ಚಿಕಿತ್ಸೆಗೆ ತೆರಳುತ್ತಿದ್ದ ವೃದ್ಧನಿಗೆ ಲಾಠಿ ಬೀಸಿದ ಪಿಡಿಒ

Published : Mar 29, 2020, 09:18 AM IST
ಚಿಕಿತ್ಸೆಗೆ ತೆರಳುತ್ತಿದ್ದ ವೃದ್ಧನಿಗೆ ಲಾಠಿ ಬೀಸಿದ ಪಿಡಿಒ

ಸಾರಾಂಶ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೂಲ್ಕಿ ಸಂಪೂರ್ಣ ಬಂದ್‌ ಘೋಷಿಸಿದ್ದು, ಎಲ್ಲ ಕಡೆಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಈ ಸಂದರ್ಭ ವೃದ್ಧನ ಮೇಲೆ ಪಿಡಿಒ ಲಾಠಿ ಬೀಸಿರುವ ಘಟನೆ ನಡೆದಿದೆ.  

ಮಂಗಳೂರು(ಮಾ.29): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೂಲ್ಕಿ ಸಂಪೂರ್ಣ ಬಂದ್‌ ಘೋಷಿಸಿದ್ದು, ಎಲ್ಲ ಕಡೆಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಈ ಸಂದರ್ಭ ವೃದ್ಧನ ಮೇಲೆ ಪಿಡಿಒ ಲಾಠಿ ಬೀಸಿರುವ ಘಟನೆ ನಡೆದಿದೆ.

ಪಕ್ಷಿಕೆರೆಯಲ್ಲಿ ವಯಸ್ಕ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಗೆ ಚಿಕಿತ್ಸೆಗೆ ಕಿನ್ನಿಗೋಳಿ ಆಸ್ಪತ್ರೆಗೆ ತನ್ನ ಮಗನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ತಪಾಸಣೆ ನಿರತನಾಗಿದ್ದ ಪಂಚಾಯಿತಿ ಪಿಡಿಒ ಲಾಠಿ ಬೀಸಿದ ಘಟನೆ ನಡೆದಿದೆ.

ಕೊರೋನಾ ತಪಾ​ಸ​ಣೆಗೆ ಬಂದಿದ್ದ ಅಜ್ಜ ಮೊಮ್ಮ​ಗಳು ನಾಪ​ತ್ತೆ

ಅಲ್ಲೇ ಇದ್ದ ಪೋಲಿಸರು ಬಿಡಿಸಿ ಅವರನ್ನು ಆಸ್ಪತ್ರೆಗೆ ಹೋಗಲು ಅನುವು ಮಾಡಿಕೊಟ್ಟರು. ತುರ್ತು ಸಂದರ್ಭದಲ್ಲಿ ವಯಸ್ಸು ನೋಡದೆ ಲಾಠಿಯಿಂದ ಹೊಡೆದ ವಿಚಾರ ತಿಳಿದ ಸಾರ್ವಜನಿಕರು, ಪಿಡಿಒಗೆ ಘೇರಾವ್‌ ಹಾಕಿ ಮನೆಯವರೆಗೆ ಕರೆಸಿ ಕ್ಷಮಾಪಣೆ ಕೇಳಿಸಿ, ಛೀಮಾರಿ ಹಾಕಿ ಕಳುಹಿಸಿದ್ದಾರೆ.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?