ಲಾಕ್‌ಡೌನ್‌ ನಡುವೆ ಮಧ್ಯೆಯೂ ಮಾಂಸ ಖರೀದಿಗೆ ಮುಗಿಬಿದ್ದ ಜನತೆ!

Kannadaprabha News   | Asianet News
Published : Mar 30, 2020, 08:25 AM IST
ಲಾಕ್‌ಡೌನ್‌ ನಡುವೆ ಮಧ್ಯೆಯೂ ಮಾಂಸ ಖರೀದಿಗೆ ಮುಗಿಬಿದ್ದ ಜನತೆ!

ಸಾರಾಂಶ

ಬೆಂಗಳೂರು ನಗರದಲ್ಲಿ ಬೆಳಗ್ಗೆ 6ರಿಂದಲೇ ಅಂಗಡಿ ಮುಂದೆ ಕ್ಯೂ| ಸರತಿ ನಿಲ್ಲದ ಕಡೆ ಅಂಗಡಿ ಬಂದ್‌|ಮೈಸೂರು ರಸ್ತೆಯ ಪಾಪಣ್ಣ ಮಟನ್‌ ಸ್ಟಾಲ್‌ನಲ್ಲಿ ಬೆಳಗ್ಗೆ ಆರು ಗಂಟೆಗೆ ಒಂದು ಕಿಲೋಮೀಟರ್‌ನಷ್ಟು ದೂರದಲ್ಲಿ ನಿಂತ ನೂರಾರು ಗ್ರಾಹಕರು|

ಬೆಂಗಳೂರು(ಮಾ.30): ಕೊರೋನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿಲಾಗಿದೆ, ಆದರೆ, ಮಾಂಸದೂಟ ಮಾಡುವವರನ್ನು ಮಾತ್ರ ಮನೆಗಳಲ್ಲಿರಿಸಲು ಮಾಡುವುದಕ್ಕೆ ಸಾಧ್ಯವಾಗದಂತಾಗಿದೆ. ಬೆಳಗ್ಗೆಯಿಂದಲೇ ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.

ಭಾನುವಾರ ಬರುತ್ತಿದ್ದಂತೆ ಮಾಂಸ ತಿನ್ನಲೇಬೇಕು ಎಂಬ ಮನಸ್ಥಿತಿ ಇರುವವರನ್ನು ಮನೆಯಲ್ಲಿ ಲಾಕ್‌ಡೌನ್‌ ಮಾಡಲು ಸಾಧ್ಯವಾಗದಂತಾಗಿದೆ. ಬೆಂಗಳೂರು ನಗರದಲ್ಲಿನ ಮಾಂಸದ ಅಂಗಡಿಗಳಲ್ಲಿ ಬೆಳಗ್ಗೆ 6ರಿಂದಲೇ ಸಾಲುಗಟ್ಟಿ ನಿಂತು ಮಾಂಸ ಖರೀದಿ ಮಾಡುತ್ತಿದ್ದರು.

ಹೊತ್ತಿನ ಊಟಕ್ಕೂ ಕಾರ್ಮಿಕರ ಪರದಾಟ: ರೈಲ್ವೆಯಿಂದ ಆಹಾರ ಪೊಟ್ಟಣ ವಿತರಣೆ

ಮೈಸೂರು ರಸ್ತೆಯ ಪಾಪಣ್ಣ ಮಟನ್‌ ಸ್ಟಾಲ್‌ನಲ್ಲಿ ಬೆಳಗ್ಗೆ ಆರು ಗಂಟೆಗೆ ಒಂದು ಕಿಲೋಮೀಟರ್‌ನಷ್ಟು ದೂರದಲ್ಲಿ ನಿಂತು ನೂರಾರು ಗ್ರಾಹಕರು ಮಾಂಸ ಖರೀದಿ ಮಾಡಿದರು. ಮಾಲೀಕರೇ ಅಂಗಡಿಗೆ ಬರುವ ಗ್ರಾಹಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಎರಡು ಅಡಿಗೆ ಒಂದರಂತೆ ಬಾಕ್ಸ್‌ಗಳನ್ನು ಹಾಕಲಾಗಿತ್ತು. ಜೊತೆಗೆ, ಗ್ರಾಹಕರಿಗೆ ಸ್ಯಾನಿಟೈಜರ್‌ ಹಾಗಿ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ಸೂಚನೆ ನೀಡಿದರು.
ಅಲ್ಲದೆ, ನಗರದ ಪ್ರಮುಖ ಭಾಗಗಳಾದ, ಹೆಬ್ಬಾಳ, ರಾಜಾಜಿನಗರ, ಶಿವಾಜಿನಗರ, ಯಶವಂತಪು, ಕೆ.ಅರ್‌.ಪುರ, ಬನಶಂಕರಿ, ಕಾಮಾಕ್ಷಿ ಪಾಳ್ಯ, ಬೊಮ್ಮನಹಳ್ಳಿ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಸರತಿಯಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ.

ಮನೆಯಿಂದ ಹೊರಬಂದರೆ ಇಂದಿನಿಂದ ಕೇಸು, ನೆಪ ಹೇಳಿದರೆ ಕೇಳೋದಿಲ್ಲ!

ಶಿವಾಜಿನಗರದ ಕೆಲ ಮಾಂಸದ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾರಾಟ ಮಾಡುತ್ತಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ರಸೆಲ್‌ ಮಾರುಕಟ್ಟೆಸೇರಿದಂತೆ ಶಿವಾಜಿನಗರದ ಸುತ್ತಮುತ್ತಲ ಭಾಗಗಳಲ್ಲಿನ ಮಾಂಸದ ಅಂಗಡಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಗೊತ್ತಾಗಿದೆ.

ಬೆಲೆ ಹೆಚ್ಚಳ:

ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ 550 ರಿಂದ 600 ಇರುತ್ತಿದ್ದ ಮಾಂಸ ಇದೀಗ ಏಕಾಏಕಿ 800ಕ್ಕೆ ಮಾರಾಟವಾಗುತ್ತಿದೆ. ಆದರೂ, ಜನ ಮಾತ್ರ ಖರೀದಿಯಿಂದ ಹಿಂದೆ ಬಿದ್ದಿಲ್ಲ. ರಾಜ್ಯ ಕೋಳಿ ಜ್ವರ ಕಾಣಿಸಿಕೊಂಡ ಬೆನ್ನಲ್ಲಿ ಕೋಳಿ ಮಾಂಸದ ಬೆಲೆ ಸಂಪೂರ್ಣ ಕುಸಿದಿದೆ. ರೈತರಿಂದ ಪ್ರತಿ ಕೆಜಿ ಮಾಂಸಕ್ಕೆ 15ರಿಂದ 20 ಕೊಟ್ಟು ಖರೀದಿ ಮಾಡುತ್ತಿರುವ ಅಂಗಡಿ ಮಾಲೀಕರು 100ಕ್ಕೆ ಮಾರಾಟ ಮಾಡುತ್ತಿದ್ದಾರೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?