿ ಓದಿ.

ಕೊರೊನಾ ವೈರಸ್ ಭೀತಿ ಹಿನ್ನಲೆ ತುಮಕೂರಲ್ಲಿ ಮತ್ತೊಂದು‌ ಗ್ರಾಮ ಲಾಕ್ ಡೌನ್ ಆಗಿದ್ದು, ಗ್ರಾಮಸ್ಥರೇ ಮುಳ್ಳು ಬೇಲಿ ಹಾಕಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ದಿನಸಿ ಖಾಲಿ, ಮೆಡಿಕಲ್‌ಗೆ ಹೋಗ್ಬೇಕು ಅಂತೆಲ್ಲ ಹೇಳಿ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಗ್ರಾಮದಲ್ಲೇ ಯುವಕರ ನೇಮಕವನ್ನೂ ಮಾಡಲಾಗಿದೆ.

ಕಂಪ್ಲೀಟ್ ಲಾಕ್‌ಡೌನ್: ಅಗತ್ಯ ವಸ್ತು ಪೂರೈಕೆ ಸರ್ಕಾರಕ್ಕೆ ಸವಾಲು!

ಯಾವೊಬ್ಬರೂ ಗ್ರಾಮ ಪ್ರೇವೇಶಿಸಿದಂತೆ ಲಾಕ್ ಡೌನ್ ಮಾಡಿದ್ದು, ಮಧುಗಿರಿ ತಾಲೂಕಿನ ಗರಣಿ ಗ್ರಾಮ ಬಂದ್ ಮಾಡಲಾಗಿದೆ. ಹಾಗೆಯೇ ಯಾರೂ ಗ್ರಾಮದಿಂದ ಹೊರ ಹೋಗದಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 21 ದಿನಗಳ ಕಾಲ ಯಾವೊಬ್ಬರೂ ಗ್ರಾಮಕ್ಕೆ ಬರದಂತೆ ಹೊರ ಹೋಗದಂತೆ ಗ್ರಾಮಸ್ಥರೇ ತೀರ್ಮಾನಿಸಿದ್ದಾರೆ.

click me!