ನಗರದಲ್ಲಿ ವಾಯು ಮಾಲಿನ್ಯ ದಾಖಲೆ ಮಟ್ಟದಲ್ಲಿ ಕುಸಿತ!| ಆದರೂ ಕರ್ಪ್ಯೂ ದಿನಕ್ಕೆ ಹೋಲಿಸಿದರೆ ಹೆಚ್ಚು
ಬೆಂಗಳೂರು(ಏ.01): ಕೊರೋನಾ ಪರಿಣಾಮ ರಾಜಧಾನಿ ಸ್ತಬ್ಧವಾಗಿರುವುದರಿಂದ ಮಾಲಿನ್ಯ ಪ್ರಮಾಣ ಕೂಡ ದಾಖಲೆ ಮಟ್ಟದಲ್ಲಿ ಇಳಿಮುಖವಾಗಿದ್ದು, 15 ದಿನಗಳಿಂದಲೂ ಉತ್ತಮ ಗಾಳಿ ಬೀಸುತ್ತಿದೆ. ಆದರೆ, ಜನತಾ ಕಫä್ರ್ಯ (ಮಾ.22) ದಿನಕ್ಕೆ ಹೋಲಿಸಿಕೊಂಡರೆ ಮಾಲಿನ್ಯ ಪ್ರಮಾಣ ಕೊಂಚ ಜಾಸ್ತಿಯಾಗಿದೆ.
ಲಾಕ್‌ಡೌನ್ ಎಫೆಕ್ಟ್: ತರಕಾರಿ ಬೆಲೆ ಬೆಳಗ್ಗೆ ಏರಿಕೆ, ಸಂಜೆ ಇಳಿಕೆ!
ಭಾರತ್ ಬಂದ್ ದಿನ ದೇಶಾದ್ಯಂತ ಎಲ್ಲಾ ರೀತಿಯ ವಾಹನಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದರೂ ಅಗತ್ಯ ವಸ್ತುಗಳ ಪೂರೈಕೆಗಾಗಿ ಕೆಲವು ವಾಹನಗಳು, ವೈದ್ಯಕೀಯ, ಪೊಲೀಸ್, ಸರ್ಕಾರದ ಕೆಲವು ಅಧಿಕಾರಿಗಳು, ಮಾಧ್ಯಮ ಸೇರಿದಂತೆ ಅಗತ್ಯ ಸೇವಾ ಕ್ಷೇತ್ರಗಳ ಪ್ರತಿನಿಧಿಗಳು ಸಂಚರಿಸುತ್ತಿದ್ದಾರೆ. ಬಿಗಿ ಪೊಲೀಸ್ ಬಂದೋಬÓ್ತ… ನಡುವೆಯೂ ಕೆಲವರು ನುಸುಳಿ ವಾಹನ ಚಲಾಯಿಸುತ್ತಿದ್ದಾರೆ. ಹೀಗಾಗಿ, ಭಾರತ್ ಬಂದ್ ದಿನಕ್ಕಿಂತ ಸ್ವಲ್ಪ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ. 15 ದಿನಗಳ ಹಿಂದಿನ ದಿನಗಳಿಗೆ ಹೋಲಿಸಿಕೊಂಡರೆ ಸಾಕಷ್ಟುಪ್ರಮಾಣದಲ್ಲಿ ಮಾಲಿನ್ಯ ಕುಸಿದಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ್ ಮಾಹಿತಿ ನೀಡಿದರು.
ಕೊರೋನಾ ಎಫೆಕ್ಟ್: ಬೆಂಗಳೂರಲ್ಲಿ ಮರುಕಳಿಸಿದ 30 ವರ್ಷಗಳ ಹಿಂದಿನ ಹವಾಗುಣ!
ಸಾಮಾನ್ಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯು ಗುಣಮಟ್ಟ ಸೂಚ್ಯಂಕದ ಪ್ರಮಾಣ 0-50ರ ವರೆಗೆ ಗುಣಮಟ್ಟದ ಗಾಳಿ, 51-100ರ ವರೆಗೆ ಸಮಾಧಾನಕರ ಎಂದು ಪರಿಗಣಿಸಲಾಗುತ್ತಿದೆ. 50ರ ಆಸುಪಾಸಿನಲ್ಲಿ ಮಾಲಿನ್ಯ ಪ್ರಮಾಣ ಇರುವುದರಿಂದ ಉತ್ತಮ ಹಾಗೂ ಆರೋಕರ ಗಾಳಿ ಬೀಸುತ್ತಿದೆ ಎನ್ನುತ್ತಾರೆ ಬಸವರಾಜ ಪಾಟೀಲ್.