ಕೊರೋನಾ ತಪಾ​ಸ​ಣೆಗೆ ಬಂದಿದ್ದ ಅಜ್ಜ ಮೊಮ್ಮ​ಗಳು ನಾಪ​ತ್ತೆ

By Kannadaprabha NewsFirst Published Mar 29, 2020, 9:00 AM IST
Highlights

ವಿದೇಶದಿಂದ ಬಂದು ಮನೆಯಲ್ಲೇ ಕೊರಂಟೈನ್‌ನಲ್ಲಿದ್ದ ಪಾಣಾಜೆ ನಿವಾಸಿ ದಂಪತಿ ಆರೋಗ್ಯವಾಗಿದ್ದು, ಅವರ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುತ್ತೂರು ಸರ್ಕಾರಿ ಬಂದು ಚಿಕಿತ್ಸೆಗೊಳಪಡಿಸಿ ದಾಖಲಿಸುವ ವೇಳೆ ಮಗು ಮತ್ತು ಮಗುವಿನ ಅಜ್ಜ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ.

ಮಂಗಳೂರು(ಮಾ.29): ವಿದೇಶದಿಂದ ಬಂದು ಮನೆಯಲ್ಲೇ ಕೊರಂಟೈನ್‌ನಲ್ಲಿದ್ದ ಪಾಣಾಜೆ ನಿವಾಸಿ ದಂಪತಿ ಆರೋಗ್ಯವಾಗಿದ್ದು, ಅವರ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುತ್ತೂರು ಸರ್ಕಾರಿ ಬಂದು ಚಿಕಿತ್ಸೆಗೊಳಪಡಿಸಿ ದಾಖಲಿಸುವ ವೇಳೆ ಮಗು ಮತ್ತು ಮಗುವಿನ ಅಜ್ಜ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ.

ವಿದೇಶದಿಂದ ಬಂದಿರುವ ದಂಪತಿ ಶಂಕಿತ ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಕೊರಂಟೈನ್‌ನಲ್ಲಿ ಇರಬೇಕಾಗಿದ್ದರಿಂದ ಜ್ವರ ಬಾಧಿತ ಮಗುವನ್ನು ಅಜ್ಜ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!

ಚಿಕಿತ್ಸೆ ವೇಳೆ ಮಗುವನ್ನು ದಾಖಲಿಸುವಂತೆ ಆಸ್ಪತ್ರೆಯಲ್ಲಿ ಸೂಚನೆ ನೀಡಿದಾಗ ನಿರಾಕರಿಸಿದ ಅಜ್ಜ ಮತ್ತು ಮಗು ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ. ಘಟನೆಯ ಕುರಿತು ಸರ್ಕಾರಿ ಆಸ್ಪತ್ರೆಯಿಂದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಈ ಕುರಿತು ವಿಚಾರಣೆ ನಡೆಸಿದಾಗ ಮಗುವನ್ನು ಅಜ್ಜ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

click me!