ನಿರ್ಗತಿಕರಿಗೆ ಶಾಸಕ ತಮ್ಮಣ್ಣರಿಂದ ನಿತ್ಯ ಊಟ

By Kannadaprabha NewsFirst Published Mar 28, 2020, 10:57 AM IST
Highlights

ಕೊರೋನಾ ವೈರಸ್‌ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಪ್ರಕಟಿಸಿರುವ ನಿರ್ಧಾರವನ್ನು ಸ್ವಾಗತಿಸಿರುವ ಶಾಸಕ ಡಿ.ಸಿ.ತಮ್ಮಣ್ಣ ಮದ್ದೂರು ಪಟ್ಟಣದ ಬಡವರು, ನಿರ್ಗತಿಕರಿಗೆ ನಿತ್ಯವೂ ಪ್ರತಿ ದಿನ ಎರಡು ವೇಳೆ ಊಟ ನೀಡಲು ನಿರ್ಧರಿಸಿದ್ದಾರೆ.

ಮಂಡ್ಯ(ಮಾ.28): ಕೊರೋನಾ ವೈರಸ್‌ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಪ್ರಕಟಿಸಿರುವ ನಿರ್ಧಾರವನ್ನು ಸ್ವಾಗತಿಸಿರುವ ಶಾಸಕ ಡಿ.ಸಿ.ತಮ್ಮಣ್ಣ ಮದ್ದೂರು ಪಟ್ಟಣದ ಬಡವರು, ನಿರ್ಗತಿಕರಿಗೆ ನಿತ್ಯವೂ ಪ್ರತಿ ದಿನ ಎರಡು ವೇಳೆ ಊಟ ನೀಡಲು ನಿರ್ಧರಿಸಿದ್ದಾರೆ.

ಈ ವಿಷಯವನ್ನು ಕನ್ನಡಪ್ರಭಕ್ಕೆ ತಿಳಿಸಿದ ಶಾಸಕ ಡಿ.ಸಿ.ತಮ್ಮಣ್ಣ, ಮದ್ದೂರು ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ಊಟ, ತಿಂಡಿ ಆಶ್ರಯಿಸಿದ್ದ ಸುಮಾರು 1000 ಮಂದಿಗೆ ಸ್ವಂತ ಖರ್ಚಿನಲ್ಲಿ ಮುದ್ದೆ, ಸೊಪ್ಪುಸಾರು, ಅನ್ನ, ಮಜ್ಜಿಗೆ ಎರಡು ಹೊತ್ತು ಉಚಿತವಾಗಿ ನೀಡಲು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

ಕೊರೋನಾ ವೈರಸ್‌ ಸ್ವಾತಂತ್ರ್ಯ ಪೂರ್ವದಲ್ಲಿಯೇ ಇತ್ತಾ? ಶಾಸ್ತ್ರಿಗಳ ಕೃತಿಯಲ್ಲಿ ಉಲ್ಲೇಖ

ಈಗಾಗಲೇ ಈ ಕುರಿತಂತೆ ತಹಸೀಲ್ದಾರ್‌, ಪುರಸಭೆ ಮುಖ್ಯಾಧಿಕಾರಿ ಹಾಗೂ ಇಒ ಅವರ ಜತೆ ಸಮಾಲೋಚನೆ ನಡೆಸಿ ಈ ಕುರಿತಂತೆ ಪುರಸಭೆ ಸದಸ್ಯರನ್ನು ಒಳಗೊಂಡಂತೆ ಸಭೆ ಮಾಡಿ ಹಸಿವಿನಿಂದ ಬಳಲುತ್ತಿರುವ ಜನರಿಗೆ ಏ.14ರವರೆಗೆ ಅನ್ನ, ಆಹಾರ ಸಿಗುವಂತೆ ಮಾಡಲು ವ್ಯವಸ್ಥೆ ಮಾಡಿ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

ಪ್ರತಿ ಗ್ರಾಪಂಗೆ 1 ಲಕ್ಷ ರು.:

ಮದ್ದೂರು ವಿಧಾನಸಭಾ ಕ್ಷೇತ್ರದ 34 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿರುವ ಹಸಿದ ಹೊಟ್ಟೆಗಳಿಗೆ ಅನ್ನಸಿಗುವಂತೆ ಮಾಡಲು ತಮ್ಮ ಅನುದಾನದಲ್ಲಿ ತಲಾ 1 ಪಂಚಾಯ್ತಿಗೆ 1 ಲಕ್ಷ ರು.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಈ ಹಣದಿಂದ ಹಳ್ಳಿಗಳಲ್ಲಿರುವ ಬಡವರು, ನಿರ್ಗತಿಕರಿಗೆ ಅನ್ನ ಹಾಕುವ ವ್ಯವಸ್ಥೆಯನ್ನು ಸ್ತಳೀಯ ಗ್ರಾಪಂ ಆಡಳಿತ ವ್ಯವಸ್ಥೆ ನೋಡಿಕೊಳ್ಳಬೇಕು. ಈ ಸಂಬಂಧ ಶನಿವಾರ ಸಂಜೆಯೊಳಗೆ ವರದಿ ಸಿದ್ದವಾಗಲಿದೆ ಎಂದು ಹೇಳಿದರು.

ತರಕಾರಿ ಖರೀದಿಸಿ:

ಗ್ರಾಮಾಂತರ ಪ್ರದೇಶದ ಅನೇಕ ರೈತರು ತರಕಾರಿ ಬೆಳೆದಿದ್ದಾರೆ. ರೈತರಿಗೆ ಕೂಲಿ ಆಳು ಸಿಗುತ್ತಿಲ್ಲ. ತಾನು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಗಾಣಿಕೆ ಮಾಡುವುದು ಕಷ್ಟವಾಗಿದೆ. ಪೊಲೀಸರ ಕಾಟದಿಂದ ರೈತರು ರೋಸಿ ಹೋಗಿದ್ದಾರೆ. ತರಕಾರಿಯನ್ನು ಅಂದೇ ಕೂಯ್ದು ಅಂದೆ ಮಾರಾಟ ಮಾಡಬೇಕು. ಹಾಗಾಗಿ ಸರ್ಕಾರ ಹಾಪ್‌ ಕಾಮ್ಸ್‌, ಎಪಿಎಂಸಿ ಮೂಲಕ ರೈತರ ಬೆಳೆ ಖರೀದಿಸಿ ಸರ್ಕಾರಿ ಸಂಸ್ಥೆಗಳೇ ಸಾಗಾಣಿಕೆ ಮಾಡಿಕೊಂಡು ಹೋಗುವಂತಹ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

click me!