ಲಾಕ್‌ಡೌನ್‌: ಜೆಡಿಎಸ್‌ನಿಂದ ತರಕಾರಿ ವಿತರಣೆ

By Kannadaprabha NewsFirst Published Mar 28, 2020, 8:19 AM IST
Highlights

ಜಾತ್ಯತೀತ ಜನತಾದಳದ ಜಿಲ್ಲಾ ಘಟಕದ ವತಿಯಿಂದ ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಬೊಟ್ಲಪ್ಪ ಪೈಸಾರಿಯ ನಿವಾಸಿಗಳಿಗೆ ತರಕಾರಿಗಳನ್ನು ವಿತರಿಸಲಾಯಿತು.

ಮಡಿಕೇರಿ(ಮಾ.28): ಜಾತ್ಯತೀತ ಜನತಾದಳದ ಜಿಲ್ಲಾ ಘಟಕದ ವತಿಯಿಂದ ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಬೊಟ್ಲಪ್ಪ ಪೈಸಾರಿಯ ನಿವಾಸಿಗಳಿಗೆ ತರಕಾರಿಗಳನ್ನು ವಿತರಿಸಲಾಯಿತು.

ಕೊರೋನಾ ವೈರಸ್‌ ಹರಡದಂತೆ ತಡೆಯಲು ಲಾಕ್‌ಡೌನ್‌ ಆದೇಶ ಜಾರಿಗೆ ತಂದಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದ ಬಡವರು ಹಾಗೂ ಕೂಲಿ ಕಾರ್ಮಿಕರು ಅಗತ್ಯ ವಸ್ತುಗಳು ಲಭಿಸದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡ ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್‌ ನೇತೃತ್ವದ ತಂಡ ಬೊಟ್ಲಪ್ಪ ಪೈಸಾರಿಗೆ ತೆರಳಿ ಸ್ಥಳೀಯರಿಗೆ ತರಕಾರಿಗಳನ್ನು ವಿತರಿಸಿತು.

ಕೇರಳದಿಂದ ನಡೆದುಕೊಂಡು ಕೊಡಗಿಗೆ ಬಂದ 133 ಕಾರ್ಮಿಕರಿಗೆ ಗೃಹಬಂಧನ

ಈ ಸಂದರ್ಭ ಮಾತನಾಡಿದ ಗಣೇಶ್‌ ಅವರು, ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಗ್ರಾಮೀಣ ಪ್ರದೇಶದ ಜನ ಅಗತ್ಯ ವಸ್ತುಗಳು ಲಭಿಸದೆ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರವೇ ಬಡವರು ಹಾಗೂ ಕೂಲಿ ಕಾರ್ಮಿಕ ಕುಟುಂಬಗಳ ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಕಿಟ್‌ನ್ನು ವಿತರಿಸಬೇಕೆಂದು ಒತ್ತಾಯಿಸಿದರು.

ಸೋಂಕಿತರ ಫೋಟೋ ವೈರಲ್‌ ಮಾಡಿದ್ದಕ್ಕೆ ಕೇಸ್‌

ಪ್ರಧಾನ ಕಾರ್ಯದರ್ಶಿ ಎನ್‌.ಸಿ. ಸುನೀಲ್‌, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‌ ಖಾನ್‌, ನಗರ ಯುವ ಘಟಕದ ಅಧ್ಯಕ್ಷ ರವಿಕಿರಣ್‌, ಬೊಟ್ಲಪ್ಪ ಸಂಘದ ಪ್ರಮುಖ ಜೋಯಪ್ಪ ಮತ್ತಿತರರು ಹಾಜರಿದ್ದರು.

click me!