ಲಾಕ್‌ಡೌನ್: ತುಂಬು ಗರ್ಭಿಣಿಯಾದರೂ ಲಾಠಿ ಹಿಡಿದು ಕರ್ತವ್ಯ ಪ್ರಜ್ಞೆ ಮೆರೆದ ಪಿಎಸ್‌ಐ!

By Kannadaprabha NewsFirst Published Apr 1, 2020, 9:49 AM IST
Highlights

ಪಿಎಸ್‌ಐ ಗರ್ಭಿಣಿಯಾದರೂ ಕರ್ತವ್ಯ ನಿರ್ವಹಣೆ| ಸಂಚಾರಿ ಠಾಣೆ ಪಿಎಸ್‌ಐ ಪಲ್ಲವಿ ತುಂಬು ಗರ್ಭಿಣಿಯಾದ್ರೂ ಕೆಲಸ ನಿರ್ವಹಣೆ| ಪಿಎಸ್‌ಐ ಪಲ್ಲವಿ ಕಾರ್ಯಕ್ಕೆ ಇಲಾಖೆ ಅಧಿಕಾರಿಗಳೂ ಸೇರಿದಂತೆ ಸಾರ್ವಜನಿಕರಿಂದಲೂ ಪ್ರಶಂಸೆ|

ಹಾವೇರಿ(ಏ.01): ಮಹಾಮಾರಿ ಕೊರೋನಾ ಹರಡದಂತೆ ಇಡೀ ಪೊಲೀಸ್‌ ಇಲಾಖೆ ಶ್ರಮಿಸುತ್ತಿದ್ದು, ಇಲ್ಲೊಬ್ಬರು ಪಿಎಸ್‌ಐ ಗರ್ಭಿಣಿಯಾದರೂ ಕರ್ತವ್ಯ ಪ್ರಜ್ಞೆ ಮೆರೆಯುತ್ತಿರುವುದು ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಇಲ್ಲಿಯ ಸಂಚಾರಿ ಠಾಣೆ ಪಿಎಸ್‌ಐ ಪಲ್ಲವಿ ಅವರು ತುಂಬು ಗರ್ಭಿಣಿ. ಆದರೂ ನಿತ್ಯ ಬೆಳಗ್ಗೆಯೇ ಬಂದು ಲಾಠಿ ಹಿಡಿದು ಅನಗತ್ಯವಾಗಿ ರಸ್ತೆಗಿಳಿಯುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಭಾರತ್‌ ಲಾಕ್‌ಡೌನ್: 'ಅನಗತ್ಯ ವಾಹನಗಳನ್ನ ಮುಲಾಜಿಲ್ಲದೆ ಸೀಜ್‌ ಮಾಡಿ' 

ಗಂಟೆಗಟ್ಟಲೆ ನಿಂತು ವಾಹನ ತಪಾಸಣೆ ಮಾಡಿ ದಂಡ ವಿಧಿಸುತ್ತಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ನಿಜ ಸೇನಾನಿಯಂತೆ ಶ್ರಮಿಸುತ್ತಿರುವ ಇವರ ಕಾರ್ಯಕ್ಕೆ ಇಲಾಖೆ ಅಧಿಕಾರಿಗಳೂ ಸೇರಿದಂತೆ ಸಾರ್ವಜನಿಕರಿಂದಲೂ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.
 

click me!