ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು ಎನ್ನುವಂತೆ ಕೊರೋನಾ ವೈರಸ್ ಎನ್ನುವ ಮಾಹಾಮಾರಿ ಸಾಂಕ್ರಾಮಿ ರೋಗಕ್ಕೆ ಚಿಕಿತ್ಸೆ ನೀಡುತ್ತಿರುವರ ವೈದ್ಯರ ಕಷ್ಟಪಡುತ್ತಿರುವುದು ಅಷ್ಟಿಷ್ಟಲ್ಲ. ಈ ಕಷ್ಟ ಸ್ವತಃ ಸಚಿವ ಸುರೇಶ್ ಕುಮಾರ್ ಅನುಭವಕ್ಕೆ ಬಂದಿದೆ. ಅದನ್ನು ಅವರು ಜನರ ಮುಂದಿಟ್ಟಿದ್ದು, ಅದು ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಮಾ.23): ಕೊರೋನಾ ವೈರಸ್ ವಿರುದ್ಧದ ವೈದ್ಯರ ಹೋರಾಟ ನಿಜಕ್ಕೂ ಮೆಚ್ಚಲೇಬೇಕು. ಅವರ ಜೀವವನ್ನೇ ಪಣಕ್ಕಿಟ್ಟು ಕೊರೋನಾ ಎನ್ನುವ ಮಾಹಾಮಾರಿ ವಿರುದ್ಧ ಸಮರ ಸಾರಿದ್ದಾರೆ.
ಇನ್ನು ವೈದ್ಯರ ಕಷ್ಟ ಹೇಗಿರುತ್ತೆ ಎನ್ನುವುದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಅನುಭವಕ್ಕೆ ಬಂದಿದೆ. ಆ ಅನುಭವನ್ನು ಸುರೇಶ್ ಕುಮಾರ್ ಅವರು ಸಾಮಾಜೀಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈದ್ಯರು ಪಡುತ್ತಿರುವ ಕಷ್ಟವನ್ನು ಜನರ ಮುಂದಿಟ್ಟಿದ್ದಾರೆ.
ಎಲ್ಲ 30 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲು ಕರ್ನಾಟಕ ಚಿಂತನೆ ?
ಸುರೇಶ್ ಕುಮಾರ್ ಅನುಭವದ ಮಾತು
ರಾಜಾಜಿನಗರದ ESI ಆಸ್ಪತ್ರೆಗೆ ಹೋಗಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಏರ್ಪಡಿಸಿರುವ ಅಗತ್ಯ ವ್ಯವಸ್ಥೆಯನ್ನು ಪರಿಶೀಲಿಸಿದೆ.
ನಾನು ಗಗನಯಾತ್ರಿಗಳ (ಅಸ್ಟ್ರೋನಾಟ್) ರೀತಿಯ ಪೂರ್ಣ ರಕ್ಷಾಕವಚ ಧರಿಸಿಕೊಂಡಾಗ, ಅದನ್ನು ದೀರ್ಘ ಕಾಲ ಧರಿಸಿರಲೇಬೇಕಾದ ವೈದ್ಯರು ಮತ್ತು ದಾದಿಯರ ಪರಿಸ್ಥಿತಿ ಎಷ್ಟು ಕಷ್ಟವಿದೆ ಎಂಬ ಅನುಭವವಾಯಿತು ಎಂದು ತಿಳಿಸಿದ್ದಾರೆ.
ರಾಜಾಜಿನಗರದ ESI ಆಸ್ಪತ್ರೆಗೆ ಹೋಗಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಏರ್ಪಡಿಸಿರುವ ಅಗತ್ಯ ವ್ಯವಸ್ಥೆಯನ್ನು ಪರಿಶೀಲಿಸಿದೆ.
ನಾನು ಗಗನಯಾತ್ರಿಗಳ (ಅಸ್ಟ್ರೋನಾಟ್) ರೀತಿಯ ಪೂರ್ಣ ರಕ್ಷಾಕವಚ ಧರಿಸಿಕೊಂಡಾಗ, ಅದನ್ನು ದೀರ್ಘ ಕಾಲ ಧರಿಸಿರಲೇಬೇಕಾದ ವೈದ್ಯರು ಮತ್ತು ದಾದಿಯರ ಪರಿಸ್ಥಿತಿ ಎಷ್ಟು ಕಷ್ಟವಿದೆ ಎಂಬ ಅನುಭವವಾಯಿತು. pic.twitter.com/XlKu8UWTEl
ಮೋದಿ ಚಪ್ಪಾಳೆ ತಟ್ಟಿಸಿದ್ದು ಇದಕ್ಕೆ
ಹೌದು.. ಇಡೀ ವಿಶ್ವ ಕೊರೋನಾ ವೈರಸ್ ಎಂಬ ಮಹಾಮಾರಿಯ ಕಬಂದಬಾಹುಗಳಲ್ಲಿ ಸಿಕ್ಕು ನರಳಾಡುತ್ತಿದೆ. ಆದರೆ ಎಲ್ಲ ದೇಶಗಳಲ್ಲೂ ವೈದ್ಯ ಸಮುದಾಯ ಅತ್ಯಂತ ದಿಟ್ಟವಾಗಿ ಈ ನರಹಂತಕ ವೈರಾಣುವಿನ ವಿರುದ್ಧ ಹೋರಾಡುತ್ತಿದೆ.
ಕೊರೋನಾ ವೈರಸ್ ವಿರುದ್ಧದ ವೈದ್ಯರ ಹೋರಾಟದ ಕತೆ ಪ್ರತಿಯೊಂದೂ ದೇಶದಲ್ಲೂ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರು ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯ ಸಮುದಾಯಕ್ಕೆ ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿದ್ದರು.
ಕೊರೋನಾ ವಿರುದ್ಧ ಹೋರಾಟಕ್ಕೆ ಉದ್ಯಮಿಗಳು ಸಾಥ್, ಒಬ್ಬರಿಂದ 100 ಕೋಟಿ ಘೋಷಣೆ
ನಿಜಕ್ಕೂ ವೈದ್ಯರು ಪಡುತ್ತಿರುವ ಶ್ರಮ ಯಾವುದಕ್ಕೂ ಹೋಲಿಕೆ ಮಾಡಲು ಆಗದು. ಯಾಕಂದ್ರೆ ಕೊರೋನಾ ಎನ್ನುವುದು ಸಾಂಕ್ರಾಮಿಕ ರೋಗವಾಗಿದ್ದು, ರೋಗಿ ಕೆಮ್ಮಿದ್ರೆ, ಸೀನಿದ್ರೆ ಸಾಕು ಬೇರೆಯವರಿಗೆ ತಗುಲಿಬಿಡುತ್ತೆ. ಹೀಗಿರುವಾಗ ವೈದ್ಯರು ಕೊರೋನಾ ಪೀಡಿತರಿಗೆ ಚಿಕಿತ್ಸೆ ಕೊಡುತ್ತಿರುವುದು ನಿಜಕ್ಕೂ ಒಂದು ಸೆಲ್ಯೂಟ್.
ಸುರಕ್ಷಾ ಕವಚ, ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ದಿನವಿಡೀ ಇರಬೇಕಾಗುತ್ತದೆ. ಇದರು ನೋಡುವವರ ಕಣ್ಣಿಗೆ ಸಹಜವಾಗಿಯೇ ಕಾಣುತ್ತದೆ. ಆದ್ರೆ, ಈ ಬಿರುಬೇಸಿಗೆಯಲ್ಲಿ ಅವುಗಳೆಲ್ಲವನ್ನು ಧರಿಸಿಕೊಂಡು ನೋಡಿ ಅದರ ಕಷ್ಟ ಏನು ಅಂತ ತಿಳಿಯುತ್ತೆ.