ಸೋಂಕಿತರ ಫೋಟೋ ವೈರಲ್‌ ಮಾಡಿದ್ದಕ್ಕೆ ಕೇಸ್‌

By Kannadaprabha NewsFirst Published Mar 28, 2020, 7:39 AM IST
Highlights

ಬುಧವಾರ ಮಣಿಪಾಲದಲ್ಲಿ ಪತ್ತೆಯಾದ ಕೊರೋನಾ ರೋಗಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ, ಕಾನೂನು ಉಲ್ಲಂಘಿಸಿದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸರು ಒಂದು ಪ್ರಕರಣ ದಾಖಲಿಸಿದ್ದಾರೆ.

ಉಡುಪಿ(ಮಾ.28): ಬುಧವಾರ ಮಣಿಪಾಲದಲ್ಲಿ ಪತ್ತೆಯಾದ ಕೊರೋನಾ ರೋಗಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ, ಕಾನೂನು ಉಲ್ಲಂಘಿಸಿದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸರು ಒಂದು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯು ಸೋಂಕಿತ ವ್ಯಕ್ತಿಯ ಮಾಹಿತಿ, ಆತನ ಮತ್ತು ಪತ್ನಿಯ ಫೋಟೋವನ್ನು ಅವರ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿದ್ದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ಅವರು ನೀಡಿದ ದೂರಿನಂತೆ ಉಡುಪಿ ಜಿಲ್ಲಾ ಸೈಬರರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ ಎಂದು ಎಎಸ್ಪಿ ಕುಮಾರಚಂದ್ರ ಹೇಳಿದ್ದಾರೆ.

Latest Videos

ಉಡುಪಿ ಮಸೀದಿಗಳು ಕಂಪ್ಲೀಟ್ ಲಾಕ್‌ಡೌನ್‌: ಮನೆಯಲ್ಲಿಯೇ ನಮಾಜ್‌

ಆದ್ದರಿಂದ ಯಾವುದೇ ವ್ಯಕ್ತಿ ವಾಟ್ಸ್‌ಅಪ್‌, ಫೇಸ್‌ಬುಕ್‌ ಹಾಗೂ ಇತರೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕೋರನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಅಥವಾ ಸೋಂಕಿತ ವ್ಯಕ್ತಿಗಳ ಮಾಹಿತಿಯನ್ನು ಅಥವಾ ಫೋಟೋವನ್ನು ಅಥವಾ ಸುಳ್ಳು ಮಾಹಿತಿಗಳನ್ನು ಪ್ರಸರಿಸದಂತೆ ಅವರು ಎಚ್ಚರಿಕೆ ನೀಡಿದ್ದಾರೆ.

click me!