ಕೊರೋನಾ ವಿರುದ್ಧದ ಹೋರಾಟಕ್ಕೆ ಆರ್ಥಿಕವಾಗಿ ಕೈಜೋಡಿಸಿದ ಸಿದ್ದಗಂಗಾ ಮಠ

By Suvarna News  |  First Published Apr 4, 2020, 9:09 PM IST
ಕೊರೋನಾ ವಿರುದ್ಧದ ಹೋರಾಟಕ್ಕೆ ಹಲವರು ಆರ್ಥಿಕವಾಗಿ ಸಾಥ್ ನೀಡುತ್ತಿದ್ದಾರೆ. ಅಲ್ಲದೇ ಸಂಕಷ್ಟ ಪರಿಹಾರಕ್ಕೆ ರಾಜ್ಯದ ವಿವಿಧ ಮಠ-ಮಾನ್ಯಗಳು ಸಹ ಕೈಜೋಡಿಸುತ್ತಿದ್ದು, ಇದೀಗ ಸಿದ್ದಗಂಗಾವೂ ಸಹ ನೆರವಿಗೆ ಬಂದಿದೆ.

ತುಮಕೂರು, (ಏ.04):ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ತುಮಕೂರಿನ ಸಿದ್ದಗಂಗಾ ಮಠ 50 ಲಕ್ಷ ರೂ.ಹಣವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡಿದೆ.

ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಇಂದು (ಶನಿವಾರ) ಮಠದಿಂದ 25 ಲಕ್ಷ ರೂ. ಹಾಗೂ ವಿದ್ಯಾಸಂಸ್ಥೆಯಿಂದ 25ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ರೂ.ಗಳ ಡಿಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ನೀಡಿದರು.

ಅನವಶ್ಯಕವಾಗಿ ರೋಡಿಗಿಳಿದರೆ ಕೇಸ್, ಬಿಸಿ ಏರಿಸುತ್ತಿದೆ ಸನ್ನಿ ಲಿಯೋನ್ ಕಿಸ್; ಏ.4ರ ಟಾಪ್ 10 ಸುದ್ದಿ!

ಸರ್ಕಾರಗಳೇ ಮಠ-ಮಾನ್ಯಗಳಿಗೆ ಅನುದಾನ ನೀಡುತ್ತಿದ್ದವು. ಇದೀಗ ಇಂತಹ ಸಂಕಷ್ಟದಲ್ಲಿ ಮಠಗಳೇ ಸರ್ಕಾರಕ್ಕೆ ದೇಣಿಗೆ ನೀಡುತ್ತಿರುವುದು ಸಂತಸದ ಸಂಗತಿ.

ಸಿದ್ದಗಂಗಾ ಪಠ ಅದೆಷ್ಟೋ ಮಕ್ಕಳಿಗೆ ಅಕ್ಷರ, ಊಟ ಹಾಗೂ ವಸತಿ ನೀಡುತ್ತಾ ಬಂದಿದೆ. ಈ ಹಿನ್ನೆಯಲ್ಲಿ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ.
 
click me!