ಕೊರೋನಾ ವಿರುದ್ಧ ಸಮರಕ್ಕೆ ಕೈ ಜೋಡಿಸಿ: ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು|ವೈದ್ಯರು, ಪೌರಕಾರ್ಮಿಕರು, ಆಡಳಿತ ವರ್ಗ, ಪೊಲೀಸರು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲ ಸಹಕಾರ ನೀಡಬೇಕು|
ಧಾರವಾಡ(ಮಾ.29): ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಪ್ರತಿಯೊಬ್ಬ ನಾಗರಿಕರು ವೈಯಕ್ತಿಕ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಂದೇಶ ನೀಡಿದ್ದಾರೆ.
ಕೊರೋನಾ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕು. ವೈದ್ಯರು, ಪೌರಕಾರ್ಮಿಕರು, ಆಡಳಿತ ವರ್ಗ, ಪೊಲೀಸರು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
'ಗೋವಾದಲ್ಲಿ ಆಹಾರ ಸಿಗದೆ ಕಣ್ಣೀರಿಡುತ್ತಿರುವ ಕನ್ನಡಿಗರು'
ಪದೇ ಪದೇ ಮಾರುಕಟ್ಟೆಗೆ ಹೋಗಬಾರದು. ಕೊರತೆಗಳಿದ್ದರೂ ಹೊಂದಾಣಿಕೆ ಮಾಡಿಕೊಳ್ಳಬೇಕು.ಕೂಡಲ ಸಂಗನ ಶರಣರು ಒಲಿಸಲು ಬಂದ ಪ್ರಸಾದ ಕೆಡಿಸಲು ಬಾರದು ಎಂಬ ವಚನವಯ ಅರಿತು ನಡೆಯೋಣ ಎಂದು ಶ್ರೀಗಳು ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.