ಕೊರೋನಾ ಆತಂಕ: ಖಾಸಗಿ ಆಸ್ಪತ್ರೆಯಲ್ಲೇ ಸರ್ಕಾರಿ ಆಸ್ಪತ್ರೆ ಸೇವೆ!

By Kannadaprabha NewsFirst Published Apr 3, 2020, 2:51 PM IST
Highlights

ಕೊಪ್ಪಳ ಜಿಲ್ಲಾಡಳಿತದಿಂದ ಸಿದ್ಧವಾಗುತ್ತಿದೆ ಯೋಜನೆ: ವಿಭಾಗವಾರು ಚಿಕಿತ್ಸೆಗೆ ಸಿದ್ಧ|ಜಿಲ್ಲಾಸ್ಪತ್ರೆಯಲ್ಲಿ ಕೇವಲ ಕೋವಿಡ್‌ ಚಿಕಿತ್ಸೆ| ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆ ನೀಡಲು ತೀರ್ಮಾನ|

ಕೊಪ್ಪಳ(ಏ.03): ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಿರುವುದರಿಂದ ವಿವಿಧ ಖಾಸಗಿ ಆಸ್ಪತ್ರೆಯಲ್ಲಿಯೇ ಸರ್ಕಾರಿ ಆಸ್ಪತ್ರೆಯ ಸೇವೆ ಮುಂದುವರೆಯಲಿದೆ. 9 ಆಸ್ಪತ್ರೆಗಳಲ್ಲಿ ನಾನಾ ವಿಭಾಗಗಳನ್ನು ತೆರೆದು, ಅಲ್ಲಿಯೇ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆಯನ್ನು ನೀಡಲು ಈಗಗಾಲೇ ತೀರ್ಮಾನಿಸಲಾಗಿದೆ.

ಕೋವಿಡ್‌ ಆಸ್ಪತ್ರೆಯನ್ನಾಗಿ ಜಿಲ್ಲಾಸ್ಪತ್ರೆಯನ್ನು ಘೋಷಣೆ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಶ್ರೀರಾಮುಲು ಅವರು ಕೂಡಲೇ ಪರ್ಯಾಯ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದ್ದರು.

ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ದೃಷ್ಟಿ ತೆಗೆದು ಈಡುಗಾಯಿ ಒಡೆದ DYSP

ಇದರಡಿ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಕ್ರಮವಹಿಸಿದ್ದು, ಖಾಸಗಿ ಆಸ್ಪತ್ರೆಯ ಮಾಲೀಕರ ಜೊತೆಗೆ ಈಗಗಾಲೇ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವೇಳೆ ನಿಮ್ಮ ಆಸ್ಪತ್ರೆಯಲ್ಲಿಯೇ ಸರ್ಕಾರಿ ಆಸ್ಪತ್ರೆಲ್ಲಿ ಚಿಕಿತ್ಸೆಯನ್ನು ಮುಂದುವರೆಸಬೇಕಾಗುತ್ತದೆ, ಇದು ಸರ್ಕಾರದ ಆದೇಶವೆಂದಷ್ಟೇ ಹೇಳಿದ್ದಾರೆ.

ಯಾವ ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆ:

ಕೆ.ಎಸ್‌. ಆಸ್ಪತ್ರೆ, ಮತ್ತು ಜಿಎಸ್‌ಆರ್‌ ಆಸ್ಪತ್ರೆಯಲ್ಲಿ ಸಾಮಾನ್ಯ, ಮಂಗಳ ಹೆರಿಗೆ ಆಸ್ಪತ್ರೆ, ಗೋವನ್‌ಕೊಪ್ಪ ಹೆರಿಗೆ ಆಸ್ಪತ್ರೆ, ಖುಷಿ ಆಸ್ಪತ್ರೆ, ವಾತ್ಸಲ್ಯ ಹೆರಿಗೆ ಆಸ್ಪತ್ರೆ, ಸಿ.ಟಿ. ಆಸ್ಪತ್ರೆಗಳಲ್ಲಿ ಹೆರಿಗೆ ಆಸ್ಪತ್ರೆಯ ಚಿಕಿತ್ಸೆ ದೊರೆಯಲಿದೆ. ಇನ್ನು ಭಗವತಿ ಮತ್ತು ಬಾಪೂಜಿ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಆಸ್ಪತ್ರೆಯ ಚಿಕಿತ್ಸೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಪ್ರಕಟಣೆ ನೀಡಿದ್ದಾರೆ.

ಜಿಲ್ಲಾತ್ರೆಯಲ್ಲಿ ಕೇವಲ ಕೋವಿಡ್‌ ಚಿಕಿತ್ಸೆ:

ಜಿಲ್ಲಾಸ್ಪತ್ರೆಯಲ್ಲಿ ಈಗ ಕೇವಲ ಕೋವಿಡ್‌ ಚಿಕಿತ್ಸೆ ದೊರೆಯಲಿದೆ. ಹೀಗಾಗಿ, ಕೊಪ್ಪಳಕ್ಕೆ ಆಗಮಿಸುವ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಕೋರಲಾಗಿದೆ.
 

click me!