ಲಾಠಿ ಚಾರ್ಜ್‌ನಿಂದ ಗಾಯಗೊಂಡ ಸೆಕ್ಯೂರಿಟಿ ಗಾರ್ಡ್‌ಗಳ ಆಸ್ಪತ್ರೆಗೆ ದಾಖಲಿಸಿದ ಮಾಜಿ ಸಚಿವ

By Kannadaprabha NewsFirst Published Apr 2, 2020, 8:10 AM IST
Highlights

ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಪೊಲೀಸರ ಲಾಠಿ ಚಾರ್ಜ್‌ನಿಂದ ಗಾಯಗೊಂಡಿದ್ದ ಇಬ್ಬರು ಸೆಕ್ಯೂರಿ ಗಾರ್ಡ್‌ಗಳನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಿ ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್‌ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರು(ಎ.02): ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಪೊಲೀಸರ ಲಾಠಿ ಚಾರ್ಜ್‌ನಿಂದ ಗಾಯಗೊಂಡಿದ್ದ ಇಬ್ಬರು ಸೆಕ್ಯೂರಿ ಗಾರ್ಡ್‌ಗಳನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಿ ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್‌ ಮಾನವೀಯತೆ ಮೆರೆದಿದ್ದಾರೆ.

ಖಾದರ್‌ ಅವರು ವಾಸವಿರುವ ನಗರದ ಎಡ್ವರ್ಡ್‌ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಈ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರ ಪೈಕಿ ಒಬ್ಬಾತ ಸೋಮವಾರ ಕೆಲಸ ಮುಗಿಸಿ ಮನೆಗೆ ತೆರಳುವಾಗ ಲಾಕ್‌ ಡೌನ್‌ ನೆಪದಲ್ಲಿ ಪೊಲೀಸರು ಲಾಠಿ ಚಾಜ್‌ರ್‍ ಮಾಡಿದ್ದಾರೆ. ಮತ್ತೊಬ್ಬ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಸೈಕಲ್‌ನಲ್ಲಿ ಮನೆಗೆ ಹೋಗುವಾಗ ಮಾರ್ಗ ಮಧ್ಯೆ ತಡೆದು ಲಾಠಿಯಿಂದ ಥಳಿಸಿದ್ದಾರೆ ಎನ್ನಲಾಗಿದೆ. ಈ ಎರಡೂ ಘಟನೆಯಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳ ಕೈ ಹಾಗೂ ಮಂಡಿಗಳಿಗೆ ಹಾನಿಯಾಗಿದೆ.

ಲಾಕ್‌ಡೌನ್: 13 ಕಿ.ಮೀ ನಡೆದೇ ಆಸ್ಪತ್ರೆಗೆ ಹೋಗುವ ಸಿಬ್ಬಂದಿ..!

ಗಾಯಗೊಂಡರೂ ಬ್ಯಾಂಡೇಜ್‌ ಕಟ್ಟಿಸಿಕೊಂಡು ಕರ್ತವ್ಯಕ್ಕ ಹಾಜರಾಗಿದ್ದ ಇಬ್ಬರು ಸೆಕ್ಯೂರಿ ಗಾರ್ಡ್‌ಗಳನ್ನು ನೋಡಿದ ಯು.ಟಿ.ಖಾದರ್‌ ಅವರು ಮರುಕ ವಕ್ತಪಡಿಸಿದ್ದಾರೆ. ಬಳಿಕ ಘಟನೆ ಬಗ್ಗೆ ಮಾಹಿತಿ ಪಡೆದು ತಮ್ಮದೇ ಕಾರಿನಲ್ಲಿ ಇಬ್ಬರನ್ನೂ ಕೂರಿಸಿಕೊಂಡು ನಗರದ ಸಂಜಯ ಗಾಂಧಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ಪೊಲೀಸರು ಲಾಠಿ ಹಿಡಿದೇ ಪರಿಸ್ಥಿತಿ ನಿಯಂತ್ರಣ ಮಾಡಬೇಕಿಲ್ಲ. ಕಾರ್ಮಿಕರು, ಬಡವರ ಮೇಲೆ ಮನಬಂದಂತೆ ಲಾಠಿ ಬೀಸಿ ಜೀವಕ್ಕೆ ಅಪಾಯವಾದರೆ ಏನು ಮಾಡುವುದು. ಎಲ್ಲದಕ್ಕೂ ಲಾಠಿ ಬಳಸುವುದಿಲ್ಲ ಸರಿಯಲ್ಲ. ಈ ಘಟನೆ ಹಾಗೂ ಪೊಲೀಸರ ವರ್ತನೆ ಬಗ್ಗೆ ನಗರ ಪೊಲೀಸ್‌ ಆಯುಕ್ತ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಗಮನಕ್ಕೂ ತರುವುದಾಗಿ ಖಾದರ್‌ ತಿಳಿಸಿದ್ದಾರೆ.

ಸಿಎಂ ಭೇಟಿಯಾಗಿ ಘಟನೆ ಮಾಹಿತಿ

ಪೊಲಿಸರ ಲಾಠಿ ಚಾಜ್‌ರ್‍ನಿಂದ ತೀವ್ರವಾಗಿ ಗಾಯಗೊಂಡಿದ್ದ ವೃದ್ಧ ಸೆಕ್ಯೂರಿಟಿ ಗಾರ್ಡ್‌ ಮಹದೇವಪ್ಪ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಖಾದರ್‌ ಬಳಿಕ ಆತನನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮನೆಗೆ ಕರೆದೊಯ್ದು ಘಟನೆ ವಿವರಿಸಿದ್ದಾರೆ. ತಕ್ಷಣ ರಾಜ್ಯ ಪೊಲೀಸ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.

click me!