ಕೊರೋನಾ ಭೀತಿ: 'ಅಂತ್ಯ ಸಂಸ್ಕಾರಕ್ಕೆ 20 ಕ್ಕಿಂತ ಹೆಚ್ಚು ಮಂದಿ ಹೋಗುವಂತಿಲ್ಲ'

By Kannadaprabha NewsFirst Published Apr 3, 2020, 10:16 AM IST
Highlights

ಅಂತ್ಯಸಂಸ್ಕಾರದಲ್ಲಿ 15 ರಿಂದ 20 ಕ್ಕಿಂತ ಹೆಚ್ಚು ಮಂದಿ ಭಾಗಿಯಾಗುವಂತಿಲ್ಲ: ಬಿಬಿಎಂಪಿ ಸುತ್ತೋಲೆ| ಬೆಂಗಳೂರಿನಲ್ಲಿ 132 ಸ್ಮಶಾನಗಳು ಮತ್ತು 13 ಶವಾಗಾರಗಳಿವೆ|

ಬೆಂಗಳೂರು(ಏ.03): ಕೊರೋನಾ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್‌ ಜಾರಿಯಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟಲ್ಲಿ ಅವರ ಅಂತ್ಯಸಂಸ್ಕಾರದಲ್ಲಿ 15 ರಿಂದ 20 ಕ್ಕಿಂತ ಹೆಚ್ಚು ಮಂದಿ ಭಾಗಿಯಾಗುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ 132 ಸ್ಮಶಾನಗಳು ಮತ್ತು 13 ಶವಾಗಾರಗಳಿವೆ. ಸ್ಮಶಾನಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತು ಖಾಸಗಿ ಟ್ರಸ್ಟ್‌ಗಳು ನಿರ್ವಹಿಸುತ್ತವೆ. ನಗರಸಭೆಗಳು ಸ್ಮಶಾನವನ್ನು (ವಿದ್ಯುತ್‌ ಮತ್ತು ಉರುವಲು ಎರಡೂ) ನಿರ್ವಹಿಸುತ್ತದೆ. 

ಸಾಮಾಜಿಕ ಅಂತರದ್ದೇ ಸಮಸ್ಯೆ: ಜನ ಜಂಗುಳಿಯಿಂದಾಗಿ ಡೇಂಜರ್ ಝೋನ್‌ನಲ್ಲಿ ಮಾರ್ಕೆಟ್‌!

ಅಂತ್ಯ ಸಂಸ್ಕಾರದಲ್ಲಿ ಕೇವಲ ಆಪ್ತರಾದ 15 ರಿಂದ 20 ಮಂದಿ ಮಾತ್ರ ಭಾಗವಹಿಸಬೇಕು. ಹೆಚ್ಚಿನ ಜನ ಭಾಗವಹಿಸಲು ಅವಕಾಶ ನೀಡುವುದಿಲ್ಲ, ಜತೆಗೆ ಸೋಪು ಮತ್ತು ಹ್ಯಾಂಡ್‌ ವಾಶ್‌ಗಳನ್ನು ಸ್ಮಶಾನದಲ್ಲಿರಿಸಬೇಕು. ದಿನಕ್ಕೆ ಎರಡು ಬಾರಿ ಸ್ಯಾನಿಟೈಸ್‌ ಬಳಕೆ ಮಾಡಬೇಕು ಎಂದು ರುದ್ರಭೂಮಿ ಸಿಬ್ಬಂದಿಗೆ ಅನಿಲ್‌ ಕುಮಾರ್‌ ಸೂಚನೆ ನೀಡಿದ್ದಾರೆ.
 

click me!