ಏಕಾಂಗಿ ಪ್ರತಿಭಟನೆಗೆ ಮುಂದಾದ ವಾಟಾಳ್ ನಾಗರಾಜ್‌ಗೆ ಗೃಹ ಬಂಧನ..!

Suvarna News   | Asianet News
Published : Mar 28, 2020, 02:39 PM IST
ಏಕಾಂಗಿ ಪ್ರತಿಭಟನೆಗೆ ಮುಂದಾದ ವಾಟಾಳ್ ನಾಗರಾಜ್‌ಗೆ ಗೃಹ ಬಂಧನ..!

ಸಾರಾಂಶ

ಲಾಕ್‌ಡೌನ್ ನಡುವೆಯೂ ಪ್ರತಿಭಟನೆಗೆ ಮುಂದಾದ ವಾಟಾಳ್ ನಾಗರಾಜ್ ಇದೀಗ ಗೃಹಬಂಧನಕ್ಕೆ ಒಳಗಾಗಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ಬೆಂಗಳೂರು(ಮಾ.28): ವಿನೂತನ ಪ್ರತಿಭಟನೆಗಳ ಮೂಲಕ ಗಮನ ಸೆಳೆಯುವ ವಾಟಾಳ್ ನಾಗರಾಜ್ ಇದೀಗ ಗೃಹಬಂಧನಕ್ಕೆ ಒಳಗಾಗಿದ್ದಾರೆ.

ಹೌದು, ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಕೊರೋನಾ ವೈರಸ್ ಸಂಬಂಧಿಸಿದಂತೆ 3 ವಿಚಾರಗಳನ್ನು ಇಟ್ಟುಕೊಂಡು ಏಕಾಂಗಿಯಾಗಿ ಪ್ರತಿಭಟಿಸಲು ಮುಂದಾಗಿದ್ದರು. ಆದರೆ ಪೊಲೀಸರು ತಡೆದು ವಾಟಾಳ್ ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ.

ರಸ್ತೆಯಲ್ಲಿ ಓಡಾಡುವವರ ಚಳಿ ಬಿಡಿಸಿದ 'ಕೊರೋನಾ': ಹೊರಗೋಗೋ ಮುನ್ನ ಎಚ್ಚರ!

ಈಗಾಗಲೇ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮೈಸೂರ್ ಬ್ಯಾಂಕ್ ಸರ್ಕಲ್‌ ಬಳಿ ರಾಜ್ಯದಲ್ಲಿ ಮುಚ್ಚಲ್ಪಟ್ಟಿರುವ ದೇವಸ್ಥಾನಗಳನ್ನು ತೆರೆದು ಪೂಜೆ ಮಾಡಬೇಕು, ಕೊರೋನಾ ವಿಚಾರವಾಗಿ ಎಲ್ಲಾ ಕಡೆ ಎಚ್ಚರ ವಹಿಸಬೇಕು ಹಾಗೂ ಪೊಲೀಸರು ನಾಗರೀಕರ ಜತೆ ಸಂಯಮದಿಂದ ವರ್ತಿಸಬೇಕು ಎಂದು ಒತ್ತಾಯಿಸಿ ಏಕಾಂಗಿಯಾಗಿ ಪ್ರತಿಭಟಿಸಲು ಮುಂದಾಗಿದ್ದರು.

144 ಸೆಕ್ಷನ್ ಜಾರಿಯಲ್ಲಿದ್ರೂ ನಮಾಜ್ ಮಾಡಲು ಬಂದವರಿಗೆ ಬಿತ್ತು ಲಾಠಿ ಏಟು!

ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಮನೆಯಿಂದ ಹೊರಹೋಗದಂತೆ ತಡೆದಿದ್ದಾರೆ. ಜತೆಗೆ ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ. 

ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ಯಾರು ಗುಂಪು ಸೇರುವುದಾಗಲಿ, ಪ್ರತಿಭಟಿಸುವುದಾಗಲಿ ಮಾಡುವಂತಿಲ್ಲ. ಈಗಾಗಲೇ ದೇಶದಲ್ಲೂ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ.  
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?