ದೆಹಲಿ ಜಮಾತ್‌ಗೆ ಉಗ್ರರೊಂದಿಗೆ ನಂಟಿದೆ: ಪ್ರಮೋದ್‌ ಮುತಾಲಿಕ್‌

By Suvarna NewsFirst Published Apr 1, 2020, 2:06 PM IST
Highlights

ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಕಾರ್ಯಕ್ರಮ| ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಮಾಡಿ ಆದೇಶ ಹೊರಡಿಸಿದ್ದರೂ ಇದರ ಮಧ್ಯೆಯೇ ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ| 

ಧಾರವಾಡ(ಏ.01): ಕೊರೋನಾ ಸೋಂಕು ಹರಡುತ್ತಿರುವಾಗಲೂ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂಪೂರ್ಣ ತನಿಖೆಯಾಗಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ಪ್ರಧಾನಮಂತ್ರಿಗಳು ಲಾಕ್‌ಡೌನ್ ಮಾಡಿ ಆದೇಶ ಹೊರಡಿಸಿದ್ದರೂ ಇದರ ಮಧ್ಯೆಯೇ ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ. ಇಡೀ ದೇಶದಲ್ಲಿ ಈ ಸೋಂಕನ್ನು ಜಮಾತ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೇ ಹರಡಿದ್ದಾರೆ. ಇವರಿಗೆ ದೆಹಲಿ ಸರ್ಕಾರವಾದರೂ ಹೇಗೆ ಪರವಾನಗಿ ನೀಡಿತು ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಮುತಾಲಿಕ್‌ ಆಗ್ರಹಿಸಿದ್ದಾರೆ.

ಜಮಾತ್ ಖಾಲಿ ಮಾಡಿಸಲು ರಾತ್ರೋ ರಾತ್ರಿ ಮಸೀದಿ ಆವರಣ ತಲುಪಿದ್ದ ಧೋವಲ್!

ಕೊರೋನಾ ಸೋಂಕು ಹರಡುತ್ತಿರುವಾಗಲೂ ವಿದೇಶದಿಂದ ಅನೇಕ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅವರಿಗೆ ಬರಲು ಅವಕಾಶ ಕೊಟ್ಟವರಾರು? ಪಬ್ಲಿಕ್ ಜಮಾತ್ ಹಾಗೂ ಉಗ್ರರೊಂದಿಗೆ ಲಿಂಕ್ ಇದೆ ಎಂಬ ಆರೋಪ ಕೂಡ ಇದೆ. ಅದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿ ಮಸೀದಿಯಿಂದ ಕೊರೋನಾ: ನಿಷೇಧದ ನಡುವೆಯೂ 15 ದಿನ ಧರ್ಮಸಭೆ!

click me!